Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, April 9, 2015

SCHOOL DAY PHOTOES










Health day


ಏಪ್ರಿಲ್-7,ವಿಶ್ವ ಆರೋಗ್ಯ ದಿನ
ರೋಗ್ಯವು ಮನುಷ್ಯನ ನಿಜವಾದ ಸಂಪತ್ತು. ಈ ಸಂಪತ್ತು ಇದ್ದರೆ ಮಾತ್ರ  ಇತರ ಸಂಪತ್ತನ್ನು ಗಣಿಸಬಹುದು .ಆಧುನಿಕ ಜೀವನ ಕ್ರಮ ಹಾಗೂ ಆಹಾರ ಪದ್ಧತಿಯಿಂದಾಗಿ ಜನರ ಆರೋಗ್ಯವು ಹದಗೆಡುತ್ತದೆ.ಇದರ ಕುರಿತಾಗಿ ಜಾಗೃತಿ ಮೂಡಿಸಲು ಏಪ್ರೀಲ್-7ನ್ನು ವಿಶ್ವಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ .ಸುಮಾರು ಹನ್ನೊಂದು ಮಿಲಿಯನ್ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಖೇದಕರವಾಗಿದೆ .ವಿಶ್ವದಲ್ಲಿ ಅರ್ಧ ಮಿಲಿಯನ್ ಮಹಿಳೆಯರು ಅನಾರೋಗ್ಯದಿಂದ ಸಾವನ್ನಪ್ಪುತ್ತಿದ್ದಾರೆ.
1948ರ  ಏಪ್ರಿಲ್-7ರಂದು ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯದ ಕುರಿತು  ಜನ ಜಾಗೃತಿ ಮೂಡಿಸಲು ನಿರ್ಧರಿಸಿ ಈ ದಿನಾಚರಣೆಯನ್ನು ಜಾರಿಗೆ ತಂದಿತು.


Eclips


ಚಂದ್ರ ಗ್ರಹಣ

2015ರ ಮೊದಲ ಚಂದ್ರ ಗ್ರಹಣ  ಏಪ್ರಿಲ್ 3ರಂದು ನಡೆಯಿತು.ಜಗತ್ತಿನ ಲಕ್ಷಾಂತರ ಜನರು ವೀಕ್ಷಿಸಿದರು.

Equality day


ಏಪ್ರಿಲ್-5,ರಾಷ್ಟೀಯ ಸಮತಾ ದಿನ

ಮಹಾನ್ ಸ್ವಾತಂತ್ರ್ಯ ಹೋರಾಟಗಾರ,ಸ್ವತಂತ್ರ ಭಾರತದ ನಿರ್ಮಾತೃ ಬಾಬು ಜಗಜೀವನ ರಾಂ,ಅವರ ಜನ್ಮ ದಿನವಾದ ಏಪ್ರಿಲ್-5ನ್ನು ,ರಾಷ್ಟೀಯ ಸಮತಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಕೆಳ ವರ್ಗದ, ಹಿಂದುಳಿದವರ ಸಬಲೀಕರಣಕ್ಕೆ ಹೋರಾಡಿದ ಇವರು ಆಧುನಿಕ ಕೃಷಿಯ ಹರಿಕಾರರೂ ಆಗಿದ್ದಾರೆ.1971ರ ಯುದ್ಧದ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿದ್ದ ಇವರು ಸಂದರ್ಭವನ್ನು ಸೂಕ್ತರೀತಿಯಲ್ಲಿ ನಿಭಾಯಿಸಿ ನಮ್ಮನ್ನು ಮುನ್ನಡೆಸಿದ್ದಾರೆ.

Wednesday, April 1, 2015

School Day Celebration



ಚೇವಾರು ಶಾಲಾ ವಾರ್ಷಿಕೋತ್ಸವ ಸನ್ಮಾನ ಸಮಾರಂಭ
ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀ ನಂದಿಕೇಶನ್ ಅವರಿಂದ ಉದ್ಘಾಟನೆ
ಶಂಕರನಾರಾಯಣ ಭಟ್ ಅವರಿಗೆ ಸನ್ಮಾನ

ಉಪನ್ಯಾಸಕಿ, ಡಾ.ಆಶಾಲತಾ ಅವರಿಗೆ ಸನ್ಮಾನ

ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿತು.ಸಭಾಕಾರ್ಯಕ್ರಮವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್.ಎನ್, ಉದ್ಘಾಟಿಸಿ,ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಉತ್ತಮ ಪಡಿಸಲು,ಪಠ್ಯದೊಂದಿಗೆ,ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು,ಸಾರ್ವಜನಿಕ ವಿದ್ಯಾಲಯಗಳಲ್ಲಿ , ಪಠ್ಯೇತರ ಚಟುವಟಿಕೆಗಳಿಗೆ ಸಾಕಷ್ಟು ಅವಕಾಶಗಳು ಲಭಿಸುತ್ತಿದ್ದು ಇದನ್ನು ಸಮರ್ಪಕವಾಗಿ ಬಳಸಬೇಕೆಂದು ಕರೆಯಿತ್ತರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ, ಪರಮೇಶ್ವರ.ಪಿ.ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪೈವಳಿಕೆ ಪಂಚಾಯತಿನ ಮಾಜಿ ಅಧ್ಯಕ್ಷರಾದ ಅಚ್ಯುತ ಚೇವಾರ್,ರಾಜ್ಯ ಪ್ರಶಸ್ತಿ ವಿಜೇತ,ನಿವೃತ್ತ ಮುಖ್ಯಶಿಕ್ಷಕ ಶಂಕರ ಕಾಮತ್,ಶಾಲಾ ವ್ಯವಸ್ಥಾಪಕ ನಾರಾಯಣ ಭಟ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾಗುತ್ತಿರುವ ಶಿಕ್ಷಕ ಶಂಕರ ನಾರಾಯಣ ಭಟ್ ರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.ಶಾಲೆಯ ಹಳೆ ವಿದ್ಯಾರ್ಥಿನಿ,ಪ್ರಸ್ತುತ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಡಾ.ಆಶಾಲತಾ ಸಿ.ಕೆ.ಯವರನ್ನು ಸನ್ಮಾನಿಸಲಾಯಿತು.ವೈದ್ಯಕೀಯ ವಿದ್ಯಾರ್ಥಿನಿ ವರ್ಷಾ ಪಾವಲುಕೋಡಿ ಹಾಗೂ ಸಮಾಜ ಸೇವಕ ಮೊಯಿದಿನ್ ಕುಂಞ ಚೇವಾರ್ ಇವರನ್ನು ಗೌರವಿಸಲಾಯಿತು.ಪ್ರತಿಭಾವಂತ ಹಳೆ ವಿದ್ಯಾರ್ಥಿಗಳಿಗೆ,ಶಾಲಾ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪೈವಳಿಕೆ ಪಂಚಾಯತು ಸದಸ್ಯರುಗಳಾದ ಸುಬೈದಾ ಯಂ.ಪಿ,ಪುಷ್ಪಾ ಕಮಲಾಕ್ಷ, ಶಾಲಾ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಬ್ದುಲ್ ಕೋಯಾ,ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕ ಶಾಮ ಭಟ್.ಯು,ಅತಿಥಿಗಳನ್ನು ಸ್ವಾಗತಿಸಿದರು.ರವಿಕುಮಾರ್ ಶಾಲಾ ಚಟುವಟಿಕೆಗಳ ವರದಿ ವಾಚಿಸಿದರು.ಸರಸ್ವತಿ ಬಿ.ಸನ್ಮಾನಿತರನ್ನು ಅಭಿನಂದಿಸಿದರು. ಗೋಪಾಲ ಕೃಷ್ಣ ಭಟ್ ವಂದಿಸಿದರು.ವಿನೋದ್ ಚೇವಾರ್ ಕಾರ್ಯಕ್ರಮ ನಿರೂಪಿಸಿದರು.ರಾಜೇಶ್ವರಿ, ಪುಷ್ಪಲತಾ, ಪ್ರವೀಳಾ,ವಿಜಯನ್,ಪ್ರಸಾದ್ ರೈ ಸಹಕರಿಸಿದರು.ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

SCHOOL DAY CELEBRATION

ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ಹಿರಿಮೆ ಉತ್ಸವದ ಉದ್ಘಾಟನಾ ಸಮಾರಂಭ
ಪಿ.ಟಿ.ಎ ಅಧ್ಯಕ್ಷರಿಂದ ಬಹುಮಾನ ವಿತರಣೆ

ಪ್ರಾರ್ಥನೆ

ಧ್ವಜಾರೋಹಣ-ಶಾಲಾ ವ್ಯವಸ್ಥಾಪಕ ಶ್ರೀ ಬಿ.ನಾರಾಯಣ ಭಟ್ ರಿಂದ

ಬಹುಮಾನ ವಿತರಣೆ-ಬಿ.ಪಿ.ಒ,ಶ್ರೀ ವಿಜಯ ಕುಮಾರ್ ರಿಂದ

ನಿರೂಪಣೆ-ವಿನೋದ್ ಮಾಸ್ಟರ್ ರಿಂದ

ಉದ್ಘಾಟನೆ -ಪಂಚಾಯತು ಅಧ್ಯಕ್ಷರಾದ ಮಣಿಕಂಠ ರೈಯವರಿಂದ


ಉದ್ಘಾಟನಾ ಭಾಷಣ

ಬಹುಮಾನ ವಿತರಣೆ



ಮುಖ್ಯ ಅತಿಥಿಗಳ ಭಾಷಣ-ಪೈವಳಿಕೆ KSEB Asst.Engineer,ಕುಮಾರ ಸುಬ್ರಹ್ಮಣ್ಯ ರಿಂದ
 ಕ