Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, September 29, 2014

DASARA NAADA HABBA


ದಸರಾ ನಾಡಹಬ್ಬ- 2014ರ ಆಚರಣೆ


ಅಧ್ಯಕ್ಷರ ಭಾಷಣ

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಜಾನಪದ ಹಾಡು 2ನೇ ತರಗತಿಯ ಚಿನ್ಮಯಿ ಯಿಂದ

ವಂದನಾರ್ಪಣೆ ಶ್ರೀಮತಿ ರಾಜೇಶ್ವರಿಯವರಿಂದ

 ಸ್ವಾಗತ ಭಾಷಣ-ಪ್ರಸಾದ್ ರೈಯವರಿಂದ
ವಿದ್ಯಾಧಿಕಾರಿಯವರಿಂದ ಉದ್ಘಾಟನೆ


ವಿವಿಧ ಸ್ಪರ್ಧೆಗಳು





ಚೇವಾರು: ದಸರಾ ನಾಡಹಬ್ಬ ಆಚರಣೆ

ಚೇ
ವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ ದಸರಾ ನಾಡಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಉದ್ಘಾಟಿಸಿ,ಹಬ್ಬಗಳನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ,ಬೆಳೆಸಬೇಕೆಂದು ಕರೆಯಿತ್ತರು.ಸಭೆಯ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಶ್ರೀ ಶ್ಯಾಮ ಭಟ್,ನಾಡ ಹಬ್ಬವನ್ನು ಶಾಲೆಗಳಲ್ಲಿ ಆಚರಿಸುವುದರಿಂದ ಮಕ್ಕಳು ಸಂಸ್ಕೃತಿಯ ಸಾರ ತಿಳಿಯುವುದರೊಂದಿಗೆ ಉತ್ತಮ ಸಮಾಜ ನಿರ್ಮಿಸಬಹುದೆಂದು ಅಭಿಪ್ರಾಯ ಪಟ್ಟರು.ನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.ಜಾನಪದ ಗೀತೆಗಳನ್ನು ಹಾಡಿದರು.ಪ್ರಸಾದ್ ರೈ ಸ್ವಾಗತಿಸಿ,ರಾಜೇಶ್ವರಿ ವಂದಿಸಿದರು.ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Sunday, September 28, 2014

Bhagath Singh

ಸೆಪ್ಟೆಂಬರ್:28  ಭಗತ್ ಸಿಂಗ್ ಜನ್ಮದಿನ

ಗತ್ ಸಿಂಗ್ ದೇಶಕ್ಕಾಗಿ ತಾರುಣ್ಯದಲ್ಲೇ ಪ್ರಾಣವನ್ನರ್ಪಿಸಿದ ಧೀರೋದ್ಧಾತ ಕ್ರಾಂತಿಕಾರಿ.ಗಾಂಧೀಜಿಯವರ ಅಹಿಂಸಾ ಮಾರ್ಗದಿಂದ ವಿಮುಖರಾಗಿ ಬ್ರಿಟಿಷರ ಪ್ರಾಣವವನ್ನು ತೆಗೆಯಲು ಹಿಂಜರಿಯಲಿಲ್ಲ.
ಭಗತ್ ಸಿಂಗ್ ರು 1907ರ ಸೆಪ್ಟೆಂಬರ್:28  ರಂದು ಪಂಜಾಬಿನ ರೈತ ಕುಟುಂಬದಲ್ಲಿ ಜನಿಸಿದರು.ಜಲಿಯನ್ ಬಾಗಲ್ಲಿ ನಡೆದ ಮಾರಣಹೋಮ ಭಗತ್ ಸಿಂಗ್ ನ ಮನದಲ್ಲಿ ಬ್ರಟಚಿಷರ ವಿರುದ್ಧ ದ್ವೇಷ ಕಾರುವಂತೆ ಮಾಡಿತು.
1928 ರಲ್ಲಿ ಭಾರತ ವಿದ್ಯಮಾನ ಹಾಗೂ ಸ್ವಾತಂತ್ರ್ಯದ ಕುರಿತು ಚರ್ಚಿಸ,ಲು ಸೈಮನ್ ಆಯೋಗ ಬಂದಿತ್ತು.ಇದರಲ್ಲಿ ಭಾರತೀಯರಿಲ್ಲದ ಕಾರಣ ಲಾಲಾಲಜಪತ್ ರಾಯ್ ನೇತೃತ್ವದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಭಗತ್ ಸಿಂಗ್ ರು ಭಾಗವಹಿಸಿದರು. ಭಗತ್ ಸಿಂಗ್,ಚಂದ್ರ ಶೇಖರ ಆಜಾದ್,ರಾಜಗುರು,ಸುಖದೇವ್ ,ಬ್ರಿಟಿಷ್ ಅಧಿಕಾರಿ ಸ್ಕಾಟ್ ನನ್ನು ಕೊಲ್ಲಲು ಯೋಜಿಸಿದರು.ಆದರೆ ಸ್ಕಾಟ್ ಬದಲಿಗೆ ಸ್ಯಾಂಡರ್ಸ ಬಲಿಯಾದನು.ನಂತರ ಶಾಸನ ಸಭೆಯಲ್ಲಿ ಭಗತ್ ಸಿಂಗ್,ತನ್ನ ಸಹಚರರೊಂದಿಗೆ ಕೈ ಬಾಂಬ್ ಎಸೆದರು.ಇದಕ್ಕಾಗಿ ಅವರನ್ನು ಬಂಧಿಸಿದ ಬ್ರಿಟಿಷರು,1931ರ ಮಾರ್ಚ್ 23 ರಂದು, ಭಗತ್ ಸಿಂಗ್ ರನ್ನು ಗಲ್ಲಿಗೇರಿಸಿದರು.ಇಂಕ್ವಿಲಾಬ್ ಜಿಂದಾಬಾದ್ ಎಂದು ಘೋಷಿಸುತ್ತಾ,ಪುನ ಹುಟ್ಟುವುದಾದರೆ ಭಾರತದಲ್ಲೇ ಹುಟ್ಟುತ್ತೇನೆ ಎಂದು ಕೊನೆಯುಸಿರೆಳೆದರು.

Saturday, September 27, 2014

HEALTH CLUB



ಆರೋಗ್ಯ ಕ್ಲಬ್ –ಉತ್ತಮ ಶುಚಿತ್ವ ಗುಂಪುಗಳಿಗೆ ಬಹುಮಾನ ವಿತರಣೆ

ಪ್ರಥಮ ಸ್ಥಾನದ ಬಹುಮಾನ ವಿತರಣೆ

 ದ್ವಿತೀಯಸ್ಥಾನದ ಬಹುಮಾನ ವಿತರಣೆ

ಧನ್ಯವಾದ ಸಮರ್ಪಣೆ

26-09-2024ರಂದು ಆರೋಗ್ಯ ಕ್ಲಬ್ ನ ಆಶ್ರಯದಲ್ಲಿ ಏರ್ಪಡಿಸಲ್ಪಟ್ಟ ಕಾರ್ಯಕ್ರಮದಲ್ಲಿ ಪರಿಸರ ಶುಚಿತ್ವವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಆಗಸ್ಟ್-ಸೆಪ್ಟೆಂಬರ್ ತಿಂಗಳಿನ ಪರಿಸರ ಶುಚಿತ್ವವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ, ಪ್ರಥಮ ಸ್ಥಾನ ಪಡೆದ ಜೈನಬತ್ ಅಸ್ಮೀನಾ ಮತ್ತು ತಂಡದವರಿಗೆ ಹಿರಿಯ ಶಿಕ್ಷಕಿ ಶ್ರೀಮತಿ ಸರಸ್ವತಿ.ಬಿ,ಬಹುಮಾನ ವಿತರಿಸಿ, ಪರಿಸರ ಶುಚಿತ್ವದ ಕುರಿತು ವಿವರಿಸಿದರು.ದ್ವಿತೀಯ ಸ್ಥಾನ ಪಡೆದ ಗೌತಮ್ ಮತ್ತು ತಂಡದವರಿಗೆ, ಶ್ರೀ ವಿಜಯನ್ ಬಹುಮಾನ ವಿತರಿಸಿದರು. ಶಿಕ್ಷಕಿ ಶ್ರೀಮತಿ ರಾಜೇಶ್ವರಿ,ಕಾರ್ಯಕ್ರಮವನ್ನು ಏರ್ಪಡಿಸಿದರು.ಶಿಕ್ಷಕರಾದ ರವಿಕುಮಾರ್,ಪ್ರಸಾದ್ ರೈ ಸಹಕರಿಸಿದರು. ಆರೋಗ್ಯ ಕ್ಲಬ್ ನ ಅಧ್ಯಕ್ಷೆ,ಶಾಲಾ ನಾಯಕಿ, ಜೈನಬತ್ ಅಸ್ಮೀನಾ ಸ್ವಾಗತಿಸಿದಳು. ಆರೋಗ್ಯ ಕ್ಲಬ್ ನವ ಕಾರ್ಯದರ್ಶಿ ಕ್ಷಿತೀಶ ವಂದಿಸಿದನು.

ವಿಶ್ವ ಕಿವುಡರ ದಿನ



ಸೆಪ್ಟೆಂಬರ್:28-ವಿಶ್ವ ಕಿವುಡರ ದಿನ

ಪ್ರತಿ ವರ್ಷ ವಿಶ್ವ ಕಿವುಡರ ದಿನವನ್ನು, ಸೆಪ್ಟೆಂಬರ್ ತಿಂಗಳ ಕೊನೆಯ ಆದಿತ್ಯವಾರ ಆಚರಿಸಲಾಗುತ್ತಿದೆ. ವಿಶ್ವ ಕಿವುಡರ ಫೆಡೆರೇಶನ್ 1958ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಿತು.ಬಳಿಕ ಸೆಪ್ಟೆಂಬರ್ ತಿಂಗಳ ಕೊನೆಯ ವಾರವನ್ನು ವಿಶ್ವ ಕಿವುಡರ ವಾರವನ್ನಾಗಿ ಆಚರಿಸಲಾಯಿತು. ಈವರ್ಷ ಸೆಪ್ಟೆಂಬರ್ 28ರಂದು ಈದಿನವನ್ನು ಆಚರಿಸಲಾಗುತ್ತಿದೆ.
1871ರಲ್ಲಿ ಅಮೇರಿಕಾದ ರಿಚರ್ಡ್ ಸೆಮೌರ್ ರೆಡ್ಮಂಡ್ ಜನಿಸಿದರು. ಬಾಲ್ಯದಲ್ಲಿ ಅವರನ್ನು ಆವರಿಸಿದ ಸ್ಕಾರ್ಲೆಟ್ ಜ್ವರ ಅವರನ್ನು ಕಿವುಡರನ್ನಾಗಿ ಮಾಡಿತು.ಇದರಿಂದ ಧೃತಿಗೆಡದ ಅವರು,ಶಿಕ್ಷಣ ಪಡೆಯಬೇಕೆಂದು ಪಣತೊಟ್ಟರು.ಕುಟುಂಬದ ಹಾಗೂ ಸಮಾಜದ ಅತ್ಯಪೂರ್ವ ಬೆಂಬಲದೊಂದಿಗೆ ಉನ್ನತ ಶಿಕ್ಷಣ ಪಡೆದರು. ಕ್ಯಾಲಿಫೋರ್ನಿಯದ ಸ್ಕೂಲ್ ಆಫ್ ಆರ್ಟ್ ನಲ್ಲಿ,ಪೈಂಟಿಂಗ್,ಡ್ರಾಯಿಂಗ್ ಕಲಿತರು.ಅವರ ಶ್ರಮ, ಕುಟುಂಬದ ಹಾಗೂ ಸಮಾಜದ ಅತ್ಯಪೂರ್ವ ಬೆಂಬಲದಿಂದ ಅವರು ಎಲ್ಲರಂತೆ,ಉನ್ನತ ಸ್ಥಾನ ಪಡೆದರು. ಇವರ ನೆನಪಿಗಾಗಿ ಈ ದಿನ ವನ್ನು ಆಚರಿಸಲಾಯಿತು.


ಪ್ರತಿಯೊಬ್ಬನಿಗೂ ಕೇಳುವ ಸಾಮರ್ಥ್ಯ ಜೀವನದಲಿಲು ಅನಿವಾರ್ಯ.ಕಿವುಡರಲ್ಲಿ,ದುಖ,ಖಿನ್ನತೆ,ಆತಂಕ, ಮತಿವಿಕಲ್ಪಗಳ ಅಪಾಯವಿದೆ. ಕಿವುಡುತನ ಕಾಣಿಸಿಕೊಂಡ ಕೂಡಲೇ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು.ಶಬ್ದ ಮಾಲಿನ್ಯವು ಕಿವುಡುತನ ತರಬಲ್ಲುದು.ಮಕ್ಕಳಲ್ಲಿ,ನಿರಂತರವಾಗಿ ಶೀತ ಬರುವುದರಿಂದ ಮೂಗಿನ ಹಿಂಭಾಗದಲ್ಲಿ ದುಗ್ಧ ಗ್ರಂಥಿ ರಸ ಸಂಗ್ರಹ ವಾಗುತ್ತದೆ.ಇದು ಮೂಗು ಮತ್ತು ಕಿವಿಯ ಕೊಳವೆಯನ್ನು ನಿರ್ಬಂಧಿಸುತ್ತದೆ.ಇದರಿಂದ ವ್ಯಾಕ್ಸಿನ್ ಸಂಗ್ರಹವಾಗಿ,ಇದು ಶ್ರವಣ ದೋಷಕ್ಕೆ ಕಾರಣವಾಗುತ್ತದೆ.