Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, September 29, 2014

DASARA NAADA HABBA


ದಸರಾ ನಾಡಹಬ್ಬ- 2014ರ ಆಚರಣೆ


ಅಧ್ಯಕ್ಷರ ಭಾಷಣ

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಜಾನಪದ ಹಾಡು 2ನೇ ತರಗತಿಯ ಚಿನ್ಮಯಿ ಯಿಂದ

ವಂದನಾರ್ಪಣೆ ಶ್ರೀಮತಿ ರಾಜೇಶ್ವರಿಯವರಿಂದ

 ಸ್ವಾಗತ ಭಾಷಣ-ಪ್ರಸಾದ್ ರೈಯವರಿಂದ
ವಿದ್ಯಾಧಿಕಾರಿಯವರಿಂದ ಉದ್ಘಾಟನೆ


ವಿವಿಧ ಸ್ಪರ್ಧೆಗಳು

ಚೇವಾರು: ದಸರಾ ನಾಡಹಬ್ಬ ಆಚರಣೆ

ಚೇ
ವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ ದಸರಾ ನಾಡಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಉದ್ಘಾಟಿಸಿ,ಹಬ್ಬಗಳನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ,ಬೆಳೆಸಬೇಕೆಂದು ಕರೆಯಿತ್ತರು.ಸಭೆಯ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಶ್ರೀ ಶ್ಯಾಮ ಭಟ್,ನಾಡ ಹಬ್ಬವನ್ನು ಶಾಲೆಗಳಲ್ಲಿ ಆಚರಿಸುವುದರಿಂದ ಮಕ್ಕಳು ಸಂಸ್ಕೃತಿಯ ಸಾರ ತಿಳಿಯುವುದರೊಂದಿಗೆ ಉತ್ತಮ ಸಮಾಜ ನಿರ್ಮಿಸಬಹುದೆಂದು ಅಭಿಪ್ರಾಯ ಪಟ್ಟರು.ನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.ಜಾನಪದ ಗೀತೆಗಳನ್ನು ಹಾಡಿದರು.ಪ್ರಸಾದ್ ರೈ ಸ್ವಾಗತಿಸಿ,ರಾಜೇಶ್ವರಿ ವಂದಿಸಿದರು.ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.

1 comment:

  1. ಹೃತ್ಪೂರ್ವಕ ಅಭಿನಂದನೆಗಳು.

    ReplyDelete