Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, September 25, 2014

BLOG INAUGURATION

ಶಾಲಾ ಬ್ಲಾಗಿನ ಉದ್ಘಾಟನಾ ಸಮಾರಂಭ
ದೊಡ್ಡ ಪರದೆಯಲ್ಲಿ ಶಾಲಾ ಬ್ಲಾಗ್
ಪ್ರಾರ್ಥನೆ

ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾ ಯಂ.ಪಿಯವರಿಂದ ಉದ್ಘಾಟನೆ
ದೀಪ ಬೆಳಗಿಸಿ ಉದ್ಘಾಟನೆ
ಮುಖ್ಯ ಶಿಕ್ಷಕ,ಶ್ರೀ ಶ್ಯಾಮ ಭಟ್ ರಿಂದ ಪ್ರಾಸ್ತಾವಿಕ ನುಡಿ
ಪೈವಳಿಕೆ ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪಾ ಕಮಲಾಕ್ಷ ಅವರಿಂದ ಶುಭಾಶಂಸನೆ
MPTA ಅಧ್ಯಕ್ಷೆ ಶ್ರೀಮತಿ ಇಂದಿರಾಅವರಿಂದ ಶುಭಾಶಂಸನೆ
PTA ಅಧ್ಯಕ್ಷರಾದ ಶ್ರೀ ಪರಮೇಶ್ವರ ಪಾವಲುಕೋಡಿಯವರಿಂದ ಅಧ್ಯಕ್ಷೀಯ ಭಾಷಣ

ಪ್ರಸಾದ್ ರಿಂದ ಧನ್ಯವಾದ ಸಮರ್ಪಣೆ


ಚೇವಾರು ಶಾಲಾ ಬ್ಲಾಗಿನ ಉದ್ಘಾಟನಾ ವರದಿ

ಮಂಜೇಶ್ವರ:  ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ನೂತನ ಬ್ಲಾಗಿನ ಉದ್ಘಾಟನಾ ಸಮಾರಂಭವು ಜರಗಿತು.ಪೈವಳಿಕೆ ಪಂಚಾಯತು ಸದಸ್ಯೆ ಶ್ರೀಮತಿ ಸುಬೈದಾ ಯಂ.ಪಿ.ಉದ್ಘಾಟಿಸಿದರು.ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಪರಮೇಶ್ವರ ಪಾವಲುಕೋಡಿ ಅಧ್ಯಕ್ಷ ಸ್ಥಾನ ವಹಿಸಿದರು.ಪೈವಳಿಕೆ ಕೆ.ಇ.ಬಿ.ಅಸಿಸ್ಟೆಂಟ್ ಇಂಜಿನಿಯರ್ ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್ ಶೈಕ್ಷಣಿಕ ರಂಗದಲ್ಲಿ ಬ್ಲಾಗಿನ ಯೋಗ್ಯಬಳಕೆಯನ್ನು ಶ್ಲಾಘಿಸಿದರು. ಪೈವಳಿಕೆ ಪಂಚಾಯತು ಸದಸ್ಯೆ ಶ್ರೀಮತಿ ಪುಷ್ಪಾ ಕಮಲಾಕ್ಷ,ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಇಂದಿರಾ ಮಿತ್ತಡ್ಕ, ರಕ್ಷಕ-ಶಿಕ್ಷಕ ಸಂಘದ ಸದಸ್ಯರಾದ ಅಬ್ದುಲ್ ಕೋಯಾ, ಶುಭ ಹಾರೈಸಿದರು.ಶಾಲಾ ಮುಖ್ಯ ಶಿಕ್ಷಕ,ಶ್ಯಾಮ್ ಭಟ್,ಅತಿಥಿಗಳನ್ನು ಸ್ವಾಗತಿಸಿ,ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪ್ರಸಾದ್ ರೈ ವಂದಿಸಿದರು.ಸ್ಟಾಫ್ ಕಾರ್ಯದರ್ಶಿ ವಿನೋದ್ ಚೇವಾರ್, ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ರಕ್ಷಕರಿಗೆ ಶಾಲಾ ಚಟುವಟಿಕೆಗಳನ್ನೊಳಗೊಂಡ ಬ್ಲಾಗನ್ನು LCD Projector ಮೂಲಕ ಪ್ರದರ್ಶಿಸಲಾಯಿತು.

No comments:

Post a Comment