Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, January 29, 2015

ಹುತಾತ್ಮರ ದಿನ

ಜನವರಿ 30  ಹುತಾತ್ಮರ ದಿನ

ಹುತಾತ್ಮರ ದಿನ-ಮಹಾತ್ಮಾ ಗಾಂಧೀಜಿಯವರ ಪುಣ್ಯ ಸ್ಮರಣೆ
ಮಹಾತ್ಮಾ ಗಾಂಧೀಜಿಯವರ ಪುಣ್ಯ ಸ್ಮರಣೆ ಅಂಗವಾಗಿ 11 ಗಂಟೆಗೆ ಸರಿಯಾಗಿ 2ನಿಮಿಷಗಳ ಕಾಲ ಮೌನ ಪ್ರಾರ್ಥನೆ ಮಾಡಿ ಅವರ ಆತ್ಮಕ್ಕೆ,ಶಾಂತಿ ಕೋರಲಾಯಿತು.
ಶಾಲಾ ಎಸೆಂಬ್ಲಿಯಲ್ಲಿ ಅವರ ಜೀವನ ಚರಿತ್ರೆಯ ಕುರಿತು ವಿವರಿಸಲಾಯಿತು.

Wednesday, January 28, 2015

SCOUT GUIDE CAMP

ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಸ್ಕೌಟ್ ಗೈಡ್ ರಾಲಿ ಶಿಬಿರದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಪುಟಾಣಿಗಳು

Monday, January 26, 2015

Republic Day

66ನೇ ಗಣರಾಜ್ಯೋತ್ಸವದ ಶುಭಾಶಯಗಳು



REPUBLIC DAY CELEBRATION


ಚೇವಾರಿನಲ್ಲಿ ಗಣರಾಜ್ಯೋತ್ಸವ ಆಚರಣೆ
ಪೈವಳಿಕೆ ಪಂಚಾಯತು ಸದಸ್ಯೆ ಶ್ರೀಮತಿ ಸುಬೈದಾ ಯಂ.ಪಿ.ಯವರಿಂದ ಧ್ವಜಾರೋಹಣ


ದೇಶ ಭಕ್ತಿ ಗೀತೆ- ಮಾಯಿಪ್ಪಾಡಿ ಟಿ.ಟಿ.ಸಿ.ವಿದ್ಯಾರ್ಥಿನಿಯರಿಂದ

ರಕ್ಷಕ-ಶಿಕ್ಷಕರು



ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಗಣರಾಜ್ಯೋತ್ಸವದಂದು ಪೈವಳಿಕೆ ಪಂಚಾಯತು ಸದಸ್ಯೆ ಸುಬೈದಾ ಯಂ.ಪಿ. ಧ್ವಜಾರೋಹಣ ಮಾಡಿದರು.ಮುಖ್ಯ ಶಿಕ್ಷಕ ಶ್ಯಾಮ ಭಟ್,ವಿದ್ಯಾರ್ಥಿ ಜೀವನದಲ್ಲೇ ರಾಷ್ಟ್ರ ಪ್ರೇಮವನ್ನು ಬೆಳೆಸುವ ಮೂಲಕ ಶಾಂತಿಯುತ ಸಮಾಜವನ್ನು ನಿರ್ಮಿಸಬಹುದೆಂದು ಅಭಿಪ್ರಾಯ ಪಟ್ಟರು.ಶ್ರೀಮತಿ ಸರಸ್ವತಿ ಸ್ವಾಗತಿಸಿದರು. ರವಿ ಕುಮಾರ್ ವಂದಿಸಿದರು. ವಿದ್ಯಾರ್ಥಿಗಳಿಂದ ಘೋಷಣಾ ವಾಕ್ಯ,ಪ್ರಬಂಧ ಮಂಡನೆ,ಸಾಂಸೃತಿಕ ಕಾರ್ಯಕ್ರಮ ಜರಗಿದವು.ರಾಜೇಶ್ವರಿ,ಪ್ರಮೀಳಾ,ಪುಷ್ಪಲತಾ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.

VOTER'S DAY


ಜನವರಿ 25,ರಾಷ್ಟ್ರೀಯ ಮತದಾರರ ದಿನ


ಭಾರತವು ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ದೊಡ್ಡ ರಾಷ್ಟ್ರವಾಗಿದೆ.ಜನರಿಂದಲೇ ಜನರಿಗಾಗಿ ಜನರೇ ಆಡಳಿತ ವ್ಯವಸ್ಥೆಯನ್ನು ರೂಪಿಸಿರುವುದು ಇದರ ವೈಶಿಷ್ಠ್ಯವಾಗಿದೆ.ಮತದಾನದ ಮೂಲಕ ನಮ್ಮ ಪ್ರತಿನಿಧಿಗಳನ್ನು ಆರಿಸುವುದು.ಇದಕ್ಕಾಗಿ ಭಾರತೀಯ ಚುನಾವಣಾ ಆಯೋಗವೆಂಬ ಬೃಹತ್ ವ್ಯವಸ್ಥೆ ಇದೆ.ಈ ಆಯೋಗದ ಸಂಸ್ಥಾಪನಾ ದಿನವಾದ ಜನವರಿ 25 ನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ.18 ವರ್ಷ ಪೂರ್ತಿಗೊಂಡ ನಾಗರೀಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಲು ಅರ್ಹರಾಗಿರುತ್ತಾರೆ.

ಮತದಾರರ ಪ್ರತಿಜ್ಞಾ ವಿಧಿ
ಪ್ರಜಾ ಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು,ನಮ್ಮ ದೇಶದ ಪ್ರಜಾ ಸತ್ತಾತ್ಮಕ ಸಂಪ್ರದಾಯಗಳು,ಮುಕ್ತ,ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯಂದು ಚುನಾವಣೆಯಲ್ಲಿ ನಿರ್ಭೀತರೀಗಿ ಧರ್ಮ,ಜನಾಂಗ,ಜಾತಿ,ಮತ ಭಾಷೆ ಅಥವಾ ಯಾವುದೇ ಪ್ರೇರಣೆಗಳ ದಾಕ್ಷೀಣ್ಯ.ಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸುತ್ತೇವೆಯಂದು ಈ ಮೂಲಕಪ್ರತಿಜ್ಞೆ ಸ್ವೀಕರಿಸುತ್ತೇವೆ.

Friday, January 23, 2015

NETHAJI SUBHASH CHANDRA BOSE BIRTH DAY


ಜನವರಿ 23-ನೇತಾಜೀ ಸುಭಾಷ್ ಚಂದ್ರ ಬೋಸ್ ಜನ್ಮ ದಿನ

ನೇತಾಜೀ ಸುಭಾಷ್ ಚಂದ್ರ ಬೋಸ್ ರು 1897ರ ಜನವರಿ 23 ರಂದು ಒಡಿಸ್ಸಾದ ಕಟಕ್ ನಲ್ಲಿ ಜನಿಸಿದರು.ತಂದೆ ಜಾನಕೀನಾಥ್ ಬೋಸ್,ತಾಯಿ ಪ್ರಭಾವತಿ. ಎಳವೆಯಲ್ಲಿಯೇ ದೇಶಪ್ರೇಮವನ್ನು ಬೆಳೆಸಿಕೊಂಡರು.ಫಾರ್ವರ್ಡ್ ಬ್ಲಾಕ್ ಎಂಬ ಕ್ರಾಂತಿಕಾರೀ ಪಕ್ಷವನ್ನು ಸ್ಥಾಪಿಸಿದರು.
1941ರಲ್ಲಿ ಜಪಾನಿಗೆ ತೆರಳಿ ಇಂಡಿಯನ್ ನೇಶನಲ್ ಆರ್ಮಿಯನ್ನು ಸ್ಥಾಪಿಸಿದರು.ಯುವ ಜನರನ್ನು ಒಟ್ಟುಗೂಡಿಸಿ ಹೋರಾಡಿದರು.ಆವರಲ್ಲಿ ಉತ್ತಮ ನಾಯಕತ್ವ ಗುಣವಿತ್ತು.1945ರ ಆಗಸ್ಟ್ 17 ರಂದು ವಿಮಾನ ಅಪಘಾತ ದಲ್ಲಿ ಇಹ ಲೋಕ ತ್ಯಜಿಸಿದರು.