Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, November 30, 2015


ಡಿಸೆಂಬರ್ 3 ಡಾ.ರಾಜೇಂದ್ರ ಪ್ರಸಾದ್ ಜನ್ಮ ದಿನ
ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಗಳಾದ ಡಾ.ರಾಜೇಂದ್ರ ಪ್ರಸಾದರು 1884ರ ಡಿಸೆಂಬರ್ 3 ರಂದು ಜನಿಸಿದರು.ಇವರ ತಂದೆ ಆಯುರ್ವೇದ ವೈದ್ಯರಾಗಿದ್ದರು.ಕಲ್ಕತ್ತಾ ದಲ್ಲಿ ವ್ಯಾಸಂಗ ಮಾಡಿ ಮುಸಾಫರ ನಗರದ ಕಾಲೇಜೊಂದರಲ್ಲಿ ಅಧ್ಯಾಪಕರಾದರು..ನಂತರ ಕಾನೂನು ಪರೀಕ್ಷೆಗೆ ಕೂತು,ವಕೀಲ ವೃತ್ತಿ ಆರಂಭಿಸಿದರು.ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು.
ಭಾರತ 1947ರಲ್ಲಿ ಸ್ವತಂತ್ರವಾದಾಗ ದೇಶದ ಪ್ರಥಮ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದರು.ಇವರು ಒಳ್ಳೆಯ ಬರಹಗಾರರಾಗಿದ್ದರು.ಎಕನಾಮಿಕ್ಸ್ ಆಫ್ ಖಾದಿ ಎಂಬುದು ಅವರ ಭಾಷಣಗಳ ಸಂಗ್ರಹ ಕೃತಿಯಾಗಿದೆ.1963ರ ಮಾರ್ಚ್ 1 ರಂದು ಅಸ್ತಂಗತ ರಾದರು.

Thursday, November 26, 2015

CONSTITUTION DAY CELEBRATION


ನವೆಂಬರ್ 26 ರಾಷ್ಟ್ರೀಯ ಕಾನೂನು ದಿನ (ಸಂವಿಧಾನ ರಚನಾ ದಿನ)
ದೇಶದಾದ್ಯಂತ ನವೆಂಬರ್ 26ನ್ನು ರಾಷ್ಟ್ರೀಯ ಕಾನೂನು ದಿನ (ಸಂವಿಧಾನ ರಚನಾ ದಿನ)ವನ್ನಾಗಿ ಆಚರಿಸಲಾಗುತ್ತಿದೆ.1949ರ ನವೆಂಬರ್ 26ರಂದು ಭಾರತ ಸಂವಿಧಾನ ರಚನಾ ಸಭೆಯು ದೇಶದ ಸಂವಿಧಾನವನ್ನು ಅಂಗೀಕರಿಸಿದ ಕುರುಹಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಕಾನೂನು ಪ್ರತಿಯೊಂದು ದೇಶಕ್ಕೂ ರಕ್ಷೆಯಿದ್ದಂತೆ.ಪ್ರಜೆಗಳ ಹಕ್ಕು ಹಾಗೂ ಕರ್ತವ್ಯಗಳನ್ನು ರಕ್ಷಿಸುವ ಕಾನೂನು,ಅಪರಾಧಿಗಳಿಗೆ ಶಿಕ್ಷೆಯನ್ನೂ ನೀಡುತ್ತದೆ.ಹೀಗಾಗಿ ಕಾನೂನು ಎಂಬುದು ನಾಗರಿಕ ಸರಕಾರದ ಬೆನ್ನೆಲುಬು.ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಕುಸಿದರೆ,ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಬಹುದು.ಬಿಕ್ಕಟ್ಟುಗಳು ಎದುರಾಗಬಹುದು. ಆದ್ದರಿಂದ ಪ್ರತಿಯೊಂದು ದೇಶಕ್ಕೂ ಸದೃಢ ನ್ಯಾಯಾಂಗ ವ್ಯವಸ್ಥೆಯ ಅಗತ್ಯವಿದೆ.
 ಶಾಲೆಯಲ್ಲಿ  ರಾಷ್ಟ್ರೀಯ ಕಾನೂನು ದಿನಾಚರಣೆ
ಶಾಲೆಯಲ್ಲಿ  ವಿಶೇಶ ಎಸೆಂಬ್ಲಿ ನಡೆಸಿ ದಿನದ ಮಹತ್ವವನ್ನು ವಿವರಿಸಲಾಯಿತು.ಸಂವಿಧಾನದ ಕುರಿತಾದ ಚರ್ಚಾಗೋಷ್ಠಿಯನ್ನು ತರಗತಿಯಲ್ಲಿ ಏರ್ಪಡಿಸಲಾಯಿತು.ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು.

Tuesday, November 24, 2015

AWARDS

ಕ್ವಿಜ್ ನಲ್ಲಿ ಬಹುಮಾನ

ರಾಷ್ಟ್ರೀಯ ಅಧ್ಯಾಪಕ ಸಂಘಟನೆ ಏರ್ಪಡಿಸಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಟ್ರೋಫಿ,ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಪಡೆದ ಚೇವಾರು ಶಾಲಾ ವಿದ್ಯಾರ್ಥಿಗಳಾದ ಜ್ಯೋತಿಕಾ ೬ನೇ ತರಗತಿ ಹಾಗೂ ಗೌತಮ್ ೫ನೇ ತರಗತಿ

WORLD TOILET DAY


ನವೆಂಬರ್ ೧೯ ವಿಶ್ವ ಶೌಚಾಲಯ ದಿನ
ಆರೋಗ್ಯವೇ ನಮ್ಮ ನಿಜವಾದ ಸಂಪತ್ತು.ಎಷ್ಟೇ ಸಂಪತ್ತು ಇದ್ದರೂ ಆರೋಗ್ಯವಿಲ್ಲದೇ ಅದನ್ನು ಅನುಭವಿಸಲು ಸಾಧ್ಯವಿಲ್ಲ.ನಮ್ಮ ಶರೀರದೊಳಗೆ ಉತ್ಪತ್ತಿಯಾಗುವ ತ್ಯಾಜ್ಯಗಳು ಅನೇಕ ರೋಗಾಣುಗಳನ್ನು ಕ್ರಿಮಿಗಳನ್ನು ಒಳಗೊಂಡಿವೆ.ಮಲ ಮೂತ್ರಗಳನ್ನು ಬಯಲಿನಲ್ಲಿ ಮಾಡಿದರೆ,ಅದರಲ್ಲಿರುವ ರೋಗಾಣುಗಳು,ಗಾಳಿಯ ಮೂಲಕ ನೀರಿನ ಮೂಲಕ ಹರಡಿ,ವಿವಿಧ ರೋಗಗಳನ್ನು ತರಬಲ್ಲವು.ಆದ್ದರಿಂದ ಈ ಕಾರ್ಯಗಳಿಗೆ ಶೌಚಾಲಯಗಳನ್ನು ಬಳಸ ಬೇಕು.

Monday, November 23, 2015

TRAINING


ಚೇವಾರಿನಲ್ಲಿ ಸಾವಯವ ಕೃಷಿ ಮಾಹಿತಿ ಶಿಬಿರ






20-11-2015ರಂದು, ಶಾಲಾ ವಿದ್ಯಾರ್ಥಿಗಳಿಗಾಗಿ,ಇಕೋ ಕ್ಲಬ್ ವತಿಯಿಂದ ಸಾವಯವ ಕೃಷಿ ಮಾಹಿತಿ ಶಿಬಿರವನ್ನು ಏರ್ಪಡಿಸಲಾಯಿತು.ಶಿಬಿರವನ್ನು ಪೈವಳಿಕೆ  ಕೃಷಿ ಭವನದ ಅಧಿಕಾರಿಗಳು ಶಿಬಿರವನ್ನು ನಡೆಸಿಕೊಟ್ಟರು.ಮಾಜಿ ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪ್ರಧಾನ ಅಧ್ಯಾಪಕರಾದ ಶ್ಯಾಮ ಭಟ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.ಕೃಷಿಗೆ ಯೋಗ್ಯವಾದ ಮಣ್ಣಿನ ಆಯ್ಕೆ,ಬೀಜೋಪಚಾರ,ಸಸ್ಯಗಳ ಬೆಳವಣಿಗೆಗೆ ಬೇಕಾದ ಪೋಷಕ ಅಂಶಗಳು,ಸಾವಯವ ಕೀಟ ನಾಶಕಗಳ ಬಳಕೆ ಮುಂತಾದವುಗಳ ಕುರಿತು ಸವಿವರಗಳನ್ನು ಕೃಷಿ ಅಧಿಕಾರಿಗಳು ನೀಡಿದರು.ಇಕೋ ಕ್ಲಬ್ ಕಾರ್ಯದರ್ಶಿ ಪ್ರಸಾದ್ ರೈ ವಂದಿಸಿದರು.ಸ್ಟಾಫ್ ಕಾರ್ಯದರ್ಶಿ ವಿನೋದ್ ಕಾರ್ಯಕ್ರಮ ನಿರೂಪಿಸಿದರು.

Wednesday, November 18, 2015

INDIRA GANDHI BIRTH DAY


ನವೆಂಬರ್19: ಇಂದಿರಾ ಗಾಂಧಿ ಜನ್ಮದಿನ
ಭಾರತದ ಪ್ರಥಮ ಮಹಿಳಾ ಪ್ರಧಾನಿಯಾದ ಇಂದಿರಾ ಪ್ರಿಯ ದರ್ಶಿನಿ ಯವರು 1917ರ ನವೆಂಬರ್ 19ರಂದು ಅಲಹಾಬಾದಿನಲ್ಲಿ ಜನಿಸಿದರು.ತಂದೆ ಜವಾಹರಲಾಲ್ ನೆಹರು,ತಾಯಿ ಕಮಲಾ ನೆಹರು.ಇಂದಿರಾ ಎಳವೆಯಲ್ಲಿಯೇ ಬ್ರಿಟಿಷ್ ಪ್ರಭುತ್ವದ ವಿರುದ್ಧ ಬಂಡೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡರು.ಇವರ ನಾಯಕತ್ವದಲ್ಲಿ ಮೋಂಕೀ ಬ್ರಿಗೇಡ್ಎಂಬ ಮಕ್ಕಳ ಸೈನ್ಯ ರೂಪುಗೊಂಡಿತು.
1938ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯೆಯಾದರು.ಲಾಲ್ ಬಹದ್ದೂರ್ ಶಾಸ್ತ್ರಿಪ್ರಧಾನಿಯಾಗಿದ್ದ ಮಂತ್ರಿ ಮಂಡಲದಲ್ಲಿ,ಇಂದಿರಾ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು.ಇವರು ಗರೀಬೀ ಹಟಾವೋಎಂಬ ಘೋಷಣಾ ವಾಕ್ಯದೊಂದಿಗೆ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.ಉಗ್ರವಾದಿಗಳ ದಮನಕ್ಕಾಗಿ ಇಂದಿರಾ ಗಾಂಧಿ ಸೇನೆಯನ್ನು ಅಮೃತಸರ್ ಸ್ವರ್ಣ ಮಂದಿರದೊಳಗೆ ಹೊಗಿಸಿದ ಕಾರಣಕ್ಕಾಗಿ,ಸಿಖ್ ಧರ್ಮೀಯರು ಅಸಮಧಾನಗೊಂಡರು.1984ರ ಅಕ್ಟೋಬರ್ 31ರಂದು ಇಹಲೋಕ ತ್ಯಜಿಸಿದರು.

WORLD TOLERANCE DAY


November-16 WORLD TOLERANCE DAY
The human family is very diverse, with many different beliefs and cultures and ways of life. Many conflicts in our world are caused when people are intolerant of the ways that others see the world. Learning tolerance is an important corner stone to create a better world.
What do you mean by tolerance?
UNESCO defines tolerance as ‘respect, acceptance and appreciation of the rich diversity of our world’s cultures, our forms of expression and ways of being human. It is fostered by knowledge, openness, communication and freedom of thought, conscience and belief. It is harmony in difference.
Intolerance is often caused by ignorance and fear. When we do not know about other cultures, religions or nations we fear them. Education helps to promote tolerance in human being. Learning other cultures is also important to develop tolerance.
Tolerance day provides opportunity to see what progress has been made throughout the year and re dedicate our commitment to promote tolerance, respect, co-operation between different cultures in our communities.

Monday, November 16, 2015

ಮಕ್ಕಳ ದಿನಾಚರಣೆ


ಮಕ್ಕಳ ದಿನಾಚರಣೆ- ಪಂಡಿತ್ ಜವಹರಲಾಲ್ ನೆಹರು ಜನ್ಮ ದಿನ
ಜವಹರಲಾಲ್ ನೆಹರುರವರು ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಿಯಾಗಿದ್ದವರು.ಇವರು 1889ರ ನವೆಂಬರ್ 14ರಂದು ಜನಿಸಿದರು.ತಂದೆ ಮೋತಿಲಾಲ್ ನೆಹರು,ತಾಯಿ ಸ್ವರೂಪ ರಾಣಿ.
ನೆಹರುರವರು ಕೇಂಬ್ರಿಜ್ ನಲ್ಲಿ ಉನ್ನತ ಶಿಕ್ಷಣ ಪಡೆದು,ಬ್ಯಾರಿಸ್ಟರ್ ಪದವಿಯೊಂದಿಗೆ ಭಾರತಕ್ಕೆ ಮರಳಿದರು.ಅಲಹಾಬಾದ್ ನಲ್ಲಿ ವಕೀಲರಾಗಿ ವೃತ್ತಿಯನ್ನು ಆರಂಭಿಸಿದರು.1919ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.ಗಾಂಧೀಜಿಯವರಿಂದ ಪ್ರಭಾವಿತರಾದ ಇವರು ಅಹಿಂಸಾತ್ಮಕ ಪ್ರತಿಭಟನೆ,ಸತ್ಯಾಗ್ರಹ,ಅಸಹಕಾರ ಆಂದೋಲನದಲ್ಲಿ ಭಾಗವಹಿಸಿದರು.1947 ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದ ಭಾರತದ ಪ್ರಥಮ ಪ್ರಧಾನಿಯಾದರು.ಔದ್ಯಮೀಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟರು.ಡಿಸ್ಕವರಿ ಆಫ್ ಇಂಡಿಯಾ ಇವರು ಬರೆದ ಕೃತಿಯಾಗಿದೆ. ಪಂಡಿತ್ ಜವಹರಲಾಲ್ ನೆಹರುರವರ ಜನ್ಮ ದಿನವನ್ನು ದೇಶಾದ್ಯಂತ ಮಕ್ಕಳ ದಿನ ವನ್ನಾಗಿ ಆಚರಿಸಲಾಗುತ್ತದೆ.