Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Wednesday, July 29, 2015

I.T.OUIZ COMPETITION


I.T.ಕ್ಲಬ್ ನ ಆಶ್ರಯದಲ್ಲಿ ಐ.ಟಿ.ಕ್ವಿಜ್ ಕಾರ್ಯಕ್ರಮ ಜರಗಿತು
.
28-7-2015 ರಂದು ಶಾಲಾ I.T.ಕ್ಲಬ್ ನ ಆಶ್ರಯದಲ್ಲಿ ಐ.ಟಿ.ಕ್ವಿಜ್ ಕಾರ್ಯಕ್ರಮ ಜರಗಿತು.ರವಿಕುಮಾರ್ I.Tಯ ಪ್ರಾಧಾನ್ಯತೆ ಕುರಿತು ವಿವರಿಸಿ,ಕಾರ್ಯಕ್ರಮ ನಡೆಸಿಕೊಟ್ಟರು. ಐ.ಟಿ.ಕ್ವಿಜ್ ನಲ್ಲಿ ಪ್ರಥಮ ಸ್ಥಾನ,ಮಹಮ್ಮದ್ ಸಮೀರ್,ದ್ವಿತೀಯ ಅನ್ಸಾಫ್,ತೃತೀಯ ಸ್ಥಾನ ಗೌತಮ್ ಪಡೆದರು.ಶಾಲಾ ನಾಯಕ ನಿಶಾದ್ ಸ್ವಾಗತಿಸಿದನು.ಜ್ಯೋತಿಕಾ ವಂದಿಸಿದಳು.

Tuesday, July 28, 2015

Tiger's Day


ಜುಲೈ 29-ಜಾಗತಿಕ ಹುಲಿ ಸಂರಕ್ಷಣಾ ಸಂರಕ್ಷಣಾ ದಿನ.


2010ನೇ ಇಸವಿಯಲ್ಲಿ,ರಷ್ಯಾದಲ್ಲಿ ನಡೆದ ಸಮ್ಮೇಳನದಲ್ಲಿ,ಹುಲಿಗಳ ಸಂರಕ್ಷಣೆ ಬಗ್ಗೆ ಚರ್ಚಿಸಿ, ಜುಲೈ 29ನ್ನು ಜಾಗತಿಕ ಹುಲಿ ಸಂರಕ್ಷಣಾ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಯಿತು.ಈ ಸಮ್ಮೇಳನದಲ್ಲಿ ಭಾರತ ಸೇರಿದಂತೆ ಬಾಂಗ್ಲಾ,ಭೂತಾನ್,ಕಾಂಬೋಡಿಯಾ,ಚೀನಾ,ಇಂಡೋನೇಷ್ಯಾ,ಲಾವೋ,ಮಲೇಶ್ಯಾ,ಬರ್ಮಾ,ನೇಪಾಳ,ಥಾಯಿಲೇಂಡ್,ವಿಯೇಟ್ನಾಂ ಹಾಗೂ ರಷ್ಯಾ ಭಾಗವಹಿಸಿದ್ದವು.
100 ವರ್ಷಗಳ ಹೆಂದೆ,ಜಗತ್ತಿನಾದ್ಯಂತ 1 ಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹುಲಿಗಳು,ಈಗ ಕೇವಲ 3500ರಷ್ಟಿವೆ.ಭಾರತದಲ್ಲಿ 2007ರಲ್ಲಿ 1411 ಹುಲಿಗಳಿದ್ದರೆ,ಈಗ 1706ಕ್ಕೆ ಹೆಚ್ಚಿದೆ.ಕರ್ನಾಟಕದಲ್ಲಿ ,ಬಂಡೀಪುರ,ದಾಂಡೇಲಿ,ಭದ್ರಾ,ನಾಗರ ಹೊಳೆ ಅಭಯಾರಣ್ಯಗಳಲ್ಲಿ ಸಂರಕ್ಷಣಾ ಯೋಜನೆಗಳಿವೆ. ಹುಲಿಗಳ ಸಂಖ್ಯೆ ಕಡಿಮೆಯಾಗಲು ಕಾರಣಗಳೆಂದರೆ,ಅವುಗಳ ಆವಾಸ ಸ್ಥಾನಗಳ ನಾಶ,ಕಳ್ಳ ಬೇಟೆ,ಅಕ್ರಮ ವನ್ಯ ಜೀವಿ ವ್ಯಾಪಾರ,ಮುಂತಾದವುಗಳಾಗಿವೆ.ದೇಶದಲ್ಲಿ ಈಗ 39 ಹುಲಿ ತಾಣಗಳಿವೆ.ವಿಶ್ವದ ಒಟ್ಟು ಹುಲಿಗಳ 50 ಪ್ರತಿಶತ ಹುಲಿಗಳು ಭಾರತದಲ್ಲಿವೆ.ವನ್ಯ ಜೀವಿಗಳ ರಕ್ಷಣೆಗೆ ಅಪೂರ್ವ ಭದ್ರತೆಯ ಅಗತ್ಯವಿದೆ.

ಶ್ರದ್ಧಾಂಜಲಿ


ಭಾರತದ 11ನೇ ರಾಷ್ಟ್ರಪತಿ,ಮಿಸೈಲ್ ಮ್ಯಾನ್ ಅವರ ಆತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ಕರುಣಿಸಲಿ ಎಂದು ಶಾಲಾ ವಿದ್ಯಾರ್ಥಿಗಳು,ಅಧ್ಯಾಪಕ ವೃಂದದವರು ಇಂದು
ಶ್ರದ್ಧಾಂಜಲಿ ಅರ್ಪಿಸಿದರು.

Dr.A.P.J.Abdul Kalam




ಶ್ರದ್ಧಾಂಜಲಿ

ಡಾ.ಎ.ಪಿ.ಜೆ.ಅಬ್ದುಲ್ ಕಲಾಂ




ಸರಳತೆ,ಮೇಧಾ ಶಕ್ತಿ ಮತ್ತು ಮಾನವೀಯತೆಯ ಸಾಕಾರ ಮೂರ್ತಿಯೇ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ.1931 ರ ಅಕ್ಟೋಬರ್ 15 ರಂದು ತಮಿಳುನಾಡಿನ ರಾಮೇಶ್ವರಂ ನಲ್ಲಿ ಜನಿಸಿದರು.ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿಯೇ ವಿದ್ಯಾಭ್ಯಾಸ ಪೂರೈಸಿದರು.ಅವರಲ್ಲಿದ್ದ ಕನಸು,ಗುರಿ, ಪ್ರತಿಭೆಗಳಿಂದಾಗಿ ಮದ್ರಾಸಿನ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಮುಗಿಸಿ,ಸಂಶೋಧನೆಯಲ್ಲಿ ತೊಡಗಿದರು.SLV-IV ಬಾಹ್ಯಾಕಾಶ ಉಡಾವಣೆಯಲ್ಲಿ ಸಕ್ರಿಯ ಪಾತ್ರವಹಿಸಿದರು.ಇಸ್ರೋದಲ್ಲಿ 20ವರ್ಷಗಳ ಸೇವೆಯಲ್ಲಿ ಕ್ಷಿಪಣಿಗಳ ಅಭಿವೃದ್ಧಿಗೆ ನಾಂದಿಹಾಡಿ,Missile Man of India ಎಂಬ ಗೌರವಕ್ಕೆ ಪಾತ್ರರಾದರು.ರಕ್ಷಣಾ ಇಲಾಖೆಯ ವೈಜ್ಞಾನಿಕ ಸಲಹೆಗಾರರಾದರು.ಪೋಖ್ರಾನ್ ನಲ್ಲಿ ಭಾರತವು ಯಶಸ್ವಿಯಾಗಿ ಅಣುಪರೀಕ್ಷೆ ಮಾಡುವಲ್ಲಿ ಕಲಾಂ ಕಾರಣ ಕರ್ತರಾದರು.
ಕಲಾಂ ಅವರು ಭಾರತದ ಹೆಮ್ಮೆಯ ವಿಜ್ಞಾನಿ.ರಾಜಕೀಯ ಮುತ್ಸದ್ದಿ.ಭಾರತದ 11ನೇ ರಾಷ್ಟ್ರಪತಿಯಾಗಿ 202ರ ಜುಲೈ 25 ರಂದು ಆಯ್ಕೆಯಾದರು.30 ವಿಶ್ವ ವಿದ್ಯಾಲಯಗಳಿಂದ ಡಾಕ್ಟರೇಟ್ ಪಡೆದವರು.1997ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದವರು.ಇವರು ಪ್ರಸಿದ್ಧ ಲೇಖಕರಾಗಿದ್ದರು.Wings Of Fire ಇವರ ಆತ್ಮ ಚರಿತ್ರೆ.India-20-20,A vision for new millennium, My journey, Ignited minds-un leaping the power within India ಮುಂತಾದವುಗಳು ಅವರ ಕೃತಿಗಳು.
2015ರ ಜುಲೈ 27ರಂದು ನಮ್ಮನ್ನಗಲಿದರು.
ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕೊಡಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ.

John Daltan day


ಜುಲೈ 27-ಶ್ರೇಷ್ಠ ಅಣುವಿಜ್ಞಾನಿ ಜೋನ್ ಡಾಲ್ಟನ್  ದಿನ
ಜೋನ್ ಡಾಲ್ಟನ್  1766ರಲ್ಲಿ ಕೇಂಬ್ರಿಯದ ಒಂದು ಕುಗ್ರಾಮವಾದ ಈಗಿಸ್ ಫೀಲ್ಡ್ ಎಂಬಲ್ಲಿ ಜನಿಸಿದರು.ಇವರ ತಂದೆ ನೇಯ್ಗೆಗಾರರಾಗಿದ್ದರು.ಅನೇಕ ಪ್ರಯೋಗಗಳ ಮೂಲಕ ,ಮೂಲ ವಸ್ತುಗಳು ಪರಮಾಣುಗಳಿಂದ ರಚಿಸಲಿಪಟ್ಟಿವೆ ಎಂದು ಸಾಧಿಸಿ ತಚೋರಿಸಿದವರು ಜೋನ್ ಡಾಲ್ಟನ್ .
1807ರಲ್ಲಿ ಪರಮಾಣು ಸಿದ್ಧಾಂತವನ್ನು ಮಂಡಿಸಿದರು.ಅವರ ಸಿದ್ದಾಂತದ ಪ್ರಕಾರ,
1)    ಎಲ್ಲಾ ಪದಾರ್ಥಗಳು ಪರಮಾಣುಗಳೆಂಬ ಅತೀ ಸೂಕ್ಷ್ಮ ಕಣಗಳಿಂದ ರಚಿಸಲ್ಪಟ್ಟಿವೆ.
2)    ಪರಮಾಣುಗಳನ್ನು ಸೃಷ್ಟಿಸಲೂ ಸಾಧ್ಯವಿಲ್ಲ,ನಾಶಪಡಿಸಲೂ ಸಾಧ್ಯವಿಲ್ಲ.
3)    ಒಂದು ಮೂಲ ವಸ್ತುವಿನ,ಎಲ್ಲಾ ಪರಮಾಣುಗಳಿಗೂ,ಒಂದೇ ರೀತಿಯ ಗುಣಗಳಿವೆ.
4)    ಪರಮಾಣುಗಳ ಗಾತ್ರ,ಸ್ವಭಾವ,ದ್ರವ್ಯರಾಶಿಗಳಲ್ಲಿ ಬದಲಾವಣೆ ಇಲ್ಲ.
5)    ಪರಮಾಣುಗಳು ಸೇರಿ,ಅಣುಗಳು ಉಂಟಾಗುತ್ತವೆ.
      ರಸಾಯನ ಶಾಸ್ತ್ರಕ್ಕೆ ಅವರ ಕೊಡುಗೆ ಅಪಾರ.