Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Saturday, May 30, 2015

Welcome

ಪ್ರವೇಶೋತ್ಸವ-2015-16


ಹಾರ್ದಿಕ ಸ್ವಾಗತ

Wednesday, May 27, 2015

TEACHER EMPOWERMENT TRAINING


ಸಮಗ್ರ ಅಧ್ಯಾಪಕ ಪರಿವರ್ತನೋನ್ಮುಖ ಶಿಬಿರ-2015
ಗಣಿತ ಹಸ್ತಪತ್ರಿಕೆ ಬಿಡುಗಡೆ

ಬೇಸಿಗೆ ರಜಾ ಕಾಲದ ಐದು ದಿನಗಳ ಸಮಗ್ರ ಗಣಿತ ಅಧ್ಯಾಪಕ ಪರವರ್ತನೋನ್ಮುಖ ಶಿಬಿರವು 19-5-2015ರಂದು 10 ಗಂಟೆಗೆ ಸರಿಯಾಗಿ ಮಂಜೇಶ್ವರ S.A.T.ಶಾಲೆಯಲ್ಲಿ ,ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್.ಎನ್ ಹಾಗೂ B.P.O.ಶ್ರೀ ವಿಜಯ ಕುಮಾರ್ ರವರ ಉಪಸ್ಥಿತಿಯಲ್ಲಿ ಆರಂಭಗೊಂಡಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಡಯಟ್ ಮಾಯಿಪ್ಪಾಡಿಯ ಶ್ರೀ ಅರವಿಂದ ಮಾಸ್ಟರ್, ಶ್ರೀ ಭಾಸ್ಕರ ಮಾಸ್ಟರ್, ಶ್ರೀ ಶ್ರೀಧರ ಭಟ್ ಮಾಸ್ಟರ್ ಮತ್ತು ಶ್ರೀಮತಿ ಚಂದ್ರಿಕಾ ಟೀಚರ್ ತರಬೇತಿಯನ್ನು ನಡೆಸಿಕೊಟ್ಟರು.
ಮೊದಲಿಗೆ ಭಾಸ್ಕರ ಮಾಸ್ಟರ್, ಐದು ದಿನಗಳ ಶಿಬಿರದ ಸ್ಥೂಲ ಪರಿಚಯ ಮಾಡಿಕೊಟ್ಟರು. ತರಬೇತಿಯ ಉದ್ದೇಶಗಳಾದ ಗಣಿತ ಕಲಿಕಾ ಸಮೀಪನದ ಅನುಷ್ಠಾನ,ಐ.ಸಿ.ಟಿ.ಯಬಳಕೆ,ಉನ್ನತ ಚಿಂತನಾ ಸಾಮರ್ಥ್ಯಕ್ಕೆ ಸಹಾಯಕವಾಗುವ ಚಟುವಟಿಕೆಗಳ ಯೋಜನೆ,ನಿರಂತರ,ಟರ್ಮ್ ಮೌಲ್ಯ ನಿರ್ಣಯ,ನೂತನ ಪಠ್ಯಕ್ರಮದಲ್ಲಿ ಅಳವಡಿಸಲಾದ ಸಂಖ್ಯಾ ಲೋಕ,ಬೀಜೀಯ ವಾಚಕಗಳ ಕುರಿತಾದ ಹೆಚ್ಚಿನವ ಮಾಹಿತಿ,ಸಮಾಜ-ಶಾಲೆಗಳ ಸಂಬಂಧಗಳನ್ನು ಗಟ್ಟಿಗೊಳಿಸುವುದು,ಪೋರ್ಟ್ ಪೋಲಿಯೋ ಉತ್ತಮ ಪಡಿಸುವಿಕೆ ಮುಂತಾದ ಉದ್ದೇಶಗಳ ಕುರಿತು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಚಂದ್ರಿಕಾ ಟೀಚರ್,ಎಲ್ಲರಿಗೂ ಗಣಿತ ಸಮಸ್ಯೆಗಳನ್ನೊಳಗೊಂಡ ಚೀಟಿ ವಿತರಿಸಿ,ಬಿಡಿಸಲು ಸೂಚಿಸಿದರು.ಕೆಲವೇ ಕ್ಷಣಗಳಲ್ಲಿ ಎಲ್ಲರೂ ಉತ್ತರ ಕಂಡುಹಿಡಿದರು.ಉತ್ತರವಾಗಿ ಲಭಿಸಿದ ಸಂಖ್ಯೆಗಳಿಗನುಸಾರ 5 ಗುಂಪುಗಳನ್ನು ರಚಿಸಿದರು.ಪ್ರತಿ ಗುಂಪಿಗೂ ಲೀಡರ್ಗಳನ್ನು ಆರಿಸಲಾಗಿ,ಪ್ರತಿದಿನ ಗುಂಪುಗಳಲ್ಲಿ Documentation,TLM,Puzzle,ICT maths,session review  ಮುಂತಾದವುಗಳನ್ನು ಮಂಡಿಸುವ ಜವಾಬ್ದಾರಿ ನೀಡಲಾಯಿತು.ಮುಖ್ಯ ಶಿಕ್ಷಕ ಶ್ರೀನಿವಾಸರನ್ನು ನಾಯಕರನ್ನಾಗಿ ಆರಿಸಲಾಯಿತು.
ಪೈತಗೋರಸನ ಸಿದ್ದಾಂತದ ಪ್ರಾಯೋಗಿಕತೆ,ಸಂಖ್ಯೆಗಳ ಚಮತ್ಕಾರ,ಭಿನ್ನರಾಶಿಗಳ ಕ್ರಿಯೆ,ಬೀಜ ಗಣಿತ ಮುಂತಾದವುಗಳ ಕುರಿತು ಚರ್ಚಿಸಲಾಯಿತು.
ಜಿಯೋಜಿಬ್ರಾ ಗಣಿತ ಸೋಫ್ಟ್ ವೇರ್ ಮೂಲಕ ಗಣಿತವನ್ನು ಹೇಗೆ ಪರಿಣಾಮಾತ್ಮಕವಾಗಿ ಕಲಿಸಬಹುದೆಂಬುದನ್ನು ತಿಳಿಸಿದರು.
ಶಾಲೆ,ಸಮಾಜ ಸಂಬಂಧವನ್ನು ಉತ್ತಮಗೊಳಿಸುವುದು,ಅಂಗವೈಕಲ್ಯಕ್ಕೆ ಕಾರಣರಾದ ಮಕ್ಕಳನ್ನು ಪ್ರಮುಖ ವಾಹಿನಿಗೆ ತರುವುದರ ಬಗ್ಗೆಯೂ ಚರ್ಚಿಸಲಾಯಿತು.
ಕೊನೆಯ ದಿನ ಶಿಬಿರಾರ್ಥಿಗಳು ತಯಾರಿಸಿದ ಗಣಿತ ಹಸ್ತ ಪತ್ರಿಕೆಯನ್ನು ಉಪಜಿಲ್ಲಾ ವಿದ್ಯಾಧಿಕಾರಿಯವರು ಬಿಡುಗಡೆ ಗೊಳಿಸಿದರು.
23-5-2015ರಂದು ಎಲ್ಲಾ ಶಿಬಿರಾರ್ಥಿಗಳಿಗೂ, ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್.ಎನ್,ಪ್ರಮಾಣ ಪತ್ರಗಳನ್ನು ವಿತರಿಸುವ ಮೂಲಕ ಶಿಬಿರಕ್ಕೆ ಮಂಗಳ ಹಾಡಿದರು.