Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, September 23, 2014

Distribution of seeds


ಕೃಷಿ ಭವನದಿಂದ ತರಕಾರಿ ಬೀಜ ವಿತರಣಾ ಕಾರ್ಯಕ್ರಮ

ಕೃಷಿ ಭವನದಿಂದ ಒದಗಿಸಲ್ಪಟ್ಟ ತರಕಾರಿ ಬೀಜಗಳ ವಿತರಣಾ ಸಮಾರಂಭವು ಶಾಲಾ ಸಭಾಂಗಣದಲ್ಲಿ ಜರಗಿತು.ಸಭಾಕಾರ್ಯಕ್ರಮವನ್ನು,ಉದ್ಘಾಟಸಿ, ತರಕಾರಿ ಬೀಜಗಳನ್ನು ವಿತರಿಸಿ, ಮಾತನಾಡಿದ ವಾರ್ಡ್ ಮೆಂಬರ್ ಶ್ರೀಮತಿ ಸುಬೈದಾ ಟೀಚರ್,ಮನೆಯ ಪರಿಸರದಲ್ಲಿ ತರಕಾರಿ ಗಿಡಗಳನ್ನು ಬೆಳೆಸುವ ಮೂಲಕ ತಾಜಾ ತರಕಾರಿಗಳನ್ನು ಪಡೆಯುವುದರೊಂದಿಗೆ ಉತ್ತಮ ಆರೋಗ್ಯವನ್ನು ಪಡೆಯಬಹುದೆಂದರು.ಸಭೆಯ ಅದ್ಯಕ್ಷ ಸ್ಥಾನವನ್ನು ವಹಿಸಿದ, ಪೈವಳಿಕೆ ಕೃಷಿ ಭವನದ ಅಧಿಕಾರಿ ಶ್ರೀಮತಿ ಉಷಾ ಅವರು, ತರಕಾರಿ ಗಿಡಗಳನ್ನು ಬೆಳೆಸುವ ಬಗ್ಗೆ ಮಾಹಿತಿ ನೀಡಿದರು.ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಶಾಮ್ ಭಟ್,ಅತಿಥಿಗಳನ್ನು ಸ್ವಾಗತಿಸಿದರು.ರವಿ ಕುಮಾರ್ ವಂದಿಸಿದರು.ವಿನೋದ್ ಚೇವಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

No comments:

Post a Comment