Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, December 15, 2016

AWARDS


ಮಂಜೇಶ್ವರ ಉಪಜಿಲ್ಲಾ ಮಟ್ಟದ ಉರ್ದು ಸಮೂಹ ಗಾನ ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ನಮ್ಮ ಶಾಲಾ ವಿದ್ಯಾರ್ಥಿನಿಯರು
ಫಾತಿಮತ್ ಜಲೀಲ,ಆಯಿಶತ್ ಮುಫೀದ,ಸಬಾನ,ಅಝೀಬಾ,ಆಯಿಷತ್ ರಷೀದ,ಶಮ್ಲ

Tuesday, December 13, 2016

HARITHA KERALA PROGRAMME

ಚೇವಾರು ಶಾಲೆಯಲ್ಲಿ ಹಸಿರು ಕೇರಳ ಅಭಿಯಾನಕ್ಕೆ ಚಾಲನೆ
ಕೇರಳ ಸರಕಾರದ ಮಹತ್ವದ ಯೋಜನೆಯಾದ ಹಸಿರು ಕೇರಳಅಭಿಯಾನದ ಅಂಗವಾಗಿ,ದಿನಾಂಕ 8-12-2016ರಂದುಶಾಲೆಯಲ್ಲಿ ವಿಶೇಷ ಎಸಂಬ್ಲಿಯನ್ನು ಏರ್ಪಡಿಸಲಾಯಿತು.ಹಸಿರು ಕೇರಳ ಯೋಜನೆಯ ಮಹತ್ವವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಮ್ ಭಟ್ ವಿವರಿಸಿದರು.ಸ್ಕೌಟ್ ಅಧ್ಯಾಪಕರಾದ ವಿನೋದ್,ಘೋಷಣಾ ವಾಕ್ಯಗಳನ್ನು ಹೇಳಿದರು.ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣಾ ಪ್ರತಿಜ್ಞೆಯನ್ನು ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಕೈಗೊಂಡರು.

ಶಾಲಾ ಎಸೆಂಬ್ಲಿಯಲ್ಲಿ ಪರಿಸರ ಸಂರಕ್ಷಣಾ ಪ್ರತಿಜ್ಞೆ

ಹಸಿರು ಕೇರಳ ಜಾಥಾ
ಹಸಿರು ಕೇರಳ ಯೋಜನೆಯ ಅಂಗವಾಗಿ ,ಶಾಲೆಯ ವಿದ್ಯಾರ್ಥಿಗಳಿಂದ ರಕ್ಷಕರಿಂದ ಶಿಕ್ಷಕರಿಂದ ಮೆರವಣಿಗೆಯನ್ನು ಏರ್ಪಡಿಸಲಾಯಿತು. ಮುಖ್ಯ ಶಿಕ್ಷಕರಾದ ಶ್ಯಾಮ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪರಿಸರ ಸಂರಕ್ಷಣಾ ಘೋಷಣೆ ಹಾಗೂ ವಿವಿಧ ಪ್ಲಕಾರ್ಡ್ ಗಳಿಂದ ಪರಿಸರ ಸಂರಕ್ಷಣೆ ಹಾಗೂ ಜಲ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.
ಪರಿಸರ ಸಂರಕ್ಷಣಾ ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು

ಹಸಿರು ಕೇರಳದ ಅಂಗವಾಗಿ ವಿಶೇಷ ಸ್ವಚ್ಛತಾ ಕಾರ್ಯಕ್ರಮ
ಹಸಿರು ಕೇರಳ ಯೋಜನೆಯ ಅಂಗವಾಗಿ ,ಶಾಲೆಯ ವಿದ್ಯಾರ್ಥಿಗಳಿಂದ ರಕ್ಷಕರಿಂದ ಶಿಕ್ಷಕರಿಂದ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು.ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳು ನೇತೃತ್ವವನ್ನು ವಹಿಸಿದರು.

AWARDS

ಪ್ರತಿಭಾನ್ವಿತರು


ಧರ್ಮತ್ತಡ್ಕ ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ, ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದ ನಾಟಕ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ ಪಡೆದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಗೀತಾಂಜಲಿ ಕೆ.ವಿ.,ಚೈತನ್ಯ.ಯಂ,ಪೂರ್ಣಿಮಾ ಕೆ.ಯಂ,ದೃಶ್ಯ ಕಿರಣ್.ಕೆ,ಮಿಥುನ್.ಪಿ,ಸುಮಂತ್.ಪಿ,ಗೌತಮ್.ಎಸ್ ಹಾಗೂ ತುಷಾರ್.ಯಂ.
Add caption
 ಧರ್ಮತ್ತಡ್ಕ ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ,ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದ ದೇಶ ಭಕ್ತಿ ಗೀತೆ ಹಾಡುವ ಸ್ಪರ್ಧೆಯಲ್ಲಿ ಎ ಗ್ರೇಡ್  ಪಡೆದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಅನುಜಾಕ್ಷಿ,ಪೂರ್ಣಿಮಾ,ನವ್ಯಶ್ರೀ,ವಿಂದ್ಯಾ.ಕೆ,ಮಿಥುನ್,ಪ್ರಜ್ವಲ್,ಗೌತಮ್

Sunday, October 30, 2016

CELEBRATION OF EKATA DIVAS

ರಾಷ್ಟ್ರೀಯ ಏಕತಾ ದಿನಾಚರಣೆ 
ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭ ಬಾಯ್ ಪಟೇಲರ ಜನ್ಮ ದಿನವನ್ನು,ಶಾಲೆಯಲ್ಲಿ ವಿಶೇಷ ಎಸೆಂಬ್ಲಿ ನಡೆಸಿ ಸರ್ದಾರ್ ವಲ್ಲಭ ಬಾಯ್ ಪಟೇಲರ ಜೀವನ ಚರಿತ್ರೆಯನ್ನು ವಿವರಿಸಲಾಯಿತು.ರಾಷ್ಟ್ರೀಯ ಏಕತೆಯನ್ನು ಉಳಿಸಿ ರಕ್ಷಿಸುವ ಕುರಿತಾದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.

Wednesday, October 26, 2016

AWARDS IN MATHS SEMINAR

ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ಸೆಮಿನಾರ್ ನಲ್ಲಿ ತೃತೀಯ ಸ್ಥಾನ ಪಡೆದ ಜ್ಯೋತಿಕಾ ಸಿ.ಟಿ.

AWARDS IN IT FAIR

ಸರಕಾರಿ ಹಯರ್ ಸೆಕೆಂಡರಿ ಶಾಲೆ ಪೈವಳಿಕೆ(ಕಾಯರ್ಕಟ್ಟೆ)ಯಲ್ಲಿ ಜರಗಿದ  ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಂಪ್ಯೂಟರ್  ಟೈಪಿಂಗ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಪ್ರಶಸ್ತಿ ಪಡೆದ 7ನೇ ತರಗತಿ ವಿದ್ಯಾರ್ಥಿ ಅಬ್ದುಲ್ ನವಾಸ್.ಒ