ಚೇವಾರು : ಶಾಲಾ ಅಭಿವೃದ್ಧಿ
ಸೆಮಿನಾರ್
ಚೇವಾರು ಶ್ರೀ ಶಾರದಾ
ಎ.ಯು.ಪಿ.ಶಾಲೆಯಲ್ಲಿ ಜರಗಿದ ಶಾಲಾ ಅಭಿವೃದ್ಧಿ ಸೆಮಿನಾರನ್ನುಮಂಜೇಶ್ವರ ಬ್ಲಾಕ್ ಪಂಚಾಯತು
ಅಧ್ಯಕ್ಷರಾದ ಕೆ.ಯಂ.ಅಶ್ರಫ್ ಉದ್ಘಾಟಿಸಿದರು.ಸಮಾಜದ ಆಸ್ತಿಯಾದ ಸಾರ್ವಜನಿಕ ವಿದ್ಯಾಲಯಗಳನ್ನು
ಉಳಿಸಿ ಬೆಳೆಸುವಲ್ಲಿ ಎಲ್ಲರೂ ಭಾಗಿಗಳಾಗಬೇಕೆಂದು ಕರೆಕೊಟ್ಟರು.ಪೈವಳಿಕೆ ಪಂಚಾಯತು ಸದಸ್ಯರಾದ
ಹರೀಶ್ ಬೊಟ್ಟಾರಿ ಅಧ್ಯಕ್ಷತೆವಹಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ ಪಂಚಾಯತು
ಅಧ್ಯಕ್ಷರಾದ ಅಚ್ಯುತ್ ಚೇವಾರ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕುಮಾರ
ಸುಬ್ರಹ್ಮಣ್ಯ,ಉಪಾಧ್ಯಕ್ಷ ಅಬ್ದುಲ್ ಅಸೀಸ್,ಬಶೀರ್ ಶುಭಹಾರೈಸಿದರು.ರಕ್ಷಕ ಶಿಕ್ಷಕ ಸಂಘದ
ಅಧ್ಯಕ್ಷೆ ಇಂದಿರಾ ಮಿತ್ತಡ್ಕ,ಉಪಾಧ್ಯಕ್ಷೆ ಪುಷ್ಪಾ ಕಮಲಾಕ್ಷ,ಶಂಕರ ನಾರಾಯಣ ಭಟ್
ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ್ ಭಟ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.ರವಿಕುಮಾರ್
ವಂದಿಸಿದರು.ವಿನೋದ್ ಚೇವಾರ್ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಅಭಿವೃದ್ಧಿ ಯೋಜನೆಯನ್ನು ತಯಾರಿಸಿ
ಅಂಗೀಕರಿಸಲಾಯಿತು.
No comments:
Post a Comment