Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, November 6, 2014

C.V.RAMAN BIRTH DAY CELEBRATION.

ನವೆಂಬರ್ 7: ಸಿ.ವಿ.ರಾಮನ್ ಜನ್ಮ ದಿನ
 ವಿಜ್ಞಾನ ಲೋಕದ ‘ಮಹಾ ಬೆಳಕು’ 

ಸರ್ ಸಿ.ವಿ.ರಾಮನ್ ಭಾರತದಲ್ಲಷ್ಟೇ ಅಲ್ಲದೆ ಇಡೀ ಏಷ್ಯಾದಲ್ಲಿ ಮೊತ್ತ ಮೊದಲಿಗೆ ಭೌತ ವಿಜ್ಞಾನದಲ್ಲಿ ನೋಬೆಲ್ ಪುರಸ್ಕಾರ ಪಡೆದು ಭಾರತದ ಕೀರ್ತಿಯನ್ನು ಪ್ರಪಂಚದ ಉದ್ದಗಲಕ್ಕೂ ಬೆಳಗಿದ ಪ್ರಚಂಡ ಪ್ರತಿಭೆಯ ಸರ್ ಸಿ.ವಿ.ರಾಮನ್ ಅವರು ಹುಟ್ಟಿದ್ದು ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಚಿರಾಪಲ್ಲಿ ಸಮೀಪದ ಅಯ್ಯನ ಪಟ್ಟಿ ಗ್ರಾಮದಲ್ಲಿ 1888ರ ನವೆಂಬರ್ 7ರಂದು.ತಂದೆ ಚಂದ್ರಶೇಖರ ಅಯ್ಯರ್.ವೃತ್ತಿಯಲ್ಲಿ ಭೌತ ಶಾಸ್ತ್ರ ಪ್ರಾಧ್ಯಾಪಕರು.ತಾಯಿ ಪಾರ್ವತಿ ಅಮ್ಮಾಳ್. 1928ನೇ ಇಸವಿಯು  ಭಾರತವು ವಿಜ್ಞಾನ ಇತಿಹಾಸದ ಹೆದ್ದಾರಿಯಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸಿದ ವಿಶಿಷ್ಟ ವರ್ಷ. ವಿಜ್ಞಾನ ಕ್ಷೇತ್ರದ ಸುವರ್ಣ ಕಾಲ.ಆ ವರ್ಷ ಫೆಬ್ರವರಿ 28 ರಂದು ಬೆಂಗಳೂರಿನ ಭೌತ ಶಾಸ್ತ್ರ ಸಂಘದವರು ಏರ್ಪಿಸಿದ ಕಾರ್ಯಕ್ರಮದಲ್ಲಿ ರಾಮನ್ನರು ಬೆಳಕಿನ ಕುರಿತು ತಮ್ಮದೇ ಆವಿಷ್ಕಾರದ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿದರು.ಇದೇ ಸಿದ್ಧಾಂತ ಮುಂದೆ ರಾಮನ್ ಪರಿಣಾಮ ಎಂದು ಜಗತ್ಪ್ರಸಿದ್ಧವಾಯಿತು.ಈ ಆವಿಷ್ಕಾರದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಡಗಿನಲ್ಲಿ ಪ್ರಯಾಣ ಮ ಡುತ್ತಿದ್ದ ವೇಳೆ ಅವರು ಸಮುದ್ರದ ನೀರನ್ನೇ ಗಮನಿಸುತ್ತಾ ಅದರ ಬಣ್ಣ ನೀಲಿಯಾಗಿರುವುದೇಕೆ,ಎಂದು ಚಿಂತಿಸಿದರು.ಸೂರ್ಯನ ರಶ್ಮಿಯ ಬೆಳಕು ನೀರಿನಲ್ಲಿ ಹರಡಿ ಹೋಗಿರುವುದೇ ಕಾರಣ ಎಂದು ಕಂಡು ಹಿಡಿದರು. ಈ ವಿಷಯವನ್ನು ಆಳವಾಗಿ ಚಿಂತಿಸಿ’,ದಿ ಕಲರ್ ಆಫ್ ದ ಸೀ’ ಎಂಬ ಪ್ರಬಂಧವನ್ನು ಬರೆದು ನೇಚರ್ ಪತ್ರಿಕೆಗೆ ಕೆಳುಹಿಸಿದರು

No comments:

Post a Comment