Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, February 12, 2015

CHARLS DARVIN BIRTH DAY


ಫೆಬ್ರವರಿ 12 ಚಾರ್ಲ್ಸ್ ಡಾರ್ವಿನ್ ಜನ್ಮ ದಿನ
ಚಾರ್ಲ್ಸ್ ಡಾರ್ವಿನ್

ಬಾಲಕನಾಗಿದ್ದಾಗ ಡಾರ್ವಿನ್

ವಿಕಾಸ ವಾದ ವನ್ನು ಮಂಡಿಸಿದ ಪ್ರಸಿದ್ಧ ಬ್ರಿಟಿಷ್ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್,1809ರ ಫೆಬ್ರವರಿ 12 ರಂದು ಷ್ರೂಸ್ ಬರ್ಗ್ ಎಂಬಲ್ಲಿ ಜನಿಸಿದರು.ಬಾಲ್ಯದಲ್ಲೇ ನಿಸರ್ಗದ ಬಗ್ಗೆ ಕುತೂಹಲವನ್ನು ಬೆಳೆಸಿದ್ದ. ಷ್ರೂಸ್ ಬರ್ಗ್, ಎಡಿನ್ ಬರ್ಗ್,ಕೇಂಬ್ರಿಜ್ ಗಳಲ್ಲಿ ವಿದ್ಯಾರ್ಜನೆ ಮಾಡಿದ್ದ.1931ರಲ್ಲಿ ಬೀಗಲ್ ಎಂಬ ಹಡಗಿನಲ್ಲಿ 5 ವರ್ಷಗಳ ಕಾಲ ವಿಶ್ವ ಪರ್ಯಟನೆ ಮಾಡಿ,ಅಳಿದ ವಿವಿಧ ಪ್ರಾಣಿಗಳ ಮೂಳೆಗಳನ್ನು ಸಂಗ್ರಹಿಸಿ ಅಧ್ಯಯನ ಮಾದಿ ವಿಕಾಸ ವಾದದ ಕುರಿತು ಪ್ರಬಂಧ ಬರೆದ.ಈ ಸಮಯದಲ್ಲಿ ಆಲ್ಫ್ರಡೆ ವಾಲೇಸ್ ಎಂಬ ನಿಸರ್ಗ ತಜ್ಞರೊಂದಿಗೆ ಸೇರಿ ಜೀವಿಗಳ ಇತಿಹಾಸದಲ್ಲಿ ಆದ ಬದಲಾವಣೆಗಳನ್ನು ಕುರಿತು ಅಧ್ಯಯನ ಮಾಡಿದರು.1859ರಲ್ಲಿ ವಿಕಾಸ ವಾದ ನ್ಯಮಗಳನ್ನು ದಿ ಒರಿಜನ್ ಆಫ್ಸ್ಪಿಸೀಸ್ ಬೈ ನ್ಯಾಚುರಲ್ ಸೆಲೆಕ್ಷನ್ ಎಂಬ ಪ್ರಸಿದ್ಧ ಕೃತಿಯಲ್ಲಿ ಮಂಡಿಸಿದ.ಜೀವಿಗಳ ವಿಭಿನ್ನ ರೂಪಗಳು ಮೂಲ ರೂಪವನ್ನು ಹೊಂದಿ ವಿಕಾಸ ಹೊಂದಿದೆ,ಸಮರ್ಥ ಜೀವಿಗಳಷ್ಟೇ ಬಾಳಬಲ್ಲವು ಎಂದು ಕಂಡು ಹಿಡಿದ.ಡಿಸೆಂಟಿ ಆಫ್ ಮ್ಯಾನ್,ದಿ ಪವರ್ ಆಫ್ ಮೂವ್ ಮೆಂಟ್ ಇನ್ ಪ್ಲಾಂಟ್ಸ್ ಮುಂತಾದ ಕೃತಿಗಳನ್ನು ಬರೆದ.ಮಣ್ಣಿನ ಹುಳುಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ ಎಂದು ಕಂಡು ಹಿಡಿದ.1882ರ ಏಪ್ರಿಲ್ 19 ರಂದು ಇಹ ಲೋಕ ತ್ಯಜಿಸಿದ.

No comments:

Post a Comment