ಚೇವಾರು ಶಾಲೆಯಲ್ಲಿ ಇಂಗ್ಲಿಷ್ ಹಾಗೂ ಗಣಿತ ಸಬಲೀಕರಣ
ಕಾರ್ಯಕ್ರಮದ ಉದ್ಘಾಟನೆ
ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ,ಇಂಗ್ಲಿಷ್ ಹಾಗೂ ಗಣಿತ ವಿಷಯಗಳನ್ನು ಸರಳವಾಗಿ ಹಾಗೂ
ರಸವತ್ತಾಗಿ ಕಲಿಸುವ ವಿಶೇಷ ತರಬೇತಿ ಯೋಜನೆಯ
ಉದ್ಘಾಟನಾ ಸಮಾರಂಭ ಇತ್ತೀಚೆಗೆ ಜರಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಯಟ್
ಮಾಯಿಪ್ಪಾಡಿಯಉಪನ್ಯಾಸಕ ಡಾ.ರಘುರಾಮ ಭಟ್,ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೊಳ್ಳಲು
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗಬೇಕಾಗಿದ್ದು,ಇಂತಹ ತರಬೇತಿ ಯೋಜನೆಗಳು ಸಹಕಾರಿ ಎಂದು
ಅಭಿಪ್ರಾಯಪಟ್ಟರು.ಪೈವಳಿಕೆ ಪಂಚಾಯತು ಸದಸ್ಯರಾದ ಹರೀಶ್
ಬೋಟ್ಟಾರಿ,ಇಂಗ್ಲಿಷ್ ಹಾಗೂ ಗಣಿತದಂತಹ ಕಠಿಣ ವಿಷಯಗಳನ್ನು ಸರಳವಾಗಿ ಬೋಧಿಸಿ ವಿದ್ಯಾರ್ಥಿಗಳಿಗೆ
ಮನದಟ್ಟುಮಾಡುವಲ್ಲಿ ಈ ಯೋಜನೆಯು ಪೂರಕವಾಗಿದೆ ಎಂದು ತಿಳಿಸಿದರು.ಮಂಜೇಶ್ವರ ಬಿ.ಆರ್.ಸಿ.ಯ
ಪ್ರೋಗ್ರಾಂ ಆಫೀಸರ್ ಶ್ರೀಮತಿ ರೋಜಾ ಶುಭಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಇಂದಿರಾ
ಮಿತ್ತಡ್ಕ ಅಧ್ಯಕ್ಷ ಸ್ಥಾನವಹಿಸಿದರು. ಪೈವಳಿಕೆ ಪಂಚಾಯತಿನ ಮಾಜಿ ಸದಸ್ಯೆ ಸುಬೈದಾ ಯಂ.ಪಿ,ರಕ್ಷಕ
ಶಿಕ್ಷಕ ಸಂಘದ ಉಪಾಧ್ಯಕ್ಷ ಕುಮಾರಸುಬ್ರಹ್ಮಣ್ಯ ಉಪಸ್ಥಿತರಿದ್ದರು.ಶಾಲಾ ಮುಖ್ಯಶಿಕ್ಷಕ ಶ್ಯಾಮ
ಭಟ್ ಸ್ವಾಗತಿಸಿ,ಯೋಜನೆಯ ರೂಪುರೇಷೆಯನ್ನು ವಿವರಿಸಿದರು.ಸ್ಟಾಫ್ ಕಾರ್ಯದರ್ಶಿ ರವಿಕುಮಾರ್ ಶಾಲಾ
ಚಟುವಟಿಕೆಗಳ ಮಾಹಿತಿ ನೀಡಿದರು.ಶಿಕ್ಷಕಿ ಸರಸ್ವತಿ .ಬಿ.ವಂದಿಸಿದರು.ಸ್ಕೌಟ್ ಅಧ್ಯಾಪಕ ವಿನೋದ್
ಕಾರ್ಯಕ್ರಮ ನಿರೂಪಿಸಿದರು. ಶಿಕ್ಶಕಿ ರಾಜೇಶ್ವರಿ,ಪ್ರಸಾದ್ ರೈ,ವಿಜಯನ್,ಪ್ರಮೀಳಾ,ಪುಷ್ಪಲತಾ
ಹಾಗೂ ಗೋಪಾಲಕೃಷ್ಣ ಭಟ್ ಸಹಕರಿಸಿದರು.
No comments:
Post a Comment