Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Wednesday, August 17, 2016

INDEPENDENCE DAY CELEBRATION

70ನೇ ಸ್ವಾತಂತ್ರ್ಯೋತ್ಸವದ ಆಚರಣೆ


ಚೇವಾರು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 70ನೇ ಸ್ವಾತಂತ್ರ್ಯೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಪೈವಳಿಕೆ ಪಂಚಾಯತು ಸದಸ್ಯರಾದ ಹರೀಶ್ ಬೊಟ್ಟಾರಿಯವರು ಧ್ವಜಾರೋಹಣಮಾಡಿ ಜಾತಿ ಮತ ಭೇದವಿಲ್ಲದೆ ಎಲ್ಲರೂ ಎಳವೆಯಲ್ಲಿಯೇ ದೇಶಪ್ರೇಮವನ್ನು ಬೆಳೆಸುವ ಮೂಲಕ ಸುಭದ್ರವಾದ ದೇಶವನ್ನು ಕಟ್ಟಬೇಕೆಂದು ಕರೆ ನೀಡಿದರು.ಪೈವಳಿಕೆ ಪಂಚಾಯತಿನ ಮಾಜಿ ಅಧ್ಯಕ್ಷರಾದ ಅಚ್ಯುತ ಚೇವಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ,ಆಧುನಿಕ ತಂತ್ರಜ್ಞಾನವನ್ನು ದೇಶದ ಒಳಿತಿಗಾಗಿ ಬಳಸುವ ಮೂಲಕ ದೇಶದ ಅಖಂಡತೆಯನ್ನು ಉಳಿಸಿ ಬೆಳೆಸಬಹುದೆಂದು ಅಭಿಪ್ರಾಯಪಟ್ಟರು.ಮಾಜಿ ವಾರ್ಡ್ ಸದಸ್ಯೆ ಸುಬೈದಾ ಯಂ.ಪಿ.ಶುಭಹಾರೈಸಿದರು.ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಬಳಿಕ ಆಕರ್ಷಕ ಸ್ವಾತಂತ್ರ್ಯೋತ್ಸವ ಮೆರವಣಿಗೆ,ಸ್ವಾತಂತ್ರ್ಯ ಸಂಗ್ರಾಮದ ವೀಡಿಯೋ ಪ್ರದರ್ಶನ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.ಮುಖ್ಯ ಶಿಕ್ಷಕರು ಸ್ವಾಗತಿಸಿ ರಾಜೇಶ್ವರಿ ವಂದಿಸಿದರು.ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ-ಪುಟಾಣಿಗಳಿಂದ

ಸಾಂಸ್ಕೃತಿಕ ಕಾರ್ಯಕ್ರಮ-ಪುಟಾಣಿಗಳಿಂದ

ಸಾಂಸ್ಕೃತಿಕ ಕಾರ್ಯಕ್ರಮ-ಪುಟಾಣಿಗಳಿಂದ

No comments:

Post a Comment