Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, October 13, 2015

SHIVARAMA KARANTHA BIRTHDAY


ಅಕ್ಟೋಬರ್ 10,ಡಾ.ಶಿವರಾಮ ಕಾರಂತ ಜನ್ಮ ದಿನ

ಕೋಟ ಶಿವರಾಮ ಕಾರಂತರು ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು.1902ರ ಅಕ್ಟೋಬರ್ 10ರಂದು ಉಡುಪಿ ಜಿಲ್ಲೆಯಲ್ಲಿ,ಶಿವರಾಮ ಕಾರಂತರು ಜನಿಸಿದರು.ಕಾಲೇಜು ಶಿಕ್ಷಣದ ಸಮಯದಲ್ಲಿ,ಮಹಾತ್ಮಾ ಗಾಂಧೀಜಿಯವರ ಕರೆಗೆ ಓಗೊಟ್ಟು,ಬ್ರಿಟಿಷರ ವಿರುದ್ಧ ಹೋರಾಡಿದರು.ಅಸಹಕಾರ ಚಳವಳಿ,ಖಾದಿ ಮತ್ತು ಸ್ವದೇಶಿ ವಸ್ತುಗಳ ಬಳಕೆಗೆ ಕರೆಯಿತ್ತರು.ಆಗಲೇ ಸಾಹಿತ್ಯ ಕೃಷಿ ಆರಂಭಿಸಿದ್ದರು.
ಮೂಕಜ್ಜಿಯ ಕನಸು,ಮರಳಿ ಮಣ್ಣಿಗೆ,ಬೆಟ್ಟದ ಜೀವ,ಅಳಿದ ಮೇಲೆ,ಸ್ವಪ್ನದ ಹೊಳೆ,ಸರಸಮ್ಮನ ಸಮಾಧಿ ಮುಂತಾದ ಅನೇಕ ಕೃತಿಗಳನ್ನು ರಚಿಸಿದರು.ಯಕ್ಷ ಗಾನ ನಾಟಕಗಳಲ್ಲಿ ಭಾಗವಹಿಸಿದರು.95ರ ಇಳಿ ವಯಸ್ಸಿನಲ್ಲೂ ಪಕ್ಷಿಗಳ ಕುರಿತು ಸಂಶೋಧನೆ ಮಾಡಿ ಬರೆದರು.
ನಾಡು ಮೆಚ್ಚಿದ ಬುದ್ಧಿ ಜೀವಿ,ನಡೆದಾಡುವ ವಿಶ್ವಕೋಶ,ಜ್ಞಾನ ಪೀಠ ಪ್ರಶಸ್ತಿ ವಿಜೇತ ಡಾಕ್ಟರ್ ಶಿವರಾಮ ಕಾರಂತರ ಜೀವನ ನಮಗೆ ದಾರಿ ದೀಪವಾಗಿದೆ.

No comments:

Post a Comment