Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Sunday, June 14, 2015

SCHOOL ELECTION


ಶಾಲಾ ನಾಯಕನ ಚುನಾವಣೆ 2015-16
I SCHOOL LEADER-MOHAMMAD NISHAD VII STD



II SCHOOL LEADER-ABDUL NAWAZ VI Std

III SCHOOL LEADER-ASHWINI B.VII STD

ಈ ಶಾಲಾ ವರ್ಷದ ಶಾಲಾ ನಾಯಕನ ಚುನಾವಣೆಯು ಘೋಷಣೆಯಾಗಿ, ನಾಮಪತ್ರ ಸಲ್ಲಿಸಲು ದಿನ ನಿಗದಿಪಡಿಸಲಾಯಿತು. ನಾಮಪತ್ರ ಹಿಂಪಡೆಯಲೂ ದಿನ ನಿಗದಿಪಡಿಸಲಾಗಿ,ಅಂತಿಮವಾಗಿ  .6 ಜನ ಅಭ್ಯರ್ಥಿಗಳು  ಚುನಾವಣಾಕಣದಲ್ಲಿದ್ದರು. ಎಲ್ಲಾ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಿ,ಪ್ರಚಾರಕ್ಕೆ ಅನುವು ಮಾಡಿಕೊಡಲಾಯಿತು. ಚುನಾವಣಾ ದಿನದಂದು, 3ನೇ ತರಗತಿಯಂದ 7ನೇತರಗತಿ ವರೆಗಿನ ಎಲ್ಲಾ ಮತದಾರರು ಸರದಿ ಸಾಲಿನಲ್ಲಿ ನಿತ್ತು ಚುನಾವಣಾಧಿಕಾರಿಗಳಿಂದ,ಮತದಾರರ ಚೀಟಿ ಪಡೆದು,ಎಡಕೈ ನಡು ಬೆರಳ ತುದಿಗೆ ಅಳಿಸಲಾರದ ಶಾಯಿಯನ್ನು ಹಾಕಿಸಿ,ಚುನಾವಣಾ ಸೀಲನ್ನು ಪಡೆದು,ಗೌಪ್ಯವಾಗಿ ತಮಗಿಷ್ಟವಾದ ಅಭ್ಯರ್ಥಿಗಳಿಗೆ, ಸೀಲನ್ನು ಒತ್ತಿ, ಚೀಟಿಯನ್ನು ಮಡಚಿ ಮತ ಪೆಟ್ಟಿಗೆಗೆ ಹಾಕಿ ಹೊರ ಬಂದಾಗ,ಚುನಾವಣಾ ವ್ಯವಸ್ಥೆಯ ಕುರಿತಾದ ಜ್ನಾನವನ್ನು ಪಡೆದ ಸಂತೃಪ್ತಿ ಮಕ್ಕಳ ಮುಖದಲ್ಲಿ,ನಲಿದಾಡುತ್ತಿತ್ತು.ತದನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆದ ಮತ  ಎಣಿಕೆ ಮಾಡಿ ವಿಜೇತರ ಹೆಸರನ್ನು ಘೋಷಿಸಲಾಯಿತು.
ಶಾಲಾ ನಾಯಕನಾಗಿ 7ನೇ ತರಗತಿಯ ಮಹಮ್ಮದ್ ನಿಶಾದ್, ದ್ವಿತೀಯ ನಾಯಕ ನಾಗಿ 6ನೇ ತರಗತಿಯ ಮಹಮ್ಮದ್ ನವಾಸ್ ,ತೃತೀಯ ನಾಯಕಿಯಾಗಿ 7ನೇ ತರಗತಿಯ ಅಶ್ವಿನಿ ಬಿ ಜಯಗಳಿಸಿದರು.ಇವರನ್ನು ಅಭಿನಂದಿಸಲಾಯಿತು.

No comments:

Post a Comment