Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Wednesday, December 31, 2014

RAMANUJAN BIRTHDAY


ಡಿಸೆಂಬರ್ 22 ಮಹಾನ್ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಜನ್ಮ ದಿನ

ಗಣಿತದಲ್ಲಿ ಅಪಾರ ಪಾಂಡಿತ್ಯವನ್ನು ಸ್ವಂತವಾಗಿ ಗಳಿಸಿಕೊಂಡಿದ್ದ ಶ್ರೀನಿವಾಸ ರಾಮಾನುಜನ್ ಅಲ್ಪಾಯುವಾಗಿ ತೀರಿಕೊಂಡರು.ಚಿಕ್ಕ ವಯಸ್ಸಿಗೆ ಅವರು ಗಣಿತದ ಬಹು ದೊಡ್ಡ ಸಮಸ್ಯೆಗಳನ್ನು ಬಿಡಿಸ ಬಲ್ಲವರಾಗಿದ್ದರು.1887 ಡಿಸೆಂಬರ್ 22ರಂದು ತಮಿಳುನಾಡಿನ ಕುಂಭಕೋಣಂನಲ್ಲಿ ಶ್ರೀನಿವಾಸ ರಾಮಾನುಜನ್ ಜನಿಸಿದರು.ತಂದೆ ಶ್ರೀನಿವಾಸ ಅಯ್ಯಂಗಾರ್,ತಾಯಿ ನಾಮ ಗಿರಿ ದೇವಿ.1903ರಲ್ಲಿ ಶ್ರೀನಿವಾಸ ರಾಮಾನುಜನ್ ಮೆಟ್ರಿಕ್ಯುಲೇಶನ್ ಮುಗಿಸಿದರು.ಆ ವೇಳೆಗೆ ಅವರು ಲೋನಿ ಎಂಬಾತನ ಟ್ರಿಗ್ನೋಮೆಟ್ರಿ ಹಾಗೂ ಕಾರ್ ಎಂಬ ಲೇಖನ Synopsis of pure and applied Mathematics ಎಂಬ ಗ್ರಂಥವನ್ನು ಓದಿ ಅರ್ಥೈಸಿಕೊಂಡಿದ್ದರು
.ಗಣಿತದಲ್ಲಿ ಅವರಿಗೆ ವಿಶೇಷ ಆಸಕ್ತಿ ಇತ್ತು.ಹೀಗಾಗಿ ಉಳಿದ ವಿಷಯಗಳಲ್ಲಿ ಅವರು ಸಾಕಷ್ಟು ಅಂಕಗಳನ್ನು ಗಳಿಸಲಾಗುತ್ತಿರಲಿಲ್ಲ.ಅವರ ದುರ್ದೈವದಿಂದ ಎಫ್.ಎ.ಪರೀಕ್ಷೆ ಕೂಡಾ ಪಾಸಾಗಲಿಲ್ಲ.ಜೀವನೋಪಾಯಕ್ಕೆ ಒಂದು ಸಣ್ಣ ಕೆಲಸ ಹಿಡಿದರು.

No comments:

Post a Comment