ಚೇವಾರು ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ
ಚೇವಾರು ಶ್ರೀ ಶಾರದಾ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ವಿಶ್ವ ಯೋಗ ದಿನಾಚರಣೆಯನ್ನು ಶಾಸ್ತ್ರೀಯವಾಗಿ
ಆಚರಿಸಲಾಯಿತು.ಶಾಲಾ ಮುಖ್ಯ ಶಿಕ್ಷಕ ಶ್ರೀ ಶ್ಯಾಮ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಯೋಗಾಭ್ಯಾಸದ
ಮಹತ್ವವನ್ನು ವಿವರಿಸಿದರು.ಮುಖ್ಯ ಅತಿಥಿಗಳಾಗಿ ಮಾಜಿ ಪಂಚಾಯತು ಸದಸ್ಯೆ ಸುಬೈದಾ ಟೀಚರ್,ಸ್ಕೌಟ್
ಶಿಕ್ಷಕ ವಿನೋದ್ ಉಪಸ್ಥಿತರಿದ್ದರು. ಸ್ಟಾಫ್ ಕಾರ್ಯದರ್ಶಿ ರವಿಕುಮಾರ್
ಸ್ವಾಗತಿಸಿದರು.ಪುಷ್ಪಲತಾ. ಕೆ.ವಿ.ವಂದಿಸಿದರು.ಯೋಗಾಚಾರ್ಯ ದಿನಕರ ಕಾಮತ್ ಚೇವಾರ್ ಯೋಗ
ಪ್ರದರ್ಶನಕ್ಕೆ ನೇತೃತ್ವ ನೀಡಿದರು.ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು.
No comments:
Post a Comment