ಚೇವಾರಿನಲ್ಲಿ ವಾಚನಾ ಸಪ್ತಾಹದ ಸಮಾರೋಪ
ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿ.ಎನ್.ಪಣಿಕ್ಕರ್ ರವರ ಸ್ಮರಣಾರ್ಥ
ನಡೆದ ವಾಚನಾ ಸಪ್ತಾಹದ ಸಮಾರೋಪ ಸಮಾರಂಭ ಶಾಲಾ
ಸಭಾಂಗಣದಲ್ಲಿ ಜರಗಿತು.ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ವಹಿಸಿದರು. ಮುಖ್ಯಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಶಿಕ್ಷಕ
ಶಂಕರನಾರಾಯಣ ಭಟ್, ಮಕ್ಕಳ ಸ್ವಂತ ರಚನೆಗಳ ಸಂಗ್ರಹ ಧ್ವನಿ ಮತ್ತು ಜ್ಞಾನದೀವಿಗೆ ಎಂಬ ಹಸ್ತ ಪತ್ರಿಕೆಗಳನ್ನು ಬಿಡುಗಡೆ
ಮಾಡಿದರು.ಮಾಜಿ ಪಂಚಾಯತು ಸದಸ್ಯೆ ಸುಬೈದಾ ಹಾಗೂ ಹಿರಿಯ ಶಿಕ್ಷಕಿ ಸರಸ್ವತಿ ಶುಭ ಹಾರೈಸಿದರು. ವಾಚನಾ
ವಾರದ ಅಂಗವಾಗಿ ನಡೆದ ಕವಿತಾ ರಚನೆ,ಕಥಾ ರಚನೆ,ರಸಪ್ರಶ್ನೆ,ಚಿತ್ರ ರಚನೆ,ಪುಸ್ತಕ
ವಿಮರ್ಶೆ,ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಅಧ್ಯಾಪಕ
ವಿನೋದ್,ರವಿಕುಮಾರ್ ಉತ್ತಮ ಪುಸ್ತಕಗಳ ಕುರಿತು ವಿವರಿಸಿದರು.ವಿಜಯನ್,ರತೀಶ್ ಉಪಸ್ಥಿತರಿದ್ದರು.ಶಿಕ್ಷಕಿ
ಪ್ರಮೀಳಾ ಸ್ವಾಗತಿಸಿದರು.ಪ್ರಸಾದ್ ರೈ ವಂದಿಸಿದರು.ಶಿಕ್ಷಕಿ ಪುಷ್ಪಲತ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು,
No comments:
Post a Comment