ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯು,ಕಾಸರ ಗೋಡು ಜಿಲ್ಲೆ,ಮಂಜೇಶ್ವರ
ತಾಲೂಕು,ಪೈವಳಿಕೆ ಪಂಚಾಯತಿನ, ಪ್ರಸಿದ್ಧ ಪ್ರವಾಸಿ ಕೇಂದ್ರ ಪೊಸಡಿ ಗುಂಪೆಯ ತಪ್ಪಲಿನಲ್ಲಿ ನೆಲೆ
ನಿಂತಿದ್ದು,ಸುಮಾರು 90 ವರ್ಷಗಳ ಇತಿಹಾಸವನ್ನು ಹೊಂದಿದೆ.ಬೀಡುಬೈಲು, ದಿವಂಗತ ಶ್ಯಾಂ ಭಟ್ಟ್
ರಿಂದ ಸ್ಥಾಪಿಸಲ್ಪಟ್ಟ ಈ ವಿದ್ಯಾಲಯದ,ಈಗಿನ ವ್ಯವಸ್ಥಾಪಕರಾಗಿ ಶ್ರೀ ಬಿ.ನಾರಾಯಣ ಭಟ್ ಕಾರ್ಯ
ನಿರ್ವಹಿಸುತ್ತಿದ್ದಾರೆ.ಪ್ರಸ್ತುತ 150 ಮಕ್ಕಳು ಸದ್ರಿ ಶಾಲೆಯಲ್ಲಿ ವಿದ್ಯಾರ್ಜನೆ
ಮಾಡುತ್ತಿದ್ದು,12 ಮಂದಿ ಶಿಕ್ಷಕ-ಶಿಕ್ಷಕಿಯರು ಕೆಲಸ ನಿರ್ವಹಿಸುತ್ತಿದ್ದಾರೆ.
ಈ ಶಾಲೆಯು ಗ್ರಾಮೀಣ ಪ್ರದೇಶದಲ್ಲಿದ್ದು ಸಾವಿರಾರು ಮಂದಿಗೆ ಉತ್ತಮ ಸಂಸ್ಕಾರಯುತ
ಶಿಕ್ಷಣವನ್ನು ನೀಡುತ್ತಾ ಬಂದಿದೆ.ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ
ಕ್ಷೇತ್ರಗಳಲ್ಲಿ ದುಡಿಯುತ್ತಿದ್ದು,ಶಾಲೆಗೆ ಉತ್ತಮ ಹೆಸರು ತಂದಿದ್ದಾರೆ.ವಿದ್ಯಾರ್ಥಿಗಳ
ಸರ್ವತೋಮುಖ ಅಭಿವೃದ್ಧಿಯ ಗುರಿ ನಮ್ಮದಾಗಿದ್ದು,ಕಲೋತ್ಸವ,ಆಟೋಟ,ವೃತ್ತಿ ಪರಿಚಯ ಮೇಳ,ಗಣಿತ,ವಿಜ್ಞಾನ,ಸಮಾಜಮೇಳ,ವಿದ್ಯಾರಂಗ,ಸ್ಕೌಟ್-ಗೈಡ್,
ವಿವಿಧ ಶಿಬಿರಗಳಲ್ಲಿ ಮಕ್ಕಳಿಗೆ ಭಾಗವಹಿಸಲು ಮುಕ್ತ ಅವಕಾಶ
ಲಭಿಸುತ್ತಿದ್ದು,ಪ್ರಶಸ್ತಿ,ಬಹುಮಾನಗಳನ್ನು ಪಡೆಯುತ್ತಿದ್ದಾರೆ.ಶಾಲೆಯು ಸಮಾಜದಲ್ಲಿ ಉತ್ತಮ
ಸ್ಥಾನವನ್ನು ಪಡೆದಿರುತ್ತದೆ.
ನಾಮ ಫಲಕ
OVER VIEW
ಒಂದನೇ ತರಗತಿಯಿಂದ ಏಳನೇತರಗತಿವರೆಗೆ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
No comments:
Post a Comment