Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Friday, July 4, 2014

PTA Meeting,Reading week Celebration

                                                                        
                                                                              ನಮ್ಮ ಶಾಲೆ
                       .ಪ್ರಕೃತಿ ರಮಣೀಯ ಪೊಸಡಿಗುಂಪೆಯ ತಪ್ಪಲಿನ  ಚೇವಾರು ಎಂಬ ಪುಟ್ಟ ಹಳ್ಳಿಯಲ್ಲಿ      ಕಂಗೊಳಿಸುತ್ತಿರುವ ನಮ್ಮ    ಶಾಲೆಯು    ಊರಿನ    ಆಸ್ತಿಯಾಗಿದೆ.    1926 ರಲ್ಲಿ ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯು ಆರಂಭವಾಗಿ,ನಿರಂತರವಾಗಿ ವಿದ್ಯಾರ್ಥಿಗಳಿಗೆ ಜ್ಡಾನಾರ್ಜನೆಯನ್ನು ನೀಡುತ್ತಿದೆ              
ಒಂದನೇ ತರಗತಿಯಿಂದ ಏಳನೇತರಗತಿವರೆಗೆ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.



ಶಾಲಾ ರಕ್ಷಕ-ಶಿಕ್ಷಕ ಸಂಘ ಹಾಗೂ ಮಾತೃ ರಕ್ಷಕ -ಶಿಕ್ಷಕ ಸಂಘಗಳ ಮಹಾ ಸಭೆ
        2014-15ನೇ ಶಾಲಾ ವರ್ಷದ ಶಾಲಾ ರಕ್ಷಕ-ಶಿಕ್ಷಕ ಸಂಘ ಹಾಗೂ ಮಾತೃ ರಕ್ಷಕ -ಶಿಕ್ಷಕ ಸಂಘಗಳ ಮಹಾ ಸಭೆಯು ಶಾಲಾ ಸಭಾಂಗಣದಲ್ಲಿ ಜರಗಿತು.ಸಭಾಧ್ಯಕ್ಷತೆಯನ್ನು ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಪರಮೇಶ್ವರ ಪಾವಲುಕೋಡಿ ವಹಿಸಿದರು.ಸಭೆಯ ಉಧ್ಘಾಟನೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾ ಯಂ.ಪಿ.ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಪೈವಳಿಕೆ ವಿದ್ಯುತ್ ಕಛೇರಿಯ ಸಹಾಯಕ ಇಂಜಿನಿಯರ್ ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್, ಯಂ.ಪಿ.ಟಿ.ಎ.ಅಧ್ಯಕ್ಷೆ ಶ್ರೀಮತಿ ಇಂದಿರಾ,ಪಂಚಾಯತು ಸದಸ್ಯೆ ಶ್ರೀಮತಿ ಪುಷ್ಪಾಕಮಲಾಕ್ಷ ವಹಿಸಿದರು.ಶಾಲಾ ಮುಖ್ಯ ಶಿಕ್ಷಕ ಶ್ರೀ ಶಾಮ್ ಭಟ್  ಅತಿಥಿಗಳನ್ನುಸ್ವಾಗತಿಸಿ,ಪ್ರಾಸ್ತಾವಿಕ ಭಾಷಣ ಮಾಡಿದರು.ಅಧ್ಯಾಪಕರಾದ ಶ್ರೀ ರವಿ ಕುಮಾರ್ ಕಳೆದ ಶಾಲಾ ವರ್ಷದ ಸಮಗ್ರ ವರದಿಯನ್ನು ವಾಚಿಸಿದರು.ಸ್ಕೌಟ್ ಅಧ್ಯಾಪಕರಾದ ಶ್ರೀ ವಿನೋದ್ ಚೇವಾರ್ ಲೆಕ್ಕ ಪತ್ರ ಮಂಡಿಸಿದರು.ನಂತರ ನೂತನ ಕರ್ಯಕಾರೀ ಸಮಿತಿಯನ್ನು ರಚಿಸಲಾಯಿತು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು- ಶ್ರೀ ಪರಮೇಶ್ವರ ಪಾವಲುಕೋಡಿ
        ಉಪಾಧ್ಯಕ್ಷರು- ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್
      ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು- ಶ್ರೀಮತಿ ಇಂದಿರಾ
                               ಉಪಾಧ್ಯಕ್ಷರು- ಶ್ರೀಮತಿ ಪುಷ್ಪಾಕಮಲಾಕ್ಷ
ಕ್ರ.ಸಂ
PTA ಸದಸ್ಯರು
ಕ್ರ.ಸಂ
MPTA ಸದಸ್ಯರು
1.
ಅಬ್ದುಲ್ಲ ಕೋಯ
1.
ಕದೀಜ
2
ಕೃಷ್ಣ ಹೆಬ್ಬಾರ್
2
ಫ್ಲೋರಿನಾ ಕ್ರಾಸ್ತ
3
ನಾರಾಯಣ ಭಟ್ ಬೀಡುಬೈಲು.
3
ಶಕುಂತಲ
4
ಕವಿತಾ ಪಟ್ಲ
4
ಕಲ್ಯಾಣಿ
5
ನೆಬೀಸ
5
ಬೇಬಿ
6
ಸಾವಿತ್ರಿ
6
ಕಮಲಾ
7
ಲಕ್ಷ್ಮೀ ಕಿರಣ್
7
ಸರಸ್ವತಿ
8
ಆಯಿಶ
8
ಕದೀಜ ಚೇವಾರ್
9
ಸುಹುರ
9
ಕಮಲಾ
10
ಪ್ರೇಮ
10
ಸಂಜೀವಿನಿ
11
ವಿನೋದ್ ಚೇವಾರ್
11
ಸುಜಾತಾ
12
ವಿಜಯನ್
12
ಸರಸ್ವತಿ ಟೀಚರ್







ವಿನೋದ್ ಚೇವಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರಾಜೇಶ್ವರಿ ಟೀಚರ್ ವಂದಿಸಿದರು.



                                                   ವಾಚನಾ ಸಪ್ತಾಹ ಆಚರಣೆ
'ವಾಚನಾ ಚಿಗುರು' ಎಂಬ ಪುಸ್ತಕ ಬಿಡುಗಡೆ¨


   ಪಿ.ಎನ್ ಪಣಿಕ್ಕರ್ ಸ್ಮರಣಾರ್ಥ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.19.06.2014 ರಂದು ಉದ್ಘಾಟನಾ ಕಾರ್ಯಕ್ರಮ,ಪುಸ್ತಕ ಪ್ರದರ್ಶನ,ಏರ್ಪಡಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಪೈವಳಿಕೆ ಪಂಚಾಯತು ಸದಸ್ಯೆ ಶ್ರೀಮತಿ ಸುಬೈದಾ ಎಂ.ಪಿ,ನೆರವೇರಿಸಿ,ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು.ಮುಖ್ಯ ಶಿಕ್ಷಕರಾದ ಶ್ರೀ ಶ್ಯಾಮ ಭಟ್ ವಾಚನಾ ಸಪ್ತಾಹದ ಮಹತ್ವವನ್ನು ವಿವರಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಅಧ್ಯಾಪಕರಾದ ಶ್ರೀ ಶಂಕರ ನಾರಾಯಣ ಭಟ್ ಪುಸ್ತಕ ಗಳ ಪ್ರಾಧಾನ್ಯತೆಯನ್ನು ವಿವರಿಸಿದರು. ಶ್ರೀ ವಿಜಯನ್ ಶುಭ ಹಾರೈಸಿದರು.ಸ್ಟಾಫ್ ಕಾರ್ಯದರ್ಶಿ ಸ್ಕೌಟ್ ಅಧ್ಯಾಪಕ ವಿನೋದ ಚೇವಾರು,ವಾರ್ತಾ ಪತ್ರಿಕೆ,ನಿಯತಕಾಲಿಕೆಗಳ,ಮಹತ್ವ ವನ್ನು ವಿವರಿಸಿದರು.ಶಾಲಾ ನಾಯಕಿ ಕುಮಾರಿ ಜೈನಬತ್ ಅಸ್ಮೀನಾ ಅತಿಥಿಗಳನ್ನು ಸ್ವಾಗತಿಸಿದಳು.ದ್ವಿತೀಯ ನಾಯಕ, ಆದರ್ಶ ವಂದಿಸಿದನು.ಶಾಲಾ ಅಧ್ಯಾಪಕರಾದ ಶ್ರೀ ರವಿಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಸಾಂಸೃತಿಕ ಕಾರ್ಯಕ್ರಮ ಜರಗಿತು.
20.6.2014 ರಂದು ವಾಚನಾವಾರದ ಅಂಗವಾಗಿ ಮಕ್ಕಳಿಗಾಗಿ ಕಥಾ ರಚನೆ ಸ್ಪರ್ಧೆ ಏರ್ಪಡಿಸಲಾಯಿತು.23.6.14 ರಂದು ಕವಿತಾ ರಚನೆ ಸ್ಪರ್ಧೆ ಏರ್ಪಡಿಸಲಾಯಿತು.24.6.14ರಂದು ರಸಪ್ರಶ್ನೆ ಸ್ಪರ್ಧೆ,ಚಿತ್ರ ರಚನಾ ಸ್ಪರ್ಧೆ ಏರ್ಪಡಿಸಲಾಯಿತು.25.6.14ರಂದು ಆಸ್ವಾದನಾ ಟಿಪ್ಪಣಿ ಮಂಡನೆ ಸ್ಪರ್ಧೆ ಏರ್ಪಡಿಸಲಾಯಿತು.26.6.14ರಂದು ಸಮಾರೋಪ ಸಮಾರಂಭ,ಪುಸ್ತಕ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಯಿತು.
ಸಮಾರೋಪ ಸಮಾರಂಭ
ಒಂದು ವಾರಗಳ ಕಾಲ ನಡೆದ ವಾಚನಾ ಸಪ್ತಾಹದ ಸಮಾರೋಪ ಸಮಾರಂಭ ಶಾಲಾ ಸಭಾಂಗಣ ದಲ್ಲಿ ಜರಗಿತು.ಶಾಲಾ ಮುಖ್ಯ ಶಿಕ್ಷಕರಾದ ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಪಂಚಾಯತು ಸದಸ್ಯೆ ಶ್ರೀಮತಿ ಸುಬೈದಾ ಎಂ.ಪಿ, ಶುಭ ಹಾರೈಸಿದರು.
ಸಭಾ ಕಾರ್ಯಕ್ರಮ

2 comments:

  1. Nice blog design. keep updating with class room products.
    aeo manjeshwara

    ReplyDelete
  2. YOU ARE UPDATING REGULARLY...........KEEP IT UP...............
    Thank you
    -AEO MJR

    ReplyDelete