ಓಣಂ
ಹಬ್ಬದ ಆಚರಣೆ
ಶಾಲೆಯಲ್ಲಿ
ಓಣಂ ಹಬ್ಬವನ್ನು ಸಂಭ್ರಮ,ಸಡಗರದಿಂದ
ವೈವಿಧ್ಯಪೂರ್ಣವಾಗಿ ಆಚರಿಸಲಾಯಿತು.ವಿಶೇಷ
ಎಸೆಂಬ್ಲಿ ನಡೆಸಿ ಹಬ್ಬದ,ಹಿನ್ನೆಲೆ,ಮಹತ್ವವನ್ನು
ವಿವರಿಸಲಾಯಿತು.
ಎಲ್ಲಾ
ತರಗತಿಗಳಲ್ಲಿ,ವಿದ್ಯಾರ್ಥಿ,ವಿದ್ಯಾರ್ಥಿನಿಯರು,ಆಕರ್ಷಕವಾದ
ಪೂಕಳಂನ್ನು ರಚಿಸಿದರು.ಇದೇ
ಸಮಯದಲ್ಲಿ ಮಹಾಬಲಿ ಚಕ್ರವರ್ತಿಯ
ಆಗಮನವಾಯಿತು.ಇವರನ್ನು
ಸ್ವಾಗತಿಸಲು,ಗೋಪಿಕಾಸ್ತ್ರೀಯರು,ಗೋಪಾಲಕರು,ಮೌಲ್ವಿಗಳು,ಸನ್ಯಾಸಿಗಳು,ಪಾದ್ರಿಗಳು,ನರಸಣ್ಣರು,ಆಟಿಕಳಂಜರು,ಯಕ್ಷರು,ಗಂಧರ್ವರ
ಗಡಣವೇ ಶಾಲೆಯಲ್ಲಿ ಸೇರಿತ್ತು..ಮಹಾಬಲಿ
ಚಕ್ರವರ್ತಿಯು ,
ಎಲ್ಲಾ
ತರಗತಿಗಳಿಗೂ ಭೇಟಿಕೊಟ್ಟು ಕ್ಷೇಮ
ಸಮಾಚಾರವನ್ನು ವಿಚಾರಿಸಿದರು
ಹೂವಿನ ರಂಗವಲ್ಲಿಯ ಸುತ್ತಲೂ
,ಗೋಪಿಕಾ
ಸ್ತ್ರೀಯರ ನೃತ್ಯ ಮನ ಮೋಹಕ
ವಾಗಿತ್ತು..ತದನಂತರ,
ಪಾಯಸ,ಲಡ್ಡು,
ಹಣ್ಣುಹಂಪಲುಗಳನ್ನೊಳಗೊಂಡ
ಓಣಂ ಔತಣವನ್ನು ಮಹಾಬಲಿ
ಚಕ್ರವರ್ತಿಯೊಂದಿಗೆ ಎಲ್ಲರೂ
ಸವಿದರು.ನಂತರ
ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
HAPPY ONAM... Convey my regards to all my beloved students , teachers.
ReplyDelete---- AEO MJR