Friday, December 23, 2016
Friday, December 16, 2016
KALOTHSAVA AWARD
ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಕಿರಿಯ ಪ್ರಾಥಮಿಕ ವಿಭಾಗದ ಲಲಿತ ಗಾನದಲ್ಲಿ ಎ ಗ್ರೇಡ್,ಕನ್ನಡ ಭಾಷಣದಲ್ಲಿ ಎ ಗ್ರೇಡ್,ಕನ್ನಡ ಕಂಠಪಾಠದಲ್ಲಿ ಎ ಗ್ರೇಡ್,ಶಾಸ್ತ್ರೀಯ ಸಂಗೀತದಲ್ಲಿ ಬಿ ಗ್ರೇಡ್ ಪಡೆದ 4ನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿ ಎಸ್.
ಶ್ರೇಯ,ಸುಷ್ಮಿತ ಜಿ,ಆರ್,ಚಿನ್ಮಯಿ.ಎಸ್,ಅಮೃತ,ಅಕ್ಷತ,ಹಿತಶ್ರೀ |
KALOTHSAVA AWARD
Thursday, December 15, 2016
Tuesday, December 13, 2016
HARITHA KERALA PROGRAMME
ಚೇವಾರು ಶಾಲೆಯಲ್ಲಿ ಹಸಿರು ಕೇರಳ ಅಭಿಯಾನಕ್ಕೆ ಚಾಲನೆ
ಕೇರಳ ಸರಕಾರದ ಮಹತ್ವದ
ಯೋಜನೆಯಾದ ಹಸಿರು ಕೇರಳಅಭಿಯಾನದ ಅಂಗವಾಗಿ,ದಿನಾಂಕ 8-12-2016ರಂದುಶಾಲೆಯಲ್ಲಿ ವಿಶೇಷ
ಎಸಂಬ್ಲಿಯನ್ನು ಏರ್ಪಡಿಸಲಾಯಿತು.ಹಸಿರು ಕೇರಳ ಯೋಜನೆಯ ಮಹತ್ವವನ್ನು ಶಾಲಾ ಮುಖ್ಯೋಪಾಧ್ಯಾಯರಾದ
ಶ್ಯಾಮ್ ಭಟ್ ವಿವರಿಸಿದರು.ಸ್ಕೌಟ್ ಅಧ್ಯಾಪಕರಾದ ವಿನೋದ್,ಘೋಷಣಾ ವಾಕ್ಯಗಳನ್ನು ಹೇಳಿದರು.ಈ ಸಂದರ್ಭದಲ್ಲಿ
ಪರಿಸರ ಸಂರಕ್ಷಣಾ ಪ್ರತಿಜ್ಞೆಯನ್ನು ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಕೈಗೊಂಡರು.
ಶಾಲಾ ಎಸೆಂಬ್ಲಿಯಲ್ಲಿ ಪರಿಸರ ಸಂರಕ್ಷಣಾ ಪ್ರತಿಜ್ಞೆ
ಹಸಿರು ಕೇರಳ ಜಾಥಾ
ಹಸಿರು ಕೇರಳ ಯೋಜನೆಯ
ಅಂಗವಾಗಿ ,ಶಾಲೆಯ ವಿದ್ಯಾರ್ಥಿಗಳಿಂದ ರಕ್ಷಕರಿಂದ ಶಿಕ್ಷಕರಿಂದ ಮೆರವಣಿಗೆಯನ್ನು
ಏರ್ಪಡಿಸಲಾಯಿತು. ಮುಖ್ಯ ಶಿಕ್ಷಕರಾದ ಶ್ಯಾಮ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪರಿಸರ
ಸಂರಕ್ಷಣಾ ಘೋಷಣೆ ಹಾಗೂ ವಿವಿಧ ಪ್ಲಕಾರ್ಡ್ ಗಳಿಂದ ಪರಿಸರ ಸಂರಕ್ಷಣೆ ಹಾಗೂ ಜಲ ಸಂರಕ್ಷಣೆ
ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.
ಪರಿಸರ ಸಂರಕ್ಷಣಾ ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು
ಹಸಿರು ಕೇರಳದ ಅಂಗವಾಗಿ ವಿಶೇಷ ಸ್ವಚ್ಛತಾ ಕಾರ್ಯಕ್ರಮ
ಹಸಿರು ಕೇರಳ ಯೋಜನೆಯ
ಅಂಗವಾಗಿ ,ಶಾಲೆಯ ವಿದ್ಯಾರ್ಥಿಗಳಿಂದ ರಕ್ಷಕರಿಂದ ಶಿಕ್ಷಕರಿಂದ ಶಾಲಾ ಪರಿಸರವನ್ನು
ಶುಚಿಗೊಳಿಸಲಾಯಿತು.ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳು ನೇತೃತ್ವವನ್ನು ವಹಿಸಿದರು.
AWARDS
ಪ್ರತಿಭಾನ್ವಿತರು
ಧರ್ಮತ್ತಡ್ಕ ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ, ಮಂಜೇಶ್ವರ ಉಪಜಿಲ್ಲಾ
ಮಟ್ಟದ ಕಲೋತ್ಸವದ ನಾಟಕ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ ಪಡೆದ ಚೇವಾರು
ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಗೀತಾಂಜಲಿ
ಕೆ.ವಿ.,ಚೈತನ್ಯ.ಯಂ,ಪೂರ್ಣಿಮಾ ಕೆ.ಯಂ,ದೃಶ್ಯ ಕಿರಣ್.ಕೆ,ಮಿಥುನ್.ಪಿ,ಸುಮಂತ್.ಪಿ,ಗೌತಮ್.ಎಸ್
ಹಾಗೂ ತುಷಾರ್.ಯಂ.
Add caption |
ಧರ್ಮತ್ತಡ್ಕ ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ,ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದ ದೇಶ ಭಕ್ತಿ ಗೀತೆ ಹಾಡುವ ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಅನುಜಾಕ್ಷಿ,ಪೂರ್ಣಿಮಾ,ನವ್ಯಶ್ರೀ,ವಿಂದ್ಯಾ.ಕೆ,ಮಿಥುನ್,ಪ್ರಜ್ವಲ್,ಗೌತಮ್
Sunday, November 13, 2016
Sunday, October 30, 2016
CELEBRATION OF EKATA DIVAS
ರಾಷ್ಟ್ರೀಯ ಏಕತಾ ದಿನಾಚರಣೆ
ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭ ಬಾಯ್ ಪಟೇಲರ ಜನ್ಮ ದಿನವನ್ನು,ಶಾಲೆಯಲ್ಲಿ ವಿಶೇಷ ಎಸೆಂಬ್ಲಿ ನಡೆಸಿ ಸರ್ದಾರ್ ವಲ್ಲಭ ಬಾಯ್ ಪಟೇಲರ ಜೀವನ ಚರಿತ್ರೆಯನ್ನು ವಿವರಿಸಲಾಯಿತು.ರಾಷ್ಟ್ರೀಯ ಏಕತೆಯನ್ನು ಉಳಿಸಿ ರಕ್ಷಿಸುವ ಕುರಿತಾದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.Wednesday, October 26, 2016
Tuesday, October 25, 2016
Saturday, October 15, 2016
Sunday, October 2, 2016
GANDHI JAYANTHI CELEBRATION
ಚೇವಾರಿನಲ್ಲಿ ಗಾಂಧೀ ಜಯಂತಿ ಆಚರಣೆ
ಚೇವಾರು ಶ್ರೀ ಶಾರದಾ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀ
ಜಯಂತಿಯನ್ನು ವಿವಿಧ ಕಾರ್ಯಕ್ತಮಗಳೊಂದಿಗೆ ಆಚರಿಸಲಾಯಿತು.ಕಾರ್ಯಕ್ರಮವಲ್ಲು ಉದ್ಘಾಟಿಸಿ
ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್,ಗಾಂಧೀಜಿಯವರು ಅನುಸರಿಸಿದ ಸತ್ಯ,ಶಾಂತಿ
ಅಹಿಂಸೆಯನ್ನು ನಮ್ಮ ಜೀವನದಲ್ಲಿ ಅನುಸರಿಸುವ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಬಹುದೆಂದು
ಅಭಿಪ್ರಾಯ ಪಟ್ಟರು.ಶಿಕ್ಷಕ ಪ್ರಸಾದ್ ರೈ,ಪ್ರಮೀಳಾ,ಪುಷ್ಪಲತಾ ಗಾಂಧೀಜಿಯವರ ಜೀವನ ಚರಿತ್ರೆಯನ್ನು
ವಿವರಿಸಿದರು.ಬಳಿಕ ಸರ್ವಧರ್ಮ ಪ್ರಾರ್ಥನೆ,ಗಾಂಧೀಜಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ,ಪರಿಸರ
ಶುಚೀಕರಣಕ್ಕೆ ಚಾಲನೆ ಒದಗಿಸಲಾಯಿತು.ಶಿಕ್ಷಕಿ
ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.ರವಿಕುಮಾರ್ ವಂದಿಸಿದರು.
Monday, September 26, 2016
Wednesday, September 21, 2016
Monday, September 19, 2016
HELPING HAND
ಚೇವಾರಿನಲ್ಲಿ ಜೀವ ಕಾರುಣ್ಯಪದ್ಧತಿ ಅಂಗವಾಗಿ ಓಣಂ ಕಿಟ್
ವಿತರಣೆ
ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬಾಚರಣೆಯ ಅಂಗವಾಗಿ,ಶಾಲಾ
ವಿದ್ಯಾರ್ಥಿಗಳಿಂದ,ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಓಣಂ ಕಿಟ್ ಗಳನ್ನು
ವಿತರಿಸಲಾಯಿತು.ಕಾರ್ಯಕ್ರಮವನ್ನು ಪೈವಳಿಕೆ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಭಾರತಿ.ಜೆ,ಶೆಟ್ಟಿ
ಉಧ್ಘಾಟಿಸಿ,ಕಿಟ್ ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಪೈವಳಿಕೆ ಪಂಚಾಯತು ಸದಸ್ಯರಾದ
ಹರೀಶ್ ಬೊಟ್ಟಾರಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಕುಮಾರ ಸುಬ್ರಹ್ಮಣ್ಯ, ಶಾಲಾ ಮುಖ್ಯ
ಶಿಕ್ಷಕರಾದ ಶ್ಯಾಮ ಭಟ್ ಉಪಸ್ಥಿತರಿದ್ದರು.
Subscribe to:
Posts (Atom)