ಅಕ್ಟೋಬರ್ 31: ಇಂದಿರಾ ಗಾಂಧಿ ಪುಣ್ಯ ಸ್ಮರಣೆ
ಭಾರತದ ಪ್ರಥಮ ಮಹಿಳಾ ಪ್ರಧಾನಿಯಾದ ಇಂದಿರಾ ಪ್ರಿಯ ದರ್ಶಿನಿ ಯವರು 1917ರನವೆಂಬರ್ 19ರಂದು
ಅಲಹಾಬಾದಿನಲ್ಲಿ ಜನಿಸಿದರು.ತಂದೆ ಜವಾಹರಲಾಲ್ ನೆಹರು,ತಾಯಿ ಕಮಲಾ ನೆಹರು.ಇಂದಿರಾ ಎಳವೆಯಲ್ಲಿಯೇ
ಬ್ರಿಟಿಷ್ ಪ್ರಭುತ್ವದ ವಿರುದ್ಧ ಬಂಡೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡರು.ಇವರ ನಾಯಕತ್ವದಲ್ಲಿ
‘ಮೋಂಕೀ ಬ್ರಿಗೇಡ್’ಎಂಬ ಮಕ್ಕಳ ಸೈನ್ಯ ರೂಪುಗೊಂಡಿತು.
1938ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯೆಯಾದರು.ಲಾಲ್ ಬಹದ್ದೂರ್ ಶಾಸ್ತ್ರಿಪ್ರಧಾನಿಯಾಗಿದ್ದ
ಮಂತ್ರಿ ಮಂಡಲದಲ್ಲಿ,ಇಂದಿರಾ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು.ಇವರು ‘ಗರೀಬೀ ಹಟಾವೋ’ಎಂಬ ಘೋಷಣಾ ವಾಕ್ಯದೊಂದಿಗೆ ಹಲವಾರು ಜನಪ್ರಿಯ
ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.ಉಗ್ರವಾದಿಗಳ ದಮನಕ್ಕಾಗಿ ಇಂದಿರಾ ಗಾಂಧಿ ಸೇನೆಯನ್ನು
ಅಮೃತಸರ್ ಸ್ವರ್ಣ ಮಂದಿರದೊಳಗೆ ಹೊಗಿಸಿದ ಕಾರಣಕ್ಕಾಗಿ,ಸಿಖ್ ಧರ್ಮೀಯರು ಅಸಮಧಾನಗೊಂಡರು.1984ರ
ಅಕ್ಟೋಬರ್ 31ರಂದು ಇಹಲೋಕ ತ್ಯಜಿಸಿದರು.