ಉ
|
ಕ್ಕಿನ ಮನುಷ್ಯ ಎಂದೇ ಕರೆಯಲ್ಪಟ್ಟ ಸರ್ದಾರ್
ವಲ್ಲಭಬಾಯ್ ಪಟೇಲ್ 1875ರ ಅಕ್ಟೋಬರ್ 31ರಲ್ಲಿ ಗುಜರಾತಿನ ನಾಡಿಮೇಡ್ ಎಂಬ ಗ್ರಾಮದಲ್ಲಿ
ಜನಿಸಿದರು.
ವಲ್ಲಭಬಾಯ್ ಪಟೇಲರು
ಬಾಲ್ಯದಿಂದಲೂ ಧೈರ್ಯ ಮತ್ತು ಸಂಘಟನಾ ಚಾತುರ್ಯಗಳನ್ನು ಹೊಂದಿದ್ದರು.ಅಹಮ್ಮದಾಬಾದಿನಲ್ಲಿ ವಕೀಲ
ವೃತ್ತಿಯನ್ನು ಆರಂಭಿಸಿದ ಇವರು ಬಹು ಬಹೇಗ ಜನಪ್ರಿಯರಾದರು.1917ರಲ್ಲಿ ಅಹಮ್ಮದಾಬಾದಿನ
ಸ್ಯಾನಿಟೇಶನ್ ಕಮಿಷನರ್ ಆಗಿ ಆಯ್ಕೆಯಾದರು. ಗಾಂಧೀಜಿಯವರ
ಚಂಪಾರಣ್ಯ ಸತ್ಯಾಗ್ರ ಹ ದಿಂದ ಪ್ರಭಾವಿತರಾಗಿದ್ದ ಪಟೇಲ್ 1918ರಲ್ಲಿ ಖೇಡಾ ಪ್ರಾಂತದ
ರೈತರನ್ನು ಬರಗಾಲದಲ್ಲೂ ಬ್ರಿಟಿಷರಿಗೆ ಅಧಿಕ ತೆರಿಗೆ ಕಟ್ಟದಂತಿರಲು ಗಾಂಧೀಜಿಯವರೇ ಸೂಚಿಸಿದರು.ಪಟೇಲರಿಗೆ
ಇದರ ಜವಾಬ್ದಾರಿಯನ್ನು ವಹಿಸಿದರು. ರೈತರಿಗೆ ನ್ಯಾಯ ಒದಗಿಸಿದರು.1930ರಲ್ಲಿ ಅಸಹಕಾರ
ಆಂದೋಲನದಲ್ಲಿ ಭಾಗವಹಿಸಿ ಬಂಧಿತರಾದರು.1931ರ ಕರಾಚಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾದರು.
No comments:
Post a Comment