ಅಕ್ಟೋಬರ್:15 ಅಬ್ದುಲ್ ಕಲಾಂ ಜನ್ಮದಿನ
ಅಬ್ದುಲ್ ಕಲಾಂ ಭಾರತ ಕ೦ಡ ಮೇಧಾವಿ. ಕ್ಷಿಪಣಿ ತಂತ್ರಜ್ಞಾನಕ್ಕೆ ಹೊಸ ಶಕ್ತಿ ತುಂಬಿದ ವಿಜ್ಞಾನಿ. ಸರಳ ವ್ಯಕ್ತಿತ್ವದ,ಇವರು ಭಾರತದ
ರಾಷ್ಟ್ರಪತಿ ಆಗಿದ್ದರು. ದೇಶ ಕಂಡ ಅಪ್ರತಿಮ ವಿಜ್ಞಾನಿ.ಕಲಾಂ ಅವರು,
ರೋಹಿಣಿ ಉಪಗ್ರಹವನ್ನು, ಭೂ ಕಕ್ಷೆಗೆ ಒಯ್ದ, ಭಾರತದ ಮೊದಲ ಉಪಗ್ರಹ ವಾಹಕದ ನಿರ್ದೇಶಕರಾಗಿದ್ದರು.1980ರ ಜುಲೈ18ರಂದು
ದೇಶದ ಪ್ರಥಮ ಉಪಗ್ರಹ ಉಡ್ಡಯನ ವಾಹಕ ಪಿ.ಎಸ್.ಎಲ್.ವಿ.3
ನಭಕ್ಕೆ, ಯಶಸ್ವಿಯಾಗಿ ಹಾರಿತು. ಇದರ ರುವಾರಿಯಾಗಿದ್ದವರು ಅಬ್ದುಲ್
ಕಲಾಂ. ಅಬ್ದುಲ್ ಕಲಾಂ ಅವರಿಗ ಮಕ್ಕಳು ಎಂದರೆ ಪ್ರೀತಿ. ಇಂದಿನ
ಮಕ್ಕಳು ಉತ್ತಮವಾದ ಕನಸನ್ನು ಕಾಣಬೇಕು.ಅದನ್ನು ಈಡೇರಿಸಲು
ಕಷ್ಟಪಟ್ಟು ಕೆಲಸ ಮಾಡಬೇಕೆಂಬುದು ಅವರ ಕಿವಿಮಾತು. ಅವರ ಆತ್ಮ
ಚರಿತ್ರೆಯು ”ಅಗ್ನಿಯ ರೆಕ್ಕೆಗಳು”ಎoಬ ಕೃತಿ. ನಾವು ಕೂಡಾ ವಿಜ್ಞಾನಿಗಳಾಗಲು ಪ್ರಯತ್ನಿಸೋಣ. ದೇಶವನ್ನು ಮುನ್ನಡೆಸೋಣ.
No comments:
Post a Comment