Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Friday, January 27, 2017

INVITATION RELEASING CEREMONY

ಶಾಲಾ ವಾರ್ಷಿಕೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ
ಉದ್ಘಾಟನೆ-ವಾರ್ಡ್ ಮೆಂಬರ್ ಶ್ರೀ ಹರೀಶ್ ಬೊಟ್ಟಾರಿಯವರಿಂದ

SAARVAJANIKA SHIKSHANA SAMRAKSHANA YAJNA

ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ

ಪ್ರತಿಜ್ಞಾ ಸ್ವೀಕಾರ-ರಕ್ಷಕರಿಂದ,ಶಿಕ್ಷಕರಿಂದ,ವಿದ್ಯಾರ್ಥಿಗಳಿಂದ,ಶಾಲಾ ಹಿತೈಷಿಗಳಿಂದ

ಉದ್ಘಾಟನೆ-ಶ್ರೀಮತಿ ಭಾರತಿ ಜೆ.ಶೆಟ್ಟಿ ಅಧ್ಯಕ್ಷರು,ಪೈವಳಿಕೆ ಗ್ರಾಮ ಪಂಚಾಯತು,ಮುಖ್ಯ ಅತಿಥಿಗಳಾಗಿ ಶ್ರೀ ಹರೀಶ್ ಬೊಟ್ಟಾರಿ,ವಾರ್ಡ್ ಸದಸ್ಯರು ಪೈವಳಿಕೆ ಗ್ರಾಮ ಪಂಚಾಯತು,ಶ್ರೀಮತಿ ಇಂದಿರಾ ಮಿತ್ತಡ್ಕ ಪಿ.ಟಿ.ಎ.ಅಧ್ಯಕ್ಷೆ,ಶ್ರೀಮತಿ ಪುಷ್ಪಾ ಕಮಲಾಕ್ಷ MPTA  ಅಧ್ಯಕ್ಷೆ


Wednesday, January 25, 2017

68'th REPUBLIC DAY CELEBRATION

ಚೇವಾರು ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 68ನೇ ಗಣರಾಜ್ಯೋತ್ಸವನ್ನು ಆಚರಿಸಲಾಯಿತು.ಪೈವಳಿಕೆ ಪಂಚಾಯತಿನ ಸದಸ್ಯರಾದ ಶ್ರೀ ಹರೀಶ್ ಬೊಟ್ಟಾರಿಯವರು ಧ್ವಜಾರೋಹಣಗೈದರು.ವಿದ್ಯಾರ್ಥಿ ಜೀವನದಲ್ಲೇ ದೇಶ ಪ್ರೇಮವನ್ನು ಬೆಳೆಸಿ,ದೇಶದ ರಕ್ಷಕರಾಗುವಂತೆ ಕರೆಕೊಟ್ಟರು.ಮುಖ್ಯ ಅತಿಥಿಗಳಾಗಿ ರಘು ಕಲ್ಕಾರ್,ಸಂಜೀವ ಚೇವಾರು,ಅಬ್ದುಲ್ ಅಸೀಸ್ ಭಾಗವಹಿಸಿದರು.ಮಾಜಿ ವಾರ್ಡ್ ಸದಸ್ಯೆ ಸುಬೈದಾ ಯಂ.ಪಿ.ಶುಭ ಹಾರೈಸಿದರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ್ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಿಕ್ಷಕಿ ಸರಸ್ವತಿ.ಬಿ.ವಂದಿಸಿದರು.ಸ್ಕೌಟ್ ಅಧ್ಯಾಪಕರಾದ ವಿನೋದ್ ಚೇವಾರ್ ಕಾರ್ಯಕ್ರಮ ನಿರೂಪಿಸಿದರು.


INVITATION

ಶಾಲಾ ಶಿಕ್ಷಣ ಸಂರಕ್ಷಣಾ ಮಾನವ ಸರಪಳಿ ಕಾರ್ಯಕ್ರಮ
ದಿನಾಂಕ:27-1-2017,ಸಮಯ:10.30 am
ಸ್ಥಳ-ಶಾಲಾ ಸಭಾಂಗಣ
ಪ್ರಿಯರೇ,
              ಕೇರಳದಲ್ಲಿ ಪ್ರಸ್ತುತಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ಜರಗುತ್ತಿರುವುದನ್ನು,ತಾವು ಅರಿತಿರುವಿರಿ ತಾನೆ.ಇದರ ಅಂಗವಾಗಿ ಇದೇ ಬರುವ  27-1-2017ನೇ ಶುಕ್ರವಾರ ಬೆಳಿಗ್ಗೆ10.30 ಗಂಟೆಗೆ ನಮ್ಮ ಶಾಲೆಯಲ್ಲಿ  ಶಾಲಾ ಶಿಕ್ಷಣ ಸಂರಕ್ಷಣಾ ಮಾನವ ಸರಪಳಿ ಕಾರ್ಯಕ್ರಮ ಜರಗಲಿದೆ.ಈ ಕಾರ್ಯಕ್ರಮದಲ್ಲಿ ಶಾಲಾ ರಕ್ಷಕರು,ಹಳೆ ವಿದ್ಯಾರ್ಥಿಗಳು,ಶಾಲಾ ಹಿತೈಷಿಗಳು,ವಿದ್ಯಾಭಿಮಾನಿಗಳು ಪಾಲ್ಗೊಂಡು ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ತಾವೆಲ್ಲರೂ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇವೆ.
                                                                                           ವಂದನೆಗಳೊಂದಿಗೆ,
.ಅಧ್ಯಕ್ಷರು ಮತ್ತು ಸದಸ್ಯರು                                   ಶಾಲಾ ವ್ಯವಸ್ಥಾಪಕರು                                  ಶಾಲಾ ಮುಖ್ಯೋಪಾಧ್ಯಾಯರು
   ಶಾಲಾ ಹಳೆ ವಿದ್ಯಾರ್ಥಿ ಸಂಘ                             ಅಧ್ಯಕ್ಷರು ಮತ್ತು ಸದಸ್ಯರು                                     ಮತ್ತು ಶಿಕ್ಷಕ ವೃಂದ

                                                                  ಶಾಲಾ PTA & MPTA                                                                  
ವಿ.ಸೂ-ಅದೇ ದಿನ ಮಧ್ಯಾಹ್ನ 12 ಗಂಟೆಗೆ ಶಾಲಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯಾಗಲಿದೆ.

Monday, January 16, 2017

INAUGURATION OF SCHOOL OLD STUDENT'S ASSOCIATION WHATS APP GROUP

INAUGURATION OF SCHOOL OLD STUDENT'S ASSOCIATION WHATS APP GROUP

FORM FILLING CAMP

ಭೂಮಿ ದಾಖಲೆ ಗಣಕೀಕರಣದ ಅರ್ಜಿಗಳನ್ನು ಉಚಿತವಾಗಿ ಭರ್ತಿಗೊಳಿಸುವ ಶಿಬಿರ ಶಾಲೆಯಲ್ಲಿ 15-1-2017ರಂದು ಜರಗಿತು.

Monday, January 2, 2017

OLD STUDENT'S MEETING 2016-17

ಶಾಲಾ ಹಳೆ ವಿದ್ಯಾರ್ಥಿ ಸಂಘ ರೂಪೀಕರಣ ಸಮಾವೇಶ
ದಿನಾಂಕ:22-12-2016,   ಸಮಯ:2 pm
ಸ್ಥಳ: ಚೇವಾರು ಶಾಲಾ ಸಭಾಂಗಣ
ಪ್ರಿಯರೇ,
              ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯು,ಶತಮಾನದ ಇತಿಹಾಸವುಳ್ಳ  ವಿದ್ಯಾಸಂಸ್ಥೆಯಾಗಿದ್ಧು,ಇಲ್ಲಿ ಸಾವಿರಾರು ಮಂದಿ,ಉತ್ತಮ ಶಿಕ್ಷಣ ಪಡೆದು,ಶೈಕ್ಷಣಿಕ,ಧಾರ್ಮಿಕ,ಸಾಂಸ್ಕೃತಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣ್ಯ ಸೇವೆಯನ್ನು ಸಲ್ಲಿಸುತ್ತಾ ಶಾಲೆಯ ಕೀರ್ತಿಯನ್ನು ಬೆಳಗಿಸುತ್ತಿದ್ದಾರೆ.ಒಂದು ವಿದ್ಯಾಸಂಸ್ಥೆಯ ಅಭಿವೃದ್ಧಿ ಎಂದರೆ ಊರಿನ ಅಭಿವೃದ್ಧಿಯಾಗಿದೆ.ಈ ನಿಟ್ಟಿನಲ್ಲಿ ಈ ವಿದ್ಯಾಸಂಸ್ಥೆಯನ್ನು ಸರ್ವತೋಮುಖ ಅಭಿವೃದ್ಧಿಗೊಳಿಸಬೇಕೆಂಬುದು ಈ ಶಾಲೆಯ ಹಳೆ ವಿದ್ಯಾರ್ಥಿಗಳ ಮತ್ತು ಹಿತೈಷಿಗಳ ಚಿರಕಾಲದ ಅಭಿಲಾಷೆಯಾಗಿದೆ.ಆದುದರಿಂದ ಅದಕ್ಕೊಂದು ಸೂಕ್ತ ವೇದಿಕೆಯನ್ನು ನೀಡಿ,ಹಳೆ ವಿದ್ಯಾರ್ಥಿಗಳ ಸಂಘವನ್ನು ರೂಪಿಸುವರೇ,ಇದೇ ಬರುವ 22-12-2016ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಶಾಲಾ ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.ತಾವೆಲ್ಲರೂ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇವೆ.
ಅಧ್ಯಕ್ಷರು ಮತ್ತು ಸದಸ್ಯರು                                                                                                   ಮುಖ್ಯೋಪಾಧ್ಯಾಯರು
ರಕ್ಷಕ ಶಿಕ್ಷಕ ಸಂಘ ಮತ್ತು ಮಾತೃರಕ್ಷಕ ಶಿಕ್ಷಕ ಸಂಘ                                                                           ಮತ್ತು ಶಿಕ್ಷಕ ವೃಂದ
ದಿನಾಂಕ:15-12-2016



ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್ ಕೊಂದಲಕಾಡು ಹಾಗೂ ಕಾರ್ಯದರ್ಶಿಯಾಗಿ ಶ್ರೀ ವಿನೋದ್ ಚೇವಾರು ಆಯ್ಕೆಯಾದರು.

ಪ್ರಾಸ್ತಾವಿಕ ಭಾಷಣ-ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ರಿಂದ

ಶುಭ ಹಾರೈಕೆ-ಮಾಜಿ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಚ್ಯುತ ಚೇವಾರ್ ಅವರಿಂದ

ಜೀವ ಕಾರುಣ್ಯ ಪದ್ಧತಿ ಅಂಗವಾಗಿ ಉಚಿತ ಕಿಟ್ ವಿತರಣೆ-ಶ್ರೀ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು ಅವರಿಂದ