2014-15ನೇ ಶೈಕ್ಷಣಿಕ ವರ್ಷದ ವಾರ್ಷಿಕ
ವರದಿ
ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು ತಾ-31-03-2015
ಈ ಶಾಲಾ ವರ್ಷವು 2-6-2014ರಂದು, ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು,ದೊಡ್ಡ ದೊಡ್ಡ
ಕನಸುಗಳನ್ನು ಹೊತ್ತು ಬಂದ ಕಂದಮ್ಮಗಳನ್ನು ಸ್ವಾಗತಿಸುವ , ಶಾಲಾ ಪ್ರವೇಶೋತ್ಸವ, ಎಂಬ
ಕಾರ್ಯಕ್ರಮದೊಂದಿಗೆ ಆರಂಭವಾಯಿತು.
24-06-2014 ರಂದು ಪಿ.ಟಿ.ಎ.ಮಹಾಸಭೆ ನಡೆಸುವುದರೊಂದಿಗೆ, ನಮ್ಮೀ ಶೈಕ್ಷಣಿಕ ವರ್ಷದ
ನೂತನ,ದಕ್ಷ, ಪದಾಧಿಕಾರಿಗಳನ್ನು ಹಾಗೂ ಕಾರ್ಯಕಾರೀ ಸಮಿತಿಯನ್ನು ರೂಪೀಕರಿಸಲಾಯಿತು.
ಕಲಿಕೆಯ ಅಂಗವಾಗಿ,ಶಾಲಾ ಮಟ್ಟದ, ವಿವಿಧ ದಿನಾಚರಣೆಗಳನ್ನು, ಔಚಿತ್ಯ ಪೂರ್ಣವಾಗಿ ಆಚರಿಸಿ,ಮಕ್ಕಳ
ಸರ್ವಾಂಗೀಣ, ಜ್ಞಾನ ಅಭಿವೃದ್ಧಿಯಾಗುವಂತೆ ಮಾಡಲಾಗಿದೆ.ಓದುವ ವಾರಾಚರಣೆ,ಪರಿಸರ
ದಿನಾಚರಣೆ,ಜನಸಂಖ್ಯಾ ದಿನಾಚರಣೆ,ಸ್ವಾತಂತ್ತ್ಯೋತ್ಸವ,ಓಣಂ ಹಬ್ಬ,ಶಿಕ್ಷಕರ ದಿನ,ಗಾಂಧೀ
ಜಯಂತಿ,ವಿಶ್ವ ಆಹಾರ ದಿನ,ವಿಶ್ವ ಬಿದಿರು ಸಸ್ಯ ದಿನ,ತೆಂಗು ದಿನ,ವಿಶ್ವ ಹೃದಯ ದಿನ,ಅಂಚೆ
ದಿನ,ರಾಷ್ಟ್ರೀಯ ವಿಜ್ಞಾನ ದಿನ,ಜನವರಿ 26ರ ಗಣರಾಜ್ಯೋತ್ಸವ,ಹೀಗೆ ಎಲ್ಲ ದಿನಾಚರಣೆಗಳನ್ನು ವಿವಿಧ
ಕ್ಲಬ್ ಗಳ,ಸೂಕ್ತ ಸಹಕಾರದೊಂದಿಗೆ,ಆಯೋಜಿಸಿ,ವಿದ್ಯಾರ್ಥಿಗಳಲ್ಲಿ ಪ್ರಜಾ ಪ್ರಭುತ್ವದ, ಬಾಲ
ಪಾಠವನ್ನು ವರ್ಧಿಸಲು ಶ್ರಮಿಸಿದ್ದೇವೆ.
ಪಾಠೇತರ ಚಟುವಟಿಕೆಗಳ ಅಂಗವಾಗಿ,ಶಾಲಾ ಮಟ್ಟದ ಕಲೋತ್ಸವ,ವಿದ್ಯಾರಂಗ ಸಾಹಿತ್ಯೋತ್ಸವ,ಸಂಸ್ಕೃತೋತ್ಸವ,ಗಣಿತ,ವಿಜ್ಞಾನ,ಸಮಾಜ,ವೃತ್ತಿ
ಪರಿಚಯ ಹಾಗೂಐ.ಟಿ.ಮೇಳ,ಕ್ರೀಡಾ ಕೂಟ,ಜ್ಞಾನ ಮಟ್ಟವನ್ನು ಹೆಚ್ಚಿಸುವ,ರಸಪ್ರಶ್ನಾ
ಕಾರ್ಯಕ್ರಮ,ಗಣಿತೋತ್ಸವ,ಮೆಟ್ರಿಕ್ ಮೇಳ,ಬಾಲ ವಿಜ್ಞಾನ ಕಾಂಗ್ರೆಸ್,ಗುಂಪೆಗೊಂದು
ಪ್ರವಾಸ,ಸ್ಕೌಟ್-ಗೈಡ್ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ,ವಕ್ಕಳ ಮನೋ ವಿಕಾಸಕ್ಕೆ
ಆದ್ಯತೆ ನೀಡಿದ್ದೇವೆ.
ಪಾಠೇತರ ಚಟುವಟಿಕೆಗಳಲ್ಲಿ ಉಪಜಿಲ್ಲಾ ಮಟ್ಟ,ಜಿಲ್ಲಾ ಮಟ್ಟದಲ್ಲೂ ನಮ್ಮ ವಿದ್ಯಾರ್ಥಿಗಳು
ಪ್ರಶಂಸನೀಯ ಸಾಧನೆ ಮಾಡಿದ್ದು,ನಮಗೆ ಹೆಮ್ಮೆ ತಂದ ವಿಚಾರವಾಗಿದೆ.ಅದರ ಕಿರು ನೋಟ ನಿಮ್ಮ ಮುಂದೆ.
ಜಿಲ್ಲಾಮಟ್ಟದ, ಸಂಸ್ಕೃತ ದಿನಾಚರಣೆಯ ಅಂಗವಾಗಿ ನಡೆದ ,ಸಂಸ್ಕೃತ ಪ್ರಶ್ನೋತ್ತರಿಯಲ್ಲಿ,ನಮ್ಮ
ಶಾಲೆಯ ಕ್ಷಿತೀಶ ಮತ್ತು ಜ್ಯೋತಿಕಾ ಬಳಗ ಪ್ರಥಮ ಸ್ಥಾನ ಪಡೆದುದು ನಮಗೆ ಸಂತಸ ತಂದಿದೆ.ಅದರೊಂದಿಗೆ
ದೇಶ ಭಕ್ತಿ ಗಾನದಲ್ಲೂ ನಮ್ಮ ಶಾಲಾ ತಂಡವು ಪ್ರಥಮ ಸ್ಥಾನ ಪಡೆದುದು ನಮ್ಮ ಸಾಧನೆಗೆ ಗರಿ
ಮೂಡಿಸಿದೆ.
2014ರ ಜೂನ್ ನಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರ ಜ್ಞಾನ ಇಲಾಖೆ ವತಿಯಿಂದ ಕೊಡಲ್ಪಡುವ
ಅವಾರ್ಡ್, ರೂಪಾಯಿ 5000ವನ್ನು ನಮ್ಮ ,ಕಳೆದ ಶೈಕ್ಷಣಿಕ ವರ್ಷದ,7ನೇ ತರಗತಿಯಲ್ಲಿ ಕಲಿತ
ವಿದ್ಯಾರ್ಥಿನಿ ಅನನ್ಯಾ.ಮಾಣಿತ್ತಡ್ಕಳಿಗೆ
ಲಭಿಸಿರುತ್ತದೆ ಎಂದು ಹೇಳಲು ನಾವು ಸಂತೋಷ ಪಡುತ್ತೇವೆ.
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ.ಅರೆಬಿಕ್ ಸಾಹಿತ್ಯೋತ್ಸವ, ಸಂಸ್ಕೃತೋತ್ಸವ
ದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರ ಈ ರೀತಿ ಇದೆ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ
ಕನ್ನಡ ಕತೆ ಹೇಳುವುದರಲ್ಲಿ 2ನೇ ತರಗತಿಯ ಚಿನ್ಮಯಿ ಪ್ರಥಮ,ಒಗಟಿನಲ್ಲಿ ತೃತೀಯ,ಕನ್ನಡ
ಕಂಠಪಾಠದಲ್ಲಿ ಗೌತಮ್ ದ್ವಿತೀಯ,ದೇಶ ಭಕ್ತಿ ಗೀತೆಯಲ್ಲಿ ಪೂರ್ಣಿಮಾ ಮತ್ತು ಬಳಗ ಎ ಗ್ರೇಡ್ ಪಡೆದು
ಕೊಂಡಿದ್ದಾರೆ.
ಅರಬಿಕ್ ಸಾಹಿತ್ಯೋತ್ಸವದಲ್ಲಿ ,ಕತೆ ಹೇಳುವುದರಲ್ಲಿ ಆಯಿಶತ್ ತಬ್ಸೀರಾ ಎ ಗ್ರೇಡ್,ಅಭಿನಯ
ಗೀತೆಯಲ್ಲಿ ಫಾತಿಮತ್ ಜಲೀಲಾ ಎ ಗ್ರೇಡ್ ಪಡೆದು ಕೊಂಡಿರುತ್ತಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ,
ಕನ್ನಡ ಕಂಠಪಾಠದಲ್ಲಿ ಕ್ಷಿತೀಶಾ, ಎ ಗ್ರೇಡ್
ನೊಂದಿಗೆ ದ್ವಿತೀಯ,ಹಿಂದಿ ಭಾಷಣದಲ್ಲಿ ಕ್ಷಿತೀಶಾ ತೃತೀಯ ಸ್ಥಾನ ಪಡೆದಿರುತ್ತಾನೆ.ಉರ್ದು
ಕ್ವಿಜ್.ನಲ್ಲಿ ಆಮಿನತ್ ಹಂಸಾನಾ ಎ ಗ್ರೇಡ್
ಕನ್ನಡ ನಾಟಕದಲ್ಲಿ ಜೈನಬತ್ ಅಸ್ಮೀನಾ ಮತ್ತು
ಬಳಗ ಮಂಜೇಶ್ವರ ಉಪಜಿಲ್ಲೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಸಂಸ್ಕೃತ ಸಾಹಿತ್ಯೋತ್ಸವದಲ್ಲಿ ಸಿದ್ಧರೂಪೋಚ್ಛಾರಣಂ ನಲ್ಲಿ ಜ್ಯೋತಿಕಾ ದ್ವಿತೀಯ,ಸಂಸ್ಕೃತ
ಕಥಾರಚನೆಯಲ್ಲಿ ಬಿಂದು.ಎಸ್ ತೃತೀಯ,ಸಮಸ್ಯಾ ಪೂರ್ಣಂ ನಲ್ಲಿ ಕ್ಷಿತೀಶಾ
ಪ್ರಥಮ,ಪ್ರಶ್ನೋತ್ತರಿಯಲ್ಲಿ ಕ್ಷಿತೀಶಾ ದ್ವಿತೀಯ,ಸಂಸ್ಕೃತ ಸಮೂಹ ಗಾನದಲ್ಲಿ ಆದರ್ಶ ಮತ್ತು ಬಳಗ
ಎ ಗ್ರೇಡ್ ಪಡೆದಿರುತ್ತಾರೆ.
ವಿದ್ಯಾರಂಗ ಸಾಹಿತ್ಯೋತ್ಸವದಲ್ಲಿ,ಯು.ಪಿ.ವಿಭಾಗದ ಕವಿತಾ ರಚನೆಯಲ್ಲಿ ವಿದ್ಯಾಶ್ರೀ
ತೃತೀಯ,ಎಲ್.ಪಿ.ವಿಭಾಗದ ಒಗಟಿನಲ್ಲಿ ಗೌತಮ್ ಮತ್ತು ಪೂರ್ಣಿಮಾ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಉಪ ಜಿಲ್ಲಾ ಮಟ್ಟದ ಗಣಿತ ವಿಜ್ಞಾನ,ಸಮಾಜ ವೃತ್ತಿ ಪರಿಚಯ ಐ.ಟಿ.ಮೇಳಗಳಲ್ಲ್ಲೂ ನಮ್ಮ
ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಯು.ಪಿ.ವಿಭಾಗದ ಜಿಯೋ ಮೆಟ್ರಿಕ್ ಚಾರ್ಟ್ ನಲ್ಲಿ ಮೊಹಮ್ಮದ್ ಅನ್ಸಾಫ್ ತೃತೀಯ,ಕನ್ನಡ
ಟೈಪಿಂಗ್ ನಲ್ಲಿ ಅಕ್ಷತಾ ತೃತೀಯ,ಐ.ಟಿ.ಕ್ವಿಜ್ ನಲ್ಲಿ ಕ್ಷಿತೀಶ ತೃತೀಯ,ಗೊಂಬೆ ತಯಾರಿಯಲ್ಲಿ
ಬಿಂದು ಎಸ್ ಪ್ರಥಮ,ಹುರಿ ಹಗ್ಗ ಚಾಪೆ ತಯಾರಿಯಲ್ಲಿ ಜೈನಬತ್ ಅಸ್ಮೀನಾ ಎ ಗ್ರೇಡ್,ಮರದ ಕೆತ್ತನೆ
ಯಿಂದ ಕಲಾಕೃತಿ ನಿರ್ಮಿಸುವುದರಲ್ಲಿ ಮಿಥುನ್ ಪ್ರಥಮ, ಎಲ್.ಪಿ ವಿಭಾಗದ ಕೊಡೆ ತಯಾರಿಯಲ್ಲಿ ಶ್ರವಣ
ತೃತೀಯ,ಮರದ ಕೆತ್ತನೆಯಲ್ಲಿ ಅಬ್ದುಲ್ ಅನಸ್ ಪ್ರಥಮ,ಕಾರ್ಡ್ ತಯಾರಿಯಲ್ಲಿ, ಗೌತಮ್ ತೃತೀಯ ಸ್ಥಾನ
ಪಡೆದಿರುತ್ತಾರೆ.
ಉಪಜಿಲ್ಲಾ ಮಟ್ಟದ ಯು.ಪಿ.ವಿಭಾಗದ ವಿಜ್ಞಾನ ರಸಪ್ರಶ್ನೆಯಲ್ಲಿ ಕ್ಷಿತೀಶನಿಗೆ ದ್ವಿತೀಯ ಸ್ಥಾನ ಲಭಿಸಿರುತ್ತದೆ.
ಪೈವಳಿಕೆ ಪಂಚಾಯತಿನ ದಸರಾ ನಾಡ ಹಬ್ಬದಲ್ಲಿ ಭಾವ ಗೀತೆಯಲ್ಲಿ ಗೌತಮ್ ಪ್ರಥಮ,ಸಮೂಹ ಗಾನದಲ್ಲಿ
ಪೂರ್ಣಿಮಾ ಮತ್ತು ಬಳಗ ದ್ವಿತೀಯ,ಯು.ಪಿ ಭಾವ ಗೀತೆಯಲ್ಲಿ ಕ್ಷಿತೀಶ ದ್ವಿತೀಯ ಸ್ಥಾನ
ಪಡೆದಿರುತ್ತಾರೆ.
ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ಸೆಮಿನಾರ್ –ಗಣಿತ ಲೋಕಕ್ಕೆ ಕೇರಳೀಯ ಗಣಿತಜ್ಞರ ಕೊಡುಗೆ
ಎಂಬ ವಿಷಯದಲ್ಲಿ, ನಮ್ಮಶಾಲೆಯ ಕ್ಷಿತೀಶ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ
ಆಯ್ಕೆಯಾಗಿರುತ್ತಾನೆ.
ಪಂಚಾಯತು ಮಟ್ಟದ ವಿಜ್ಞಾನ ಸೆಮಿನಾರಿನಲ್ಲಿ 7ನೇ ತರಗತಿಯ ಬಿಂದು ಮತ್ತು ಬಳಗ ಪ್ರಥಮ ಸ್ಥಾನ
ಪಡೆದಿರುತ್ತಾರೆ.5ನೇ ತರಗತಿಯ ಜ್ಯೋತಿಕಾ ಬಳಗ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈ ಶಾಲಾ ವರ್ಷದ ಸಂಸ್ಕೃತ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ 5ನೇ ತರಗತಿಯ ಜ್ಯೋತಿಕಾ,6ನೇ
ತರಗತಿಯ ಅಕ್ಷತಾ,ಅಶ್ವಿನಿ.ಬಿ, 7ನೇ ತರಗತಿಯ ಕ್ಷಿತೀಶ ಎಂಬೀ ವಿದ್ಯಾರ್ಥಿಗಳು,ಉತ್ತೀರ್ಣರಾಗಿ ಗೌರವ
ಧನ ರೂಪಾಯಿ 300ನ್ನು ಪಡೆದಿರುತ್ತಾರೆ. ಇನ್ನೊಂದು ಅಭಿಮಾನದ ವಿಚಾರವೇನೆಂದರೆ,ನಮ್ಮೀ ಶಾಲೆಯ
ಪ್ರತಿಯೊಂದು ಚಟುವಟಿಕೆಯನ್ನು ಜಗತ್ತಿಗೆ ತಿಳಿಸುವ ಆಧುನಿಕ ತಂತ್ರ ಜ್ಞಾನವಾದ ಅಂತರ್ಜಾಲದ
ಬ್ಲಾಗ್ ನಿರ್ವಹಣೆಯಲ್ಲಿ, ನಮ್ಮ ಶಾಲೆಯು ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ಯು.ಪಿ.ವಿಭಾಗದಲ್ಲಿ
ದ್ವಿತೀಯ ಸ್ಥಾನ ಲಭಿಸಿರುವುದು ನಮ್ಮ ಸಾಧನೆಗೆ
ಮತ್ತೊಂದು ಗರಿ ಮೂಡಿಸಿದೆ.ಮಾತ್ರವಲ್ಲ,ಸುಮಾರು
3000 ಮಂದಿಯಷ್ಟು ಜನರು ಇದನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದು,ನಮಗೆ ಇನ್ನಷ್ಟು
ಶಕ್ತಿಯನ್ನು ತಂಬಿದ್ದಾರೆ.ನಮ್ಮ ಶಾಲೆಯ ಬ್ಲಾಗ್ www.11264ssaupschevar.blogspot.in
ನ್ನು ವೀಕ್ಷಿಸಿ ಇನ್ನಷ್ಟು ಪ್ರೋತ್ಸಾಹಿಸಬೇಕಾಗಿ
ವಿನಂತಿ.
ನಮ್ಮ ಶಾಲಾ ಪುಟಾಣಿಗಳು ಪಾಠ ಹಾಗೂ ಪಾಠೇತರ ಚಟುವಟಿಕೆಗಳಲ್ಲಿ ಇನ್ನಷ್ಟು ಸಾಧನೆ ಮಾಡಲು
ಅನುಕೂಲವಾಗಲು,ನಮ್ಮ ಶಾಲಾ ವಯವಸ್ಥಾಪಕರಾದ ಶ್ರೀ ಬಿ.ನಾರಾಯಣ ಭಟ್,ರವರು ಸುಮಾರು 50000ರೂಪಾಯಿ
ವೆಚ್ಚದ LCD Projector, Printer, Scanner ಗಳನ್ನು ಒದಗಿಸಿದ್ದು, ಅವರಿಗೆ ನಾವು ಋಣಿಯಾಗಿದ್ದೇವೆ.
ಈ ಶಾಲಾ ವರ್ಷದಲ್ಲಿ ನಿವೃತ್ತರಾಗುತ್ತಿರುವ ಹಿರಿಯ ಅಧ್ಯಾಪಕರಾದ ಶ್ರೀ ಶಂಕರ ನಾರಾಯಣ ಭಟ್
ರವರು,ಸ್ಟೇಜ್ ಲೈಟ್ ಹಾಗೂ ಪರದೆಗಳನ್ನು ನೀಡಿ ಮಕ್ಕಳ ಕಲಾ ಚಟುವಟಿಕೆಗಳನ್ನು
ಪ್ರೋತ್ಸಾಹಿಸಿರುವುದು ಸಂತಸದ ಸಂಗತಿಯಾಗಿದೆ.
ನಮ್ಮೀ ಶಾಲೆಯಲ್ಲಿ ,ಕಳೆದ 4 ವರ್ಷಗಳಿಂದ ನಿರಂತರ ನಮ್ಮ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿರುವ ಪರಮೇಶ್ವರ ಪಾವಲುಕೋಡಿ ಅವರು
ಉದಾರವಾಗಿ ನೀಡಿದ ಧ್ವನಿ ವರ್ಧಕ ಗಳ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆದುದನ್ನು ನಿಮ್ಮ
ಗಮನಕ್ಕೆ ತರುತ್ತಿದ್ದೇವೆ.
ನಮ್ಮ ಶಾಲೆಯ ಹಿತವನ್ನು ಬಯಸುವ ಸಂಘಗಳಾದ,S S F/S Y S/S B S Chevar ಇವರು ಶಾಲೆಗೆ 1000ಲೀಟರ್ ಗಾತ್ರದ ನೀರಿನ
ಟ್ಯಾಂಕಿಯನ್ನು ಒದಗಿಸಿರುವುದು ಸಂತಸವನ್ನು ತಂದಿದೆ.
ಕಳೆದ ಬೇಸಿಗೆ ರಜೆಯಲ್ಲಿ ಮೇ ತಿಂಗಳ 20ನೇ ತಾರೀಕಿನಿಂದ 10 ದಿವಸಗಳ ಕಾಲ ಇಂಗ್ಲಿಷ್ ಭಾ, ನೈಪುಣ್ಯವನ್ನು
ಹೆಚ್ಚಿಸುವುದಕ್ಕಾಗಿ ಇಂಗ್ಲಿಷ್ ಸ್ಪೀಕಿಂಗ್ ತರಬೇತಿಯನ್ನು ಉಚಿತವಾಗಿ ಆಯೋಜಿಸಿದ್ದೇವೆ.ಅತ್ಯಂತ
ಆಧುವಿಕ ರೀತಿಯಲ್ಲಿ ಆಯೋಜಿಸಿದ ಈ ತರಬೇತಿಗೆ,ಉತ್ತಮ ಪ್ರತಿಕ್ರಿಯೆ ದೊರೆತಿದ್ದು,ಮಂಜೇಶ್ವರ
ಉಪಜಿಲ್ಲಾ ಮಟ್ಟದಲ್ಲೂ ಪ್ರಶಂಸೆಗೆ ಪಾತ್ರರಾಗಿದ್ದೇವೆ.
ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಪಾಠ,ಆಟಗಳೊಂದಿಗೆ,ಪೌಷ್ಟಿಕಾಂಶವುಳ್ಳ ಆಹಾರವೂ
ದೊರೆಯುತ್ತಿದೆ,ವಾರದಲ್ಲಿ 4ದಿವಸ ಹಾಲಿನೊಂದಿಗೆ ಬೂಸ್ಟ್,ಹಾರ್ಲಿಕ್ಸ್,ವಾರ ದಲ್ಲಿ 2 ದಿನ
ಮೊಟ್ಟೆಅಥವಾ ಹಣ್ಣು,ಊಟದೊಂದಿಗೆ ತರಕಾರಿ ಪಲಾವ್ ಒದಗಿಸಲು ಸಾಧ್ಯವಾದುದು ರಕ್ಷಕರ ಸಹಾಯದಿಂದ.
ಶಾಲೆಯು ಸ್ವ ಸಹಾಯ ಸಂಘಗಳ ಉತ್ತಮ ಚಟುವಟಿಗೆಗಳಿಗೆ ವೇದಿಕೆಯಾಗಿ ಸಹಕರಿಸುತ್ತಿದೆ.ನೂತನ
ರೇಶನ್ ಕಾರ್ಡಿ ಗಾಗಿ ಉಚಿತವಾಗಿ ಅರ್ಜಿಯನ್ನು ಭರ್ತಿಗೊಳಿಸಲು,ಸೂಕ್ತ ಮಾಹಿತಿನೀಡಲು ಒಂದು ದಿನದ
ಶಿಬಿರವನ್ನು ಶಾಲೆಯಲ್ಲಿ ಏರ್ಪಡಿಸಿದ್ದು,ಇದಕ್ಕಾಗಿ
ಎಲ್ಲಾ ಶಿಕ್ಷಕ-ಶಿಕ್ಷಕಿಯರು ಸ್ವ ಸಹಾಯ ಸಂಘದವರು,ಭಜನಾ ಮಂಡಳಿಯವರು ಸಹಕರಿಸಿದ್ದಾರೆ.
ಕೇರಳದ ಮಾತೃ ಭಾಷೆ ಮಲಯಾಳವನ್ನು ಕಲಿಯಲು
ಇಚ್ಛಿಸುವ ವಿದ್ಯಾರ್ಥಿಗಳಿಗೆ, 1 ರಿಂದಲೇ ಪ್ರತ್ಯೇಕ ತರಗತಿಗಳನ್ನು ನಡೆಸಲಾಗುತ್ತಿದೆ.
ಗ್ರಾಮೀಣ ಸೊಗಡನ್ನು ಮತ್ತೆ ನೆನಪಿಸುವುದಕ್ಕಾಗಿ,ಅದನ್ನು ಉಳಿಸಿ
ಬೆಳೆಸುವುದಕ್ಕಾಗಿ,ಇತ್ತೀಚೆಗೆ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು,ಕೇರಳ ಗಡಿನಾಡ ಘಟಕ
ಕಾಸರಗೋಡು,ಇದರ ವತಿಯಿಂದ,ಜಾನಪದ ಸಂಚಾರ ಎಂಬ ಕಾರ್ಯ ಕ್ರಮವನ್ನು ವಿಜ್ರಂಬಣೆಯಿಂದ ನಡೆಸಲಾಯಿತು.
ನಮ್ಮೀ ಶಾಲೆಯು,ಉನ್ನತ ಪರಂಪರೆಯನ್ನು ಹೊಂದಿದ್ದು,ನಾಡಿನ,ಊರಿನ ಅಭಿಮಾನದ ಸಂಸ್ಥೆಯಾಗಿ
ಮಾರ್ಪಾಡುಗೊಳಿಸುವಲ್ಲಿ,ಪಿ.ಟಿ.ಎ.ಪದಾಧಿಕಾರಿಗಳು,ಆಡಳಿತ ಮಂಡಳಿ,ರಕ್ಷಕರು,ಶಿಕ್ಶಕರು,ಊರ
ಮಹನೀಯರು,ಶಾಲಾ ಹಿತೈಷಿಗಳು,ಉದಾರ ಮನಸ್ಸಿನಿಂದ,ಸಹಕಾರ ನೀಡುತ್ತೀರಿ,ಈಗಿನ ಸ್ಪರ್ಧಾತ್ಮಕ ಕಾಲ
ಚಕ್ರ ಉರುಳಿತ್ತಿರುವಾಗ,ಮುಂದೆಯೂ ನಿಮ್ಮೆಲ್ಲರ ಸಹಕಾರ,ಆಶೀರ್ವಾದ,ಶಾಲೆಗೆ ನಿರಂತರವಾಗಿ
ದೊರಕಿ,ಇನ್ನಷ್ಟು ಉನ್ನತಿಗೇರುವಂತಾಗಲಿ ಎಂದು ಆಶಿಸುತ್ತಾ ,ಅಭಿನಂದನೆಯನ್ನು ಸಲ್ಲಿಸುತ್ತಾ ಈ
ವರದಿಗೆ ಚುಕ್ಕಿ ಇಡುತ್ತಿದ್ದೇನೆ.
ಧನ್ಯವಾದಗಳು.