ಸಾಹಿತ್ಯೋತ್ಸವ
ಪ್ರಾಸ್ತಾವಿಕ ನುಡಿ ಶಾಲಾ ಮುಖ್ಯ ಶಿಕ್ಷಕರಿಂದ |
ಉದ್ಘಾಟನೆ ಶಾಲಾ ಪಿ.ಟಿ.ಎ ಅಧ್ಯಕ್ಷರಿಂದ |
4 ಹೌಸ್ ಗಳಲ್ಲಿ ವಿದ್ಯಾರ್ಥಿಗಳು |
ಅಭಿನಯ ಗೀತೆ-ಚಿನ್ಮಯಿ 2ನೇ ತರಗತಿ |
ಪದ್ಯ ಬಂಡಿ |
ನೃತ್ಯ-ಅಕ್ಷತಾ ಕೆ.6ನೇ ತರಗತಿ |
:ಛದ್ಮ ವೇಷ ಸ್ಪರ್ಧೆ |
ನೃತ್ಯ- ಸುನೀತಾ 7ನೇ ತರಗತಿ |
31-03-2015ರಂದು ಜರಗಲಿರುವ ಶಾಲಾ ವಾರ್ಷಿಕೊತ್ಸವದ ಅಂಗವಾಗಿ ಶಾಲಾ ಮಟ್ಟದ,ಸಾಹಿತ್ಯೋತ್ಸವವನ್ನು
3-3-2015ರಂದು ಏರ್ಪಡಿಸಲಾಯಿತು.ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪೈವಳಿಕೆ ಪಂಚಾಯತು ಸದಸ್ಯೆ
ಶ್ರೀಮತಿ ಸುಬೈದಾ ಯಂ.ಪಿ.ನೆರವೇರಿಸಿದರು.ಪಿ.ಟಿ.ಎ ಅಧ್ಯಕ್ಷ ಶ್ರೀ ಪರಮೇಶ್ವರ
ಪಾವಲುಕೋಡಿ,ಅಧ್ಯಕ್ಷ ಸ್ಥಾನ ವಹಿಸಿದರು.ಮುಖ್ಯ ಅತಿಥಿಗಳಾಗಿ ಹಿರಿಯ ಅಧ್ಯಾಪಕ ಶ್ರೀ ಶಂಕರ
ನಾರಾಯಣ ಭಟ್ ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿರು ವ ಪ್ರತಿಭೆಯನ್ನು ಗುರುತಿಸಿ ಪೋಷಿಸಲು
ಇಂತಹ ವೇದಿಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ಪಟ್ಟರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ
ಶ್ಯಾಮ ಭಟ್ ಮಾತನಾಡಿ, ಪರೀಕ್ಷೆಯಲ್ಲಿ ಅಂಕಗಳಿಸುವುದಕ್ಕೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು
ಪಠ್ಯೇತರ ಚಟುವಟಿಕೆಗಳಿಗೂ ನೀಡುಬೇಕು ಇದರಿಂದ ಉತ್ತಮ ವ್ಯಕ್ತಿತ್ವಹೊಂದಬಹುದೆಂದು ಅಭಿಪ್ರಾಯ
ಪಟ್ಟರು.ಇದೇ ಸಂದರ್ಭದಲ್ಲಿ ಶ್ರೀ ಪರಮೇಶ್ವರ ಪಾವಲುಕೋಡಿಯವರು ಶಾಲೆಗೆ ಧ್ವನಿ ವರ್ಧಕಗಳನ್ನು
ಕೊಡುಗೆಯಾಗಿ ನೀಡಿದರು.ಈ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಹಿಂದಿ ಅಧ್ಯಾಪಕರಾದ ಶ್ರೀ ಶಂಕರ ನಾರಾಯಣ
ಭಟ್,ಶಾಲಾ ರಂಗಮಂಟಪಕ್ಕೆ ಹ್ಯಾಲೋಜಿನ್ ಲ್ಯಾಂಪುಗಳನ್ನು ಹಾಗೂ ಪರದೆಯನ್ನು ಕೊಡುಗೆಯಾಗಿ
ನೀಡಿದರು.ಹಿರಿಯ ಅಧ್ಯಾಪಿಕೆ ಶ್ರೀಮತಿ ಸರಸ್ವತಿ ಅತಿಥಿಗಳನ್ನು ಸ್ವಾಗತಿಸಿದರು ಶ್ರೀಮತಿ ಪುಷ್ಪಾ
ವಂದಿಸಿದರು. ಶ್ರೀಮತಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.ರವಿಕುಮಾರ್ ಸಹಕರಿಸಿದರು.
No comments:
Post a Comment