Wednesday, December 31, 2014
RAMANUJAN BIRTHDAY
ಡಿಸೆಂಬರ್
22 ಮಹಾನ್ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಜನ್ಮ ದಿನ
ಗಣಿತದಲ್ಲಿ ಅಪಾರ
ಪಾಂಡಿತ್ಯವನ್ನು ಸ್ವಂತವಾಗಿ ಗಳಿಸಿಕೊಂಡಿದ್ದ ಶ್ರೀನಿವಾಸ ರಾಮಾನುಜನ್ ಅಲ್ಪಾಯುವಾಗಿ
ತೀರಿಕೊಂಡರು.ಚಿಕ್ಕ ವಯಸ್ಸಿಗೆ ಅವರು ಗಣಿತದ ಬಹು ದೊಡ್ಡ ಸಮಸ್ಯೆಗಳನ್ನು ಬಿಡಿಸ
ಬಲ್ಲವರಾಗಿದ್ದರು.1887 ಡಿಸೆಂಬರ್ 22ರಂದು ತಮಿಳುನಾಡಿನ ಕುಂಭಕೋಣಂನಲ್ಲಿ ಶ್ರೀನಿವಾಸ
ರಾಮಾನುಜನ್ ಜನಿಸಿದರು.ತಂದೆ ಶ್ರೀನಿವಾಸ ಅಯ್ಯಂಗಾರ್,ತಾಯಿ ನಾಮ ಗಿರಿ ದೇವಿ.1903ರಲ್ಲಿ ಶ್ರೀನಿವಾಸ
ರಾಮಾನುಜನ್ ಮೆಟ್ರಿಕ್ಯುಲೇಶನ್ ಮುಗಿಸಿದರು.ಆ ವೇಳೆಗೆ ಅವರು ಲೋನಿ ಎಂಬಾತನ ಟ್ರಿಗ್ನೋಮೆಟ್ರಿ
ಹಾಗೂ ಕಾರ್ ಎಂಬ ಲೇಖನ Synopsis
of pure and applied Mathematics ಎಂಬ
ಗ್ರಂಥವನ್ನು ಓದಿ ಅರ್ಥೈಸಿಕೊಂಡಿದ್ದರು
Sunday, December 28, 2014
BABA AMTE BIRTH DAY
ಡಿಸೆಂಬರ್ 26-ಬಾಬಾ ಆಮ್ಟೆ ಜನ್ಮ
ದಿನ
ಮಹಾತ್ಮಾ ಗಾಂಧೀಜಿಯವರ ಆದರ್ಶಗಳನ್ನು ತನ್ನ ಜೀವನದಲ್ಲಿ ಚಾಚೂ ತಪ್ಪದ ಅಳವಡಿಸಿದ ಮುರಳೀಧರ್
ದೇವದಾಸ್ ಆಮ್ಟೆ,ಮಹಾರಾಷ್ಟ್ರದ ವರೋರದಲ್ಲಿ 1914ರ ಡಿಸೆಂಬರ್ 26ರಂದು ಜನಿಸಿದರು.
ಸತ್ಯ ಸಂಧತೆಯನ್ನು ವಕೀಲಿ ವೃತ್ತಿಯಲ್ಲಿ ಪಾಲಿಸಲು ಕಷ್ಟವಾಗಿ,ಆ ವೃತ್ತಿಯನ್ನು ಬಿಟ್ಟು,ವೃದ್ಧರ,ಕುಷ್ಠರೋಗಿಗಳ,ಬಡಬಗ್ಗರ
ಸೇವೆಯಲ್ಲಿ ತಮ್ಮ ಜೀವನವನ್ನು ತೊಡಗಿಸಿಕೊಂಡರು. ಕುಷ್ಠರೋಗಿಗಳನ್ನು ಹೀನಾಯವಾಗಿ ಕಾಣುತ್ತಿದ್ದ ಆ
ಕಾಲದಲ್ಲಿ,ಆಮ್ಟೆ ತನ್ನ ಶರೀರಕ್ಕೆ ರೇಗಾಣುಗಳನ್ನು ಚುಚ್ಚಿಸಿ ಸಮಾಜದ ಕಣ್ತೆರೆಸಿದರು.1956ರಲ್ಲಿ ಕುಷ್ಠರೋಗಿಗಳ
ಆಶ್ರಯಕ್ಕಾಗಿ ಆನಂದ ಭವನ ಎಂಬ ಆಶ್ರಮವನ್ನು ಸ್ಥಾಪಿಸಿದರು.ಮಾನವ ಹಕ್ಕುಗಳ ರಕ್ಷಣೆಗಾಗಿ
ಹೋರಾಡಿದರು.1990ರಲ್ಲಿ ಸರ್ದಾರ್ ಸರೋವರದ ಅಣೆಕಟ್ಟಿನ ವಿರುದ್ಧ ಚಳವಳಿ ನಡೆಸಿದರು.ಮೇಧಾ
ಪಾಟ್ಕರ್ ರ ಜತೆಯಲ್ಲಿ ಪರಿಸರ ಸಂರಕ್ಷಣೆಗಾಗಿ ದುಡಿದರು.
ಪದ್ಮ ವಿಭೂಷಣ.ಮ್ಯಾಗ್ಸಸೆ ಮೊದಲಾದ ಪ್ರಶಸ್ತಿಗಳು ದೊರಕಿದವು.
WORLD AGRICULTURIST'S DAY
ಡಿಸೆಂಬರ್ 23,ವಿಶ್ವ ರೈತರ ದಿನ
ರೈತರೇ ದೇಶದ ಬೆನ್ನೆಲುಬು.ರೈತರು ಕಷ್ಟಪಟ್ಟು ದುಡಿದು ಬೆಳೆಗಳನ್ನು ಬೆಳೆಸುವುದರಿಂದ ನಮಗೆ
ಬೇಕಾದ ಆಹಾರ ಲಭಿಸುವುದು.ದೇಶದ ಆರೋಗ್ಯವನ್ನು ಕಾಪಾಡುವಲ್ಲಿ ರೈತರ ಪಾತ್ರ ಹಿರಿದು.
ಇಂದು ರೈತರು ಕಷ್ಟದ ಜೀವನವನ್ನು ನಡೆಸಲು ಅನೇಕ ಕಾರಣಗಳಿವೆ.ಅಕಾಲಿಕ ಮಳೆ,ಬೆಳೆಗೆ ಸೂಕ್ತವಾದ
ಬೆಲೆ ಸಿಗದಿರುವುದು,ಸೂಕ್ತ ಮಾರುಕಟ್ಟೆ ಇಲ್ಲದಿರುವುದು ಇತ್ಯಾದಿ.
ರೈತರ ಕಷ್ಟಗಳನ್ನು ಅರಿತು ಅವರಲ್ಲಿ ಆತ್ಮ ಸ್ಥೈರ್ಯ ತುಂಬಿ ಕೃಷಿಕರನ್ನು
ಪ್ರೋತ್ಸಾಹಿಸುವುದಕ್ಕಾಗಿ ಈದಿನವನ್ನು ವಿಶ್ವದಾದ್ಯಂತ ರೈತರ ದಿನವನ್ನಾಗಿ ಆಚರಿಸಲಾಗುತ್ತಿದೆ
ಜೈ ಜವಾನ್-ಜೈ ಕಿಸಾನ್
Friday, December 19, 2014
CHRISTMAS FESTIVAL CELEBRATION
ಕ್ರಿಸ್ ಮಸ್ ಹಬ್ಬದ
ಆಚರಣೆ ಅಂಗವಾಗಿ ಏರ್ಪಡಿಸಲ್ಪಟ್ಟ ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಅಧ್ಯಾಪಕ ಶ್ರೀ ಶಂಕರ
ನಾರಾಯಣ ಭಟ್ ನೆರನೇರಿಸಿ ಹಬ್ಬಗಳ ಮಹತ್ವವನ್ನು ವಿವರಿಸಿದರು.ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ
ಸ್ಟಾಫ್ ಕಾರ್ಯದರ್ಶಿ ವಿನೋದ ಮಾಸ್ಟರ್ ಕ್ರಿಸ್ಮಸ್ ಗೀತೆ ಹಾಡಿದರು.ಮುಖ್ಯ ಅತಿಥಿಗಳಾಗಿ
ಭಾಗವಹಿಸಿದ ಹಿರಿಯ ಅಧ್ಯಾಪಿಕೆ ಶ್ರೀಮತಿ ಸರಸ್ವತಿ ಟೀಚರ್ ದಿನ ದ ಮಹತ್ವವನ್ನು
ವಿವರಿಸಿದರು.ರವಿಕುಮಾರ್ ಏಸುವಿನ ಜೀವನ ಚರಿತತ್ರೆಯನ್ನು ವಿವರಿಸಿದರು.
ಮಕ್ಕಳಿಗೆ ವೀಡಿಯೋ
ಪ್ರದರ್ಶನ ಏರ್ಪಡಿಸಲಾಯಿತು.ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.ಶ್ರೀಮತಿ ರಾಜೇಶ್ವರಿ, ಶ್ರೀಮತಿ
ಪುಷ್ಪ ಲತಾ,ಪ್ರಸಾದ್ ಮಾಸ್ಟರ್,ಗೋಪಾಲ ಕೃಷ್ಣ ಭಟ್ ಸಹಕರಿಸಿದರು.PTA ಅಧ್ಯಕ್ಷ ಪರಮೇಶ್ವರ ಪಾವಲುಕೋಡಿ ಉಪಸ್ಥಿತರಿದ್ದರು.
Thursday, December 18, 2014
HAPPY CRISTMAS
ಬರುತಿದೆ.. ಬರುತಿದೆ.... ಕ್ರಿಸ್ಮಸ್
ಹಬ್ಬ
Powered by Akshatha 6th Std |
ಏಸು ಕ್ರಿಸ್ತ
ಕ್ರೈಸ್ತ ಮತ ಸ್ಥಾಪಕನಾದ ಏಸು ಕ್ರಿಸ್ತ ಅಥವಾ ಜೀಸಸ್,ಕ್ರಿ.ಪೂ.4ರಲ್ಲಿ ಜೆರೂಸಲೇಂ ಬಳಿಯ ಬೆತ್ಲೇಹೇಮ್ಎಂಬಲ್ಲಿ ಜನಿಸಿದನು.ತಾಯಿಯ ಹೆಸರು ಮೇರಿ.ಈಕೆ ಕನ್ಯಾ ಮಾತೆ ಎಂದೇ ಹೇಳಲಾಗುತ್ತದೆ.
ಬಡಗಿ ವೃತ್ತಿಯಲ್ಲಿ ತೊಡಗಿದ್ದ ಏಸು ಕ್ರಿಸ್ತನು 30ನೇ ವಯಸ್ಸಿನಲ್ಲೇ ಧರ್ಮೋಪದೇಶದಲ್ಲಿ
ತೊಡಗಿದನು.ಅವನು ಪ್ರಚಾರ ಮಾಡಿದ ತತ್ತ್ವಗಳು ಬಹು ಬೇಗನೆ ಜನರನ್ನು ಆಕರ್ಶಿದವು.ಇದರಿಂದ
ಆಡಳಿತಗಾರರಿಗೆ ಭಯವುಂಟಾಯಿತು.ರೋಮನ್ ಗವರ್ನರ್ ಪಿಲಾತ ಏಸುವಿಗೆ ಮರಣ ದಂಡನೆ ವಿಧಿಸಿದನು.
ಏಸುವನ್ನು ಕಾಲ್ವರಿ ಬೆಟ್ಟದ ಮೇಲೆ ಶಿಲುಬೆಗೇರಿಸಿ,ಮೊಳೆಗಳನ್ನು ಹೊಡೆದು ಕ್ರೂರವಾಗಿ
ಕೊಂದರು.ದೇವರೇ ಇವರು ಏನು ಮಾಡುತ್ತಿದ್ದಾರೆಂದು
ಇವರಿಗೆ ತಿಳಿಯದು.ಇವರನ್ನು ಕ್ಷಮಿಸು ಎಂದು ಪ್ರಾರ್ಥಿಸಿ ಪ್ರಾಣ
ಬಿಟ್ಟನು.(ಕ್ರಿ.ಪೂ.33).ಕ್ರಿಸ್ತನ ಉಪದೇಶಗಳ ಸಂಗ್ರಹವಾದ ಬೈಬಲ್ ಕ್ರೈಸ್ತ ಮತದ ಪವಿತ್ರ
ಗ್ರಂಥವಾಗಿದೆ.
Subscribe to:
Posts (Atom)