ಡಿಸೆಂಬರ್ 10 ಮಾನವ
ಹಕ್ಕುಗಳ ದಿನ
ಮಾನವ ಹಕ್ಕುಗಳ ಚಳವಳಿಯ ವಿಕಾಸವು,ಹೊಸ ಜಗತ್ತನ್ನು
ರೂಪಿಸುವುದರಲ್ಲಿ ಮನುಷ್ಯನ ಪ್ರಯತ್ನವನ್ನು ಸೂಚಿಸುತ್ತದೆ.ಚರಿತ್ರೆಯನ್ನೊಮ್ಮೆ ಗಮನಿಸಿದರೆ,ಶಕ್ತಿ
ಶಾಲಿ ಹಿಂದುಳಿದ ಗಂಪು ,ಮುಂದುವರಿದ ಗಂಪಿನ ಜೀವನವನ್ನ ನಿರ್ಧರಿಸುವುದನ್ನು ಕಾಣುತ್ತೇವೆ.ಇಂದು
ತಂತ್ರ ಜ್ಞಾನದ ಬಲ ದಿಂದ ಜಗತ್ತು ಕಿರಿದಾಗಿದ್ದು,ಮಾನವ ಹಕ್ಕುಗಳ ಕ್ರಿತಾದ ಚಳವಳಿಗಳು
ಜಗತ್ತಿನಾದ್ಯಂತ ಪಸರಿಸಿವೆ.ಆದರೂ ಇಂದು ಎಷ್ಟೋ ಕಡೆ ಮಾನವ ಹಕ್ಕುಗಳ
ಉಲ್ಲಂಘನೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ.
2ನೇ ಜಾಗತಿಕ ಯುದ್ಧದ ನಂತರ ಯುಕ್ತ ರಾಷ್ಟ್ರ ಸಂಘ,ಜಗತ್ತಿನಲ್ಲಿ ಶಾಂತಿ ನೆಲೆಸಲು
ಪ್ರಯತ್ನಿಸಿತು.ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ಕುರಿತಾಗಿ ಚಿಂತಿಸಿ,1948ರ ಡಿಸೆಂಬರ್ 10 ರಂದು
ಮಾನವ ಹಕ್ಕುಗಳ ಪಟ್ಟಿ ತಯಾರಿಸಿ ,ಘೋಷಿಸಿತು.ಇದು ಮಾನವನ ಮೂಲ ಭೂತ
ಹಕ್ಕುಗಳನ್ನು,ಸ್ವಾತಂತ್ರ್ಯವನ್ನು ಅನುಷ್ಠಾನಕ್ಕೆ ತರಲು ಕರೆಯಿತ್ತಿತು.ವಿದ್ಯಾರ್ಥಿಗಳಿಗೆ
ಶಿಕ್ಷಣವನ್ನು ಪಡೆಯುವ ಹಕ್ಕೂ ಇದರಲ್ಲಿ ಸೇರಿದೆ.
ಮಾನವ ಹಕ್ಕುಗಳ ದಿನವು ಹಕ್ಕುಗಳನ್ನು ಸಂರಕ್ಷಿಸುವುದನ್ನು ನೆನಪಿಸುವುದರೊಂದಿಗೆ,ನಮ್ಮ
ಕರ್ತವ್ಯವನ್ನು ಅನುಷ್ಠಾನಿಸಲು ಎಚ್ಚರಿಸುತ್ತದೆ.
No comments:
Post a Comment