ಡಿಸೆಂಬರ್ 9 ರಾಜ ಗೋಪಾಲಾಚಾರಿ
ಜನ್ಮ ದಿನ
ಭಾ
|
ರತ ಸ್ವಾತಂತ್ರ್ಯ
ಹೋರಾಟದಲ್ಲಿ ಭಾಗವಹಿಸಿ ಸ್ವತಂತ್ರ ಭಾರತದಲ್ಲಿ ಹಲವು ಅಧಿಕಾರಗಳನ್ನು ವಹಿಸಿಕೊಂಡು ದೇಶ ಸೇವೆ
ಮಾಡಿದ ಪ್ರತಿಭಾನ್ವಿತರು ಚಕ್ರವರ್ತಿ ರಾಜ ಗೋಪಾಲಾಚಾರಿ ಯವರು.ಇವರನ್ನು ರಾಜಾಜಿ ಎಂದು
ಕರೆಯುತ್ತಿದ್ದರು.ಇವರು 1878ರ ಡಿಸೆಂಬರ್ 9 ರಂದು ಸೇಲಂ ಜಿಲ್ಲೆಯ ತೊರಪ್ಪಳ್ಳಿ ಎಂಬ
ಗ್ರಾಮದಲ್ಲಿ ಜನಿಸಿದರು.ತಂದೆ ಚಕ್ರವರ್ತಿ ಅಯ್ಯಂಗಾರ್.ತಾಯಿ ಚಿದಂಬರಮ್ಮಾಳ್.ಬೆಂಗಳೂರಿನಲ್ಲಿ
ವಿದ್ಯಾಭ್ಯಾಸ ಮಾಡಿದ ರಾಜಾಜಿ ಕಾನೂನಿನಲ್ಲಿ ಪದವೀಧರರಾಗಿ ವಕೀಲ ವೃತ್ತಿ ಮಾಡಿದರು.ಆಗ ಭಾರತ
ಬ್ರಿಟಿಷರ ಆಡಳಿತದಲ್ಲಿತ್ತು.ರಾಜಾಜಿಯವರೂ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.
ಸ್ವತಂತ್ರ ಭಾರತದ ಮೊದಲ
ಗವರ್ನರ್ ಜನರಲ್ ಆಗಿ ರಾಜ ಗೋಪಾಲಾಚಾರಿಯವರು
ಆಯ್ಕೆಯಾದರು.ನಂತರ ತಮಿಳುನಾಡಿನ ಮುಖ್ಯಮಂತ್ರಿಯೂ ಆಗಿದ್ದರು.ರಾಜಾಜಿಯವರು
ಒಳ್ಳೆಯ ಬರಹಗಾರರಾಗಿದ್ದರು.ಅವರು ರಚಿಸಿದ ರಾಮಾಯಣ,ಭಗವದ್ಗೀತೆ,ಉಪನಿಷತ್ತಿನ ಕಥೆಗಳು
ಜನಪ್ರಿಯವಾಗಿವೆ.ತಮಿಳು ಹಾಗೂ ಇಂಗ್ಲಿಷ್ ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದ್ದರು.ರಾಜಾಜಿಯವರು
ಒಳ್ಳೆಯ ವಾಗ್ಮಿಯಾಗಿದ್ದರು.
No comments:
Post a Comment