ಬರುತಿದೆ.. ಬರುತಿದೆ.... ಕ್ರಿಸ್ಮಸ್
ಹಬ್ಬ
Powered by Akshatha 6th Std |
ಏಸು ಕ್ರಿಸ್ತ
ಕ್ರೈಸ್ತ ಮತ ಸ್ಥಾಪಕನಾದ ಏಸು ಕ್ರಿಸ್ತ ಅಥವಾ ಜೀಸಸ್,ಕ್ರಿ.ಪೂ.4ರಲ್ಲಿ ಜೆರೂಸಲೇಂ ಬಳಿಯ ಬೆತ್ಲೇಹೇಮ್ಎಂಬಲ್ಲಿ ಜನಿಸಿದನು.ತಾಯಿಯ ಹೆಸರು ಮೇರಿ.ಈಕೆ ಕನ್ಯಾ ಮಾತೆ ಎಂದೇ ಹೇಳಲಾಗುತ್ತದೆ.
ಬಡಗಿ ವೃತ್ತಿಯಲ್ಲಿ ತೊಡಗಿದ್ದ ಏಸು ಕ್ರಿಸ್ತನು 30ನೇ ವಯಸ್ಸಿನಲ್ಲೇ ಧರ್ಮೋಪದೇಶದಲ್ಲಿ
ತೊಡಗಿದನು.ಅವನು ಪ್ರಚಾರ ಮಾಡಿದ ತತ್ತ್ವಗಳು ಬಹು ಬೇಗನೆ ಜನರನ್ನು ಆಕರ್ಶಿದವು.ಇದರಿಂದ
ಆಡಳಿತಗಾರರಿಗೆ ಭಯವುಂಟಾಯಿತು.ರೋಮನ್ ಗವರ್ನರ್ ಪಿಲಾತ ಏಸುವಿಗೆ ಮರಣ ದಂಡನೆ ವಿಧಿಸಿದನು.
ಏಸುವನ್ನು ಕಾಲ್ವರಿ ಬೆಟ್ಟದ ಮೇಲೆ ಶಿಲುಬೆಗೇರಿಸಿ,ಮೊಳೆಗಳನ್ನು ಹೊಡೆದು ಕ್ರೂರವಾಗಿ
ಕೊಂದರು.ದೇವರೇ ಇವರು ಏನು ಮಾಡುತ್ತಿದ್ದಾರೆಂದು
ಇವರಿಗೆ ತಿಳಿಯದು.ಇವರನ್ನು ಕ್ಷಮಿಸು ಎಂದು ಪ್ರಾರ್ಥಿಸಿ ಪ್ರಾಣ
ಬಿಟ್ಟನು.(ಕ್ರಿ.ಪೂ.33).ಕ್ರಿಸ್ತನ ಉಪದೇಶಗಳ ಸಂಗ್ರಹವಾದ ಬೈಬಲ್ ಕ್ರೈಸ್ತ ಮತದ ಪವಿತ್ರ
ಗ್ರಂಥವಾಗಿದೆ.
No comments:
Post a Comment