ಡಿಸೆಂಬರ್ 9-ಭ್ರಷ್ಟಾಚಾರ ವಿರೋಧಿ ದಿನ
ಭ್ರಷ್ಟಾಚಾರ ಎಂಬ ಪಿಡುಗು ಇಂದು ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿದೆ.ಇದು ಒಂದು ದೇಶದ
ಅಭಿವೃದ್ಧಿಗೆ ಮಾರಕ.ಇದು ಸಮಾಜಕ್ಕೆ ಅಂಟಿದ ಕ್ಯಾನ್ಸರ್.ಲಂಚ ಪಡೆಯುವುದು,ಸರಕಾರದ ನೀತಿ
ನಿಯಮಗಳನ್ನು ಗಾಳಿಗೆ ತೂರುವುದು,ಅಕ್ರಮವಾಗಿ ಗಳಿಸುವುದು,ಸಮಾಜದ ಆಸ್ತಿಯನ್ನು ಕೊಳ್ಳೆ
ಹೊಡೆಯುವುದು,ಕಪ್ಪು ಹಣ ಸಂಗ್ರಹ ಮುಂತಾದವುಗಳು ಇಂದು ಸಮಾಜದಲ್ಲಿ ಕಾಣುವ ಭ್ರಷ್ಟಾಚಾರದ
ಕೆಲವೊಂದು ತುಣುಕುಗಳು.ಸಮಾಜದಲ್ಲಿರುವ ಭ್ರಷ್ಟಾಚಾರದಿಂದಾಗಿ ಹೆಚ್ಚು ಕಷ್ಟಗಳನ್ನು
ಅನುಭವಿಸುವವರು ಮಧ್ಯಮ ಹಾಗೂ ಕೆಳವರ್ಗದ ಬಡವರು.
ಭ್ರಷ್ಟಾಚಾರವನ್ನು ವಿರೋಧಿಸಿ,ತಡೆದು,ಸಂಪೂರ್ಣ
ಕೊನೆಗೊಳಿಸುವ ಪ್ರತಿಜ್ಞೆಯನ್ನು ನಾವೆಲ್ಲರೂ ಕೈಗೊಳ್ಳೋಣ.
No comments:
Post a Comment