ಜನವರಿ 31-ದ.ರಾ.ಬೇಂದ್ರೆ ಜನ್ಮ ದಿನ
ದತ್ತಾತ್ರೇಯ ರಾಮ ಚಂದ್ರ
ಬೇಂದ್ರೆಯವರು 1896ರ ಜನವರಿ 31 ರಂದು ಧಾರವಾಡದ ವೈದಿಕ ಮನೆತನದಲ್ಲಿ ಜನಿಸಿದರು.ತಂದೆ ರಾಮ
ಚಂದ್ರ,ತಾಯಿ ಅಂಬವ್ವ. ದ.ರಾ.ಬೇಂದ್ರೆಯವರು ಅಂಬಿಕಾ ತನಯ ದತ್ತ ಎಂಬ ಕಾವ್ಯ ನಾಮದೊಂದಿಗೆ
ಕಥೆ,ಕವಿತೆಗಳನ್ನು ಬರೆಯುತ್ತಿದ್ದರು.ಅವರ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ,ಇಳಿದು
ಬಾ ತಾಯೆ ಇಳಿದು ಬಾ,ಭೃಂಗದ ಬನ್ನೇರಿ ಬಂತು ಕಲ್ಪನಾ ವಿಲಾಸ,ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾ
ಹೊಯ್ದ,ಮುಂತಾದ ಜನಪ್ರಿಯ ಕಾವ್ಯಗಳನ್ನು
ಬರೆದಿದ್ದಾರೆ.ಹಳಾದ ದಂಡ್ಯಾಗ,,ಗರಿ,ಸಖೀ ಗೀತ,ನಾದ ಲೀಲೆ,ಉಯ್ಯಾಲೆ,ನಾಕು ತಂತಿ ,ಮುಂತಾದ
ಕೃತಿಗಳನ್ನು ಬರೆದಿದ್ದಾರೆ.1974ರಲ್ಲಿ ಅವರ ನಾಕುತಂತಿ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ
ಲಭಿಸಿತು.ತನಗೆ ಕಾವ್ಯವೇ ಜೀವನ ಎನ್ನುತ್ತಿದ್ದ ಬೇಂದ್ರದೆಯವರು 1981ರ ಅಕ್ಟೋಬರ್ 26ರಂದು ಇಹಲೋಕ
ಯಾತ್ರೆ ಮುಗಿಸಿದರು. Saturday, January 30, 2016
ಕುಷ್ಟ ರೋಗ ನಿರ್ಮೂಲನಾ ದಿನ
ಜನವರಿ 30 ಕುಷ್ಟ
ರೋಗ ನಿರ್ಮೂಲನಾ ದಿನ
|
||
ಗಾಂಧೀಜಿಯವರು ತಮ್ಮ ಸಬರಮತಿ ಆಶ್ರಮದಲ್ಲಿ
ಕುಷ್ಟ ರೋಗಿಗಳ ಸೇವೆಯನ್ನು ಮಾಡುತ್ತಿದ್ದರು.ಕಳೆದ 6 ದಶಕಗಳಿಂದ ಕುಷ್ಟ ರೋಗ
ನಿರ್ಮೂಲನೆಯಲ್ಲಿ ಸಾಕಷ್ಟು ಪ್ರಗತಿಯನ್ನು ಕಂಡಿದೆ.ಇನ್ನು ಸಂಪೂರ್ಣ ನಿರ್ಮೂಲನೆ ಮಾಡಲು
ನಾವೆಲ್ಲರೂ ಪಣ ತೊಡ ಬೇಕಾಗಿದೆ.ಈ ನಿಟ್ಟಿನಲ್ಲಿ ಜನವರಿ 30ನ್ನು ಕುಷ್ಟ ರೋಗ ನಿರ್ಮೂಲನಾ ದಿನವನ್ನಾಗಿ
ಆಚರಿಸಲಾಗುತ್ತಿದೆ.
|
Thursday, January 28, 2016
METRIC MELA
ಚೇವಾರಿನಲ್ಲಿ ಗಣಿತದ ಮೆಟ್ರಿಕ್ ಮೇಳ
ಚೇವಾರು ಶ್ರೀ ಶಾರದಾ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಟ್ಟದ ಗಣಿತ ಮೇಳ ವಿವಿಧ ಕಾರ್ಯಕ್ರಮಗಳೊಂದಿಗೆ
ಜರಗಿತು.ಮೇಳವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಇಂದಿರಾ ಮಿತ್ತಡ್ಕ ಉದ್ಘಾಟಿಸಿ,ಗಣಿತ
ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರ,ವಿದ್ಯಾರ್ಥಿಗಳು ಗಣಿತದಲ್ಲಿ ಆಸಕ್ತಿಯನ್ನು ಬೆಳೆಸಿ ಇನ್ನಷ್ಟು
ಕೊಡುಗೆಗಳನ್ನು ನೀಡ ಬೇಕೆಂದು ಕರೆಯಿತ್ತರು.ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಶಾಲಾ
ಮುಖ್ಯ ಶಿಕ್ಷಕ ಶ್ಯಾಮ ಭಟ್,ಎಲ್ಲಾ ಕ್ಷೇತ್ರದ ಬೆಳವಣಿಗೆಗೆ ಗಣಿತವು ಅಗತ್ಯವಾಗಿದ್ದು,ಗಣಿತ
ಕಲಿಕೆಯು ಅನಿವಾರ್ಯವಾಗಿದೆ.ಗಣಿತವನ್ನು ಸರಳವಾಗಿ ಅರ್ಥೈಸಲು ಇಂತಹ ಶಿಬಿರಗಳು ಸಹಕಾರಿ ಎಂದು
ಅಭಿಪ್ರಾಯಪಟ್ಟರು.ಅಧ್ಯಾಪಿಕೆ ಸರಸ್ವತಿ ಶುಭ ಹಾರೈಸಿದರು.ಪ್ರಸಾದ್ ಸ್ವಾಗತಿಸಿದರು.ಪ್ರಮೀಳಾ
ವಂದಿಸಿದರು.ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.ತದನಂತರ ಗಣಿತದ ವಿವಿಧ ಚಟುವಟಿಕೆಗಳನ್ನು
ನೆರವೇರಿಸಲಾಯಿತು.ವಿದ್ಯಾರ್ಥಿಗಳು ತಯಾರಿಸಿದ ಹಸ್ತ ಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು.ಸಂಪನ್ಮೂಲ ವ್ಯಕ್ತಿಯಾಗಿ ವಿನೋದ್ ಚೇವಾರ್ ಸಹಕರಿಸಿದರು.
Monday, January 25, 2016
REPUBLIC DAY CELEBRATION
ಚೇವಾರಿನಲ್ಲಿ ಗಣರಾಜ್ಯೋತ್ಸವ ಆಚರಣೆ
ಚೇವಾರು ಶ್ರೀ ಶಾರದಾ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವದಂದು ಪೈವಳಿಕೆ ಗ್ರಾಮ ಪಂಚಾಯತು ಸದಸ್ಯರಾದ ಶ್ರೀ
ಹರೀಶ್ ಬೊಟ್ಟಾರಿಯವರು ಧ್ವಜಾರೋಹಣ ನೆರವೇರಿಸಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಇಂದಿರಾ
ಮಿತ್ತಡ್ಕ ಶುಭ ಹಾರೈಸಿದರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಸ್ವಾಗತಿಸಿ,ಪ್ರಾಸ್ತಾವಿಕ
ನುಡಿಗಳನ್ನಾಡಿದರು.ಶಿಕ್ಷಕಿ ಸರಸ್ವತಿ ವಂದಿಸಿದರು.ವಿನೋದ್ ಚೇವಾರು ಕಾರ್ಯಕ್ರಮ ನಿರೂಪಿಸಿದರು.ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.ಸಿಹಿ ತಿಂಡಿ ವಿತರಿಸಲಾಯಿತು
Subscribe to:
Posts (Atom)