Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Wednesday, July 12, 2017

PTA GENERALBODY MEETING INVITATION



ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು
ಅಂಚೆ: ಕುಡಾಲುಮೇರ್ಕಳ
ಮಾನ್ಯರೇ,
ನಮ್ಮ ಶಾಲಾ PTA/MPTA/SMC/NMP ಸದಸ್ಯರ ಮಹಾ
ಸಭೆಯು ದಿನಾಂಕ 18-7-2017 ನೇ ಮಂಗಳವಾರ ಅಪರಾಹ್ನ
2 ಗಂಟೆಗೆ ಸರಿಯಾಗಿ ಚೇವಾರು ಶಾಲೆಯಲ್ಲಿ ಕರೆಯಲಾಗಿದೆ.
ಸಭೆಗೆ ತಮ್ಮ ಆಗಮನವನ್ನು ಅಪೇಕ್ಷಿಸಲಾಗಿದೆ.
ಕಾರ್ಯಕ್ರಮಗಳು:-
Ø  ವಾರ್ಷಿಕ ಮಹಾ ಸಭೆ-ನೂತನ ಪದಾಧಿಕಾರಿಗಳ ಆಯ್ಕೆ.
Ø  ವರದಿ-ಆಯವ್ಯಯ ಮಂಡನೆ.
Ø  ಇಂಗ್ಲಿಷ್-ಗಣಿತ ವಿಶೇಷ ತರಗತಿಗಳ ಉದ್ಘಾಟನೆ.


ಸ್ಥಳ: ಚೇವಾರು
ತಾ: 11-7-2017                         ಸಂಚಾಲಕರು


ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು
ಅಂಚೆ: ಕುಡಾಲುಮೇರ್ಕಳ
ಮಾನ್ಯರೇ,
ನಮ್ಮ ಶಾಲಾ PTA/MPTA/SMC/NMP ಸದಸ್ಯರ ಮಹಾ
ಸಭೆಯು ದಿನಾಂಕ 18-7-2017 ನೇ ಮಂಗಳವಾರ ಅಪರಾಹ್ನ
2 ಗಂಟೆಗೆ ಸರಿಯಾಗಿ ಚೇವಾರು ಶಾಲೆಯಲ್ಲಿ ಕರೆಯಲಾಗಿದೆ.
ಸಭೆಗೆ ತಮ್ಮ ಆಗಮನವನ್ನು ಅಪೇಕ್ಷಿಸಲಾಗಿದೆ.
ಕಾರ್ಯಕ್ರಮಗಳು:-
Ø  ವಾರ್ಷಿಕ ಮಹಾ ಸಭೆ-ನೂತನ ಪದಾಧಿಕಾರಿಗಳ ಆಯ್ಕೆ.
Ø  ವರದಿ-ಆಯವ್ಯಯ ಮಂಡನೆ.
Ø  ಇಂಗ್ಲಿಷ್-ಗಣಿತ ವಿಶೇಷ ತರಗತಿಗಳ ಉದ್ಘಾಟನೆ.


ಸ್ಥಳ: ಚೇವಾರು
ತಾ: 11-7-2017                         ಸಂಚಾಲಕರು

CLUBS INAUGURATION,2017

ಚೇವಾರಿನಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನೆ


ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ವಿವಿಧ ಕ್ಲಬ್ ಗಳ ಉದ್ಘಾಟನಾ ಸಮಾರಂಭ ಜರಗಿತು.ಸ್ಟಾಫ್ ಕಾರ್ಯದರ್ಶಿ,ಚೇವಾರು ವಿನೋದ ಅಧ್ಯಕ್ಷತೆವಹಿಸಿದರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಕ್ಲಬ್ ಗಳನ್ನು ಉದ್ಯಾಟಿಸಿ,ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಕರೆಕೊಟ್ಟರು.ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಪೋಷಿಸುವಲ್ಲಿ ಕ್ಲಬ್ ಚಟುವಟಿಕೆಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಗಳಾದ ಕಲಾ ಶಿಕ್ಷಕ ಪ್ರಕಾಶ್, ಶುಭ ಹಾರೈಸಿದರು.ಶಿಕ್ಷಕರಾದ ರವಿಕುಮಾರ್,ವಿಜಯನ್,ಪ್ರಮೀಳಾ ಡಿ.ಎನ್.ಕ್ಲಬ್ ಸದಸ್ಯರ ಹೆಸರನ್ನು ಘೋಷಿಸಿ,ಚಟುವಟಿಕೆಗಳನ್ನು ವಿವರಿಸಿದರು. ಪುಷ್ಪಲತಾ.ಕೆ.ವಿ ಸ್ವಾಗತಿಸಿದರು.ರಾಜೇಶ್ವರಿ.ಬಿ.ವಂದಿಸಿದರು.ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.

WORLD POPULATION DAY CELEBRATION,2017


ಚೇವಾರಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನವನ್ನುವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಸ್ಟಾಫ್ ಕಾರ್ಯದರ್ಶಿ,ಚೇವಾರು ವಿನೋದ ಅಧ್ಯಕ್ಷತೆವಹಿಸಿ,ಜನಸಂಖ್ಯಾ ನಿಯಂತ್ರಣ ಮಾಡುವ ಅಗತ್ಯತೆಯ ಕುರಿತು ತಿಳಿಸಿದರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಉದ್ಘಾಟಿಸಿ,ಉತ್ತಮ ಸಮಾಜವನ್ನು,ಒಳ್ಳೆಯ ಆರೋಗ್ಯವನ್ನು ಪಡೆಯ ಬೇಕಾದರೆ,ಜನಸಂಖ್ಯಾನಿಯಂತ್ರಣವನ್ನು ಪಾಲಿಸ ಬೇಕಾಗಿದೆ,ಇರುವ ಜನರನ್ನು ದೇಶದ ಶಕ್ತಿಯಾಗಿಸಬೇಕೆಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಗಳಾಗಿ ಕಲಾ ಶಿಕ್ಷಕ ಪ್ರಕಾಶ್.ಶಿಕ್ಷಕರಾದ ರವಿಕುಮಾರ್,ವಿಜಯನ್,ಪ್ರಮೀಳಾ ಡಿ.ಎನ್. ಪುಷ್ಪಲತಾ.ಕೆ.ವಿ ಮಾತನಾಡಿದರು.ಈ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧೆ, ಪ್ರಬಂಧ ಮಂಡನೆ ಏರ್ಪಡಿಸಲಾಯಿತು.ಪ್ರಸಾದ್ ರೈ ಸ್ವಾಗತಿಸಿದರು.ರಾಜೇಶ್ವರಿ.ಬಿ.ವಂದಿಸಿದರು

Thursday, July 6, 2017

ಶಾಲಾ ತೋಟಕ್ಕೆ ಔಷಧೀಯ ಗಿಡದ ಕೊಡುಗೆ

7ನೇ ತರಗತಿಯ ಗೌತಮ್.ಎಸ್ ನ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ತೋಟಕ್ಕೆ ಔಷಧೀಯ ಗಿಡದ ಕೊಡುಗೆ

7ನೇ ತರಗತಿಯ ನವ್ಯಶ್ರೀ ಯಂ.ಆರ್ ಳ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ತೋಟಕ್ಕೆ ಹೂ ಗಿಡದ ಕೊಡುಗೆ