ಚೇವಾರಿನಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನೆ
ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ವಿವಿಧ ಕ್ಲಬ್
ಗಳ ಉದ್ಘಾಟನಾ ಸಮಾರಂಭ ಜರಗಿತು.ಸ್ಟಾಫ್ ಕಾರ್ಯದರ್ಶಿ,ಚೇವಾರು ವಿನೋದ ಅಧ್ಯಕ್ಷತೆವಹಿಸಿದರು.ಶಾಲಾ
ಮುಖ್ಯ ಶಿಕ್ಷಕ ಶ್ಯಾಮ ಭಟ್ ಕ್ಲಬ್ ಗಳನ್ನು ಉದ್ಯಾಟಿಸಿ,ಪಠ್ಯದೊಂದಿಗೆ ಪಠ್ಯೇತರ
ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಕರೆಕೊಟ್ಟರು.ವಿದ್ಯಾರ್ಥಿಗಳಲ್ಲಿರುವ ಸುಪ್ತ
ಪ್ರತಿಭೆಗಳನ್ನು ಗುರುತಿಸಿ, ಪೋಷಿಸುವಲ್ಲಿ ಕ್ಲಬ್ ಚಟುವಟಿಕೆಗಳು ಸಹಕಾರಿ ಎಂದು
ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಗಳಾದ ಕಲಾ ಶಿಕ್ಷಕ ಪ್ರಕಾಶ್, ಶುಭ ಹಾರೈಸಿದರು.ಶಿಕ್ಷಕರಾದ
ರವಿಕುಮಾರ್,ವಿಜಯನ್,ಪ್ರಮೀಳಾ ಡಿ.ಎನ್.ಕ್ಲಬ್ ಸದಸ್ಯರ ಹೆಸರನ್ನು ಘೋಷಿಸಿ,ಚಟುವಟಿಕೆಗಳನ್ನು
ವಿವರಿಸಿದರು. ಪುಷ್ಪಲತಾ.ಕೆ.ವಿ ಸ್ವಾಗತಿಸಿದರು.ರಾಜೇಶ್ವರಿ.ಬಿ.ವಂದಿಸಿದರು.ಪ್ರಸಾದ್ ರೈ
ಕಾರ್ಯಕ್ರಮ ನಿರೂಪಿಸಿದರು.
No comments:
Post a Comment