Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, July 26, 2016

PTA GENERALBODY MEETING



ಚೇವಾರಿನಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ



ಕುಂಬಳೆ:ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಸಂಘ ಹಾಗೂ ಮಾತೃ ರಕ್ಷಕ-ಶಿಕ್ಷಕ ಸಂಘದ ಮಹಾ ಸಭೆ ಜರಗಿತು.ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪೈವಳಿಕೆ ಪಂಚಾಯತು ಸದಸ್ಯರಾದ ಹರೀಶ್ ಬೊಟ್ಟಾರಿಯವರು,ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆಧುನಿಕ ವಿದ್ಯಾಭ್ಯಾಸ ಕ್ರಮ ಸಹಕಾರಿಯಾಗಿದ್ದು,ಸ್ಥಳೀಯ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮಲ್ಲರ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಇಂದಿರಾ ಮಿತ್ತಡ್ಕ,ಶಾಲಾ ಚಟುವಚಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ಯಾಮ ಭಟ್, ಶೈಕ್ಷಣಿಕ ವರದಿಯನ್ನು ಮಂಡಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸ್ಥಳೀಯ ಆರೋಗ್ಯ ಕೇಂದ್ರದ ಅಧಿಕಾರಿ ದಿವ್ಯಾ ಆಗಸ್ಟಿನ್, ವಿದ್ಯಾರ್ಥಿಗಳ ಆರೋಗ್ಯ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಕುಮಾರ ಸುಬ್ರಹ್ಮಣ್ಯ,ಶಾಲಾ ಸಂರಕ್ಷಣಾ ತಂಡದ ಅಧ್ಯಕ್ಷರಾದ ಅಬ್ದುಲ್ ಕೋಯಾ,ಶುಭ ಹಾರೈಸಿದರು.ಮಾಜಿ ವಾರ್ಡ್ ಸದಸ್ಯೆ ಸುಬೈದಾ,ಪುಷ್ಪಾ ಕಮಲಾಕ್ಷ ಉಪಸ್ಥಿತರಿದ್ದರು.ನೂತನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಇಂದಿರಾ ಮಿತ್ತಡ್ಕ,ಉಪಾಧ್ಯಕ್ಷರಾಗಿ ಅಬ್ದುಲ್ ಕೋಯಾಹಾಗೂ ಕುಮಾರ ಸುಬ್ರಹ್ಮಣ್ಯ ಮತ್ತು ಮಾತೃ ಸಂಘದ ಅಧ್ಯಕ್ಷೆಯಾಗಿ ಪುಷ್ಪಾ ಕಮಲಾಕ್ಷ,ಉಪಾಧ್ಯಕ್ಷೆಯಾಗಿ ಪ್ರೇಮಲತಾ ಆನೆಬಾಗಿಲು ಆಯ್ಕೆಗೊಂಡರು. ಶಿಕ್ಷಕಿ ರಾಜೇಶ್ವರಿ ಲೆಕ್ಕಪತ್ರ ಮಂಡಿಸಿದರು.ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಗುರುತು ಪತ್ರಗಳನ್ನು ಹಾಗೂ ಪ್ರಶಸ್ತಿಪತ್ರಗಳನ್ನು ವಿತರಿಸಲಾಯಿತು. ಸ್ಟಾಫ್ ಕಾರ್ಯದರ್ಶಿ ರವಿಕುಮಾರ್ ಸ್ವಾಗತಿಸಿದರು.ಸ್ಕೌಟ್ ಶಿಕ್ಷಕ ವಿನೋದ್ ಕಾರ್ಯಕ್ರಮ ನಿರೂಪಿಸಿದರು.ಪ್ರಮೀಳಾ ವಂದಿಸಿದರು.ಶಿಕ್ಷಕಿ ಸರಸ್ವತಿ.ಬಿ,ಪುಷ್ಪಲತಾ,ಪ್ರಸಾದ್ ರೈ,ವಿಜಯನ್,ರತೀಶ್,ಗೋಪಾಲಕೃಷ್ಣ ಭಟ್ ಸಹಕರಿಸಿದರು.

Friday, July 22, 2016

MOON DAY CELEBRATION


ಚೇವಾರು ಶಾಲೆಯಲ್ಲಿ ಚಾಂದ್ರ ದಿನಾಚರಣೆ




ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ, ವಿಶ್ವ ಚಾಂದ್ರ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಉದ್ಘಾಟಿಸಿ,ಎಳವೆಯಲ್ಲಿಯೇ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಸ್ಛಾಫ್ ಕಾರ್ಯದರ್ಶಿ ರವಿಕುಮಾರ್, ದಿನಾಚರಣೆಯ ಮಹತ್ವವನ್ನು ವಿವರಿಸಿದರು.ಶಿಕ್ಷಕ ಪ್ರಸಾದ್ ರೈ ಹಾಗೂ ಪ್ರಮೀಳಾ ಶುಭ ಹಾರೈಸಿದರು.ನಂತರ ಗಗನಯಾತ್ರಿ ವೇಷಧಾರಿಗಳು ಸಭೆಗೆ ಆಗಮಿಸಿ ಗಗನಯಾತ್ರೆಯ ಅನುಭವಗಳನ್ನು ವಿವರಿಸಿದರು.ತದ ನಂತರ ವಿಜ್ಞಾನ ರಸಪ್ರಶ್ನೆ,ಬಾಹ್ಯಾಕಾಶದ ಕುರಿತಾದ ವೀಡಿಯೋ ಪ್ರದರ್ಶನ,ಪ್ರಬಂಧ ಮಂಡನೆ,ಚಿತ್ರ ರಚನಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.ವಿಜ್ಞಾನ ಸಂಘದ ಸದಸ್ಯರಾದ ತುಷಾರ್ ಸ್ವಾಗತಿಸಿ,ಮಹಮ್ಮದ್ ಅರಾಫತ್ ವಂದಿಸಿದರು.ಜ್ಯೋತಿಕಾ ಕಾರ್ಯಕ್ರಮ ನಿರೂಪಿಸಿದರು.

Wednesday, July 20, 2016

PTA GENERALBODY MEETING-2016-17


PTA MEETING


ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು
ಅಂಚೆ: ಕುಡಾಲುಮೇರ್ಕಳ
 ಮಾನ್ಯರೇ,
                        ನಮ್ಮ ಶಾಲಾ PTA/MPTA/SMC/NMP ಸದಸ್ಯರ ಮಹಾ
                           ಸಭೆಯು ದಿನಾಂಕ 25-07-2016 ನೇ ಸೋಮವಾರ ಅಪರಾಹ್ನ
                            2 ಗಂಟೆಗೆ ಸರಿಯಾಗಿ ಚೇವಾರು ಶಾಲೆಯಲ್ಲಿ ಕರೆಯಲಾಗಿದೆ.
                             ಸಭೆಗೆ ತಮ್ಮ ಆಗಮನವನ್ನು ಅಪೇಕ್ಷಿಸಲಾಗಿದೆ.
                    ಕಾರ್ಯಕ್ರಮಗಳು:-
          ಸ್ವಾಗತ.
                                                           ವರದಿವಾಚನ.
                                                           ಲೆಕ್ಕ ಪತ್ರ ಮಂಡನೆ.
                                                            ನೂತನ ಪದಾಧಿಕಾರಿಗಳ ಆಯ್ಕೆ.
                                                            ಇನ್ನಿತರ ವಿಷಯಗಳು
          ಸ್ಥಳ: ಚೇವಾರು
           ತಾ: 18-7-2016                                                                                ಸಂಚಾಲಕರು

Tuesday, July 19, 2016

AWARDS

1ನೇ ಹಾಗೂ 2ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸರ್ವ ಶಿಕ್ಷಾ ಅಭಿಯಾನವು ಜಿ.ಬಿ.ಎಲ್.ಪಿ.ಎಸ್ ಪೆರ್ಮುದೆಯಲ್ಲಿ ಏರ್ಪಡಿಸಿದ ತುಳು ಭಾಷಾ ಶಿಬಿರದಲ್ಲಿ ಭಾಗವಹಿಸಿ,ಬಹುಮಾನ ಪಡೆದ ನಮ್ಮ ಶಾಲಾ ವಿದ್ಯಾರ್ಥಿಗಳು


Monday, July 18, 2016

YAKSHAGANA TRAINING

ಶಾಲೆಯಲ್ಲಿ ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನೆ
ಆಸಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಯಕ್ಷಗಾನ ನಾಟ್ಯ ತರಬೇತಿ ಶಿಬಿರವು ಶಾಲೆಯಲ್ಲಿ ಆರಂಭಗೊಂಡಿತು.




Tuesday, July 5, 2016

HELPING HAND


ಚೇವಾರು ಶಾಲಾ ವಿದ್ಯಾರ್ಥಿಗಳಿಂದ  ಸಹಾಯ



ಚೇವಾರು: ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು,ಆ ರೀತಿಯಲ್ಲಿ ನೊಂದವರ ಕಣ್ಣೊರಸುವ ಕೆಲಸವನ್ನು ಬಾಲ್ಯದಿಂದಲೇ ನಾವು ಮೈಗೂಡಿಸುತ್ತಾ ಸಮಾಜಮುಖಿಗಳಾಗಬೇಕು ಎಂದು ಶಾಲಾ ಕಲಿಕೆಯ ಮೂಲಕ ತಿಳಿದು ಕೊಂಡ ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲಾ ವಿದ್ಯಾರ್ಥಿಗಳು ಅಶಕ್ತ ಮಕ್ಕಳಿಗೆ ಸಹಾಯ ಮಾಡುವುದರ ಮೂಲಕ ಮಾಡಿ ತೋರಿಸಿದರು. ಪವಿತ್ರ ರಂಜಾನ್ ಹಬ್ಬದ ಆಚರಣೆಯ ಅಂಗವಾಗಿ,ಅಶಕ್ತ ,ಬಡತನಹೊಂದಿರುವ ಸಹಪಾಠಿಗಳಾದ ಚೇವಾರು ಸುದೀಪ್ ಚೌಹಾಣ್,ಮೇರ್ಕಳ ಮೊಹಮ್ಮದ್ ಅನಸ್ ಅವರ ಮನೆಗಳಿಗೆ ಭೇಟಿ ನೀಡಿ ಆಹಾರ ವಸ್ತು,ಬಟ್ಟೆ,ಕಲಿಕೋಪಕರಣ ಕಿಟ್ ನ್ನು ನೀಡಿದರು.ಶಾಲಾ ಉಪನಾಯಕ ಅಬ್ದುಲ್ ನವಾಝ್ ಹಾಗೂ ವಿವಿಧ ತರಗತಿ ನಾಯಕರು ಪಾಲ್ಗೊಂಡರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್,ಸ್ಕೌಟ್ ಅಧ್ಯಾಪಕ ವಿನೋದ್,ಸುಬೈದಾ  ಯಂ.ಪಿ.ಪ್ರಸಾದ್ ರೈ,ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

Monday, July 4, 2016

RAMZAN CELEBRATION-2016-17


ಚೇವಾರಿನಲ್ಲಿ ಮೆಹಂದಿ ಹಾಕುವ ಸ್ಪರ್ಧೆ





ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಂಜಾನ್ ಹಬ್ಬದ ಆಚರಣೆಯ ಅಂಗವಾಗಿಮೆಹಂದಿ ಹಾಕುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು.