ಚೇವಾರಿನಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ
ಕುಂಬಳೆ:ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಸಂಘ
ಹಾಗೂ ಮಾತೃ ರಕ್ಷಕ-ಶಿಕ್ಷಕ ಸಂಘದ ಮಹಾ ಸಭೆ ಜರಗಿತು.ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪೈವಳಿಕೆ
ಪಂಚಾಯತು ಸದಸ್ಯರಾದ ಹರೀಶ್ ಬೊಟ್ಟಾರಿಯವರು,ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆಧುನಿಕ
ವಿದ್ಯಾಭ್ಯಾಸ ಕ್ರಮ ಸಹಕಾರಿಯಾಗಿದ್ದು,ಸ್ಥಳೀಯ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮಲ್ಲರ
ಕರ್ತವ್ಯ ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಇಂದಿರಾ ಮಿತ್ತಡ್ಕ,ಶಾಲಾ
ಚಟುವಚಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ಯಾಮ ಭಟ್, ಶೈಕ್ಷಣಿಕ
ವರದಿಯನ್ನು ಮಂಡಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸ್ಥಳೀಯ ಆರೋಗ್ಯ ಕೇಂದ್ರದ ಅಧಿಕಾರಿ
ದಿವ್ಯಾ ಆಗಸ್ಟಿನ್, ವಿದ್ಯಾರ್ಥಿಗಳ ಆರೋಗ್ಯ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.ಶಾಲಾ ರಕ್ಷಕ
ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಕುಮಾರ ಸುಬ್ರಹ್ಮಣ್ಯ,ಶಾಲಾ ಸಂರಕ್ಷಣಾ ತಂಡದ ಅಧ್ಯಕ್ಷರಾದ
ಅಬ್ದುಲ್ ಕೋಯಾ,ಶುಭ ಹಾರೈಸಿದರು.ಮಾಜಿ ವಾರ್ಡ್ ಸದಸ್ಯೆ ಸುಬೈದಾ,ಪುಷ್ಪಾ ಕಮಲಾಕ್ಷ
ಉಪಸ್ಥಿತರಿದ್ದರು.ನೂತನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಇಂದಿರಾ ಮಿತ್ತಡ್ಕ,ಉಪಾಧ್ಯಕ್ಷರಾಗಿ
ಅಬ್ದುಲ್ ಕೋಯಾಹಾಗೂ ಕುಮಾರ ಸುಬ್ರಹ್ಮಣ್ಯ ಮತ್ತು ಮಾತೃ ಸಂಘದ ಅಧ್ಯಕ್ಷೆಯಾಗಿ ಪುಷ್ಪಾ
ಕಮಲಾಕ್ಷ,ಉಪಾಧ್ಯಕ್ಷೆಯಾಗಿ ಪ್ರೇಮಲತಾ ಆನೆಬಾಗಿಲು ಆಯ್ಕೆಗೊಂಡರು. ಶಿಕ್ಷಕಿ ರಾಜೇಶ್ವರಿ
ಲೆಕ್ಕಪತ್ರ ಮಂಡಿಸಿದರು.ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಗುರುತು ಪತ್ರಗಳನ್ನು ಹಾಗೂ
ಪ್ರಶಸ್ತಿಪತ್ರಗಳನ್ನು ವಿತರಿಸಲಾಯಿತು. ಸ್ಟಾಫ್ ಕಾರ್ಯದರ್ಶಿ ರವಿಕುಮಾರ್
ಸ್ವಾಗತಿಸಿದರು.ಸ್ಕೌಟ್ ಶಿಕ್ಷಕ ವಿನೋದ್ ಕಾರ್ಯಕ್ರಮ ನಿರೂಪಿಸಿದರು.ಪ್ರಮೀಳಾ ವಂದಿಸಿದರು.ಶಿಕ್ಷಕಿ
ಸರಸ್ವತಿ.ಬಿ,ಪುಷ್ಪಲತಾ,ಪ್ರಸಾದ್ ರೈ,ವಿಜಯನ್,ರತೀಶ್,ಗೋಪಾಲಕೃಷ್ಣ ಭಟ್ ಸಹಕರಿಸಿದರು.
No comments:
Post a Comment