ಚೇವಾರು ಶಾಲೆಯಲ್ಲಿ ಚಾಂದ್ರ ದಿನಾಚರಣೆ
ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ, ವಿಶ್ವ
ಚಾಂದ್ರ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಲಾ ಮುಖ್ಯ
ಶಿಕ್ಷಕ ಶ್ಯಾಮ ಭಟ್ ಉದ್ಘಾಟಿಸಿ,ಎಳವೆಯಲ್ಲಿಯೇ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಬೇಕೆಂದು
ವಿದ್ಯಾರ್ಥಿಗಳಿಗೆ ಕರೆಕೊಟ್ಟರು.ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಸ್ಛಾಫ್ ಕಾರ್ಯದರ್ಶಿ
ರವಿಕುಮಾರ್, ದಿನಾಚರಣೆಯ ಮಹತ್ವವನ್ನು ವಿವರಿಸಿದರು.ಶಿಕ್ಷಕ ಪ್ರಸಾದ್ ರೈ ಹಾಗೂ ಪ್ರಮೀಳಾ ಶುಭ
ಹಾರೈಸಿದರು.ನಂತರ ಗಗನಯಾತ್ರಿ ವೇಷಧಾರಿಗಳು ಸಭೆಗೆ ಆಗಮಿಸಿ ಗಗನಯಾತ್ರೆಯ ಅನುಭವಗಳನ್ನು
ವಿವರಿಸಿದರು.ತದ ನಂತರ ವಿಜ್ಞಾನ ರಸಪ್ರಶ್ನೆ,ಬಾಹ್ಯಾಕಾಶದ ಕುರಿತಾದ ವೀಡಿಯೋ ಪ್ರದರ್ಶನ,ಪ್ರಬಂಧ
ಮಂಡನೆ,ಚಿತ್ರ ರಚನಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.ವಿಜ್ಞಾನ ಸಂಘದ ಸದಸ್ಯರಾದ ತುಷಾರ್
ಸ್ವಾಗತಿಸಿ,ಮಹಮ್ಮದ್ ಅರಾಫತ್ ವಂದಿಸಿದರು.ಜ್ಯೋತಿಕಾ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment