Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, September 28, 2015

AWARD

ಗಣಿತ ಸೆಮಿನಾರ್-2015
ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ಸೆಮಿನಾರ್ ನಲ್ಲಿ ತೃತೀಯ ಸ್ಥಾನ ಪಡೆದ ಚೇವಾರು ಶಾಲಾ ವಿದ್ಯಾರ್ಥಿನಿ ಜ್ಯೋತಿಕಾ ಸಿ.ಟಿ.

Tuesday, September 22, 2015

MICHEL FAREDAY BIRTH DAY



ಸೆಪ್ಟೆಂಬರ್  22ಮೈಕಲ್ ಫ್ಯಾರಡೆ ಜನ್ಮ ದಿನ


ವಿದ್ಯುಚ್ಛಕ್ತಿ ಮನುಷ್ಯನ ಮುಖ್ಯ ಆವಶ್ಯಕತೆಗಳಲ್ಲಿ ಒಂದು.ವಿದ್ಯುತ್ಕಾಂತೀಯ ಪ್ರೇರಣೆ ತತ್ವದ ಆಧಾರದಲ್ಲಿ ವಿದ್ಯುತ್ ಜನಕಗಳು ವಿದ್ಯುತ್ ಉತ್ಪಾದನೆ ಮಾಡುತ್ತವೆ.ಈತತ್ವವನ್ನು ನಿರೂಪಿಸಿದವನೇ ಮೈಕಲ್ ಫ್ಯಾರಡೆ.1771ರ ಸೆಪ್ಟೆಂಬರ್ 22ರಂದು ಮೈಕಲ್ ಫ್ಯಾರಡೆ,ಇಂಗ್ಲೆಂಡಿನ ನ್ಯೂಯಿಂಗ್ ಟನ್ ಎಂಬಲ್ಲಿ ಕಮ್ಮಾರನ ಮಗನಾಗಿ ಜನಿಸಿದನು.ವಿಜ್ಞಾನದಲ್ಲಿ ಅವನಿಗೆ ಆಸಕ್ತಿ ಅಪಾರ.ಅನೇಕ ವೈಜ್ಞಾನಿಕ ಪುಸ್ತಕಗಳನ್ನು ಓದಿದ.ಹಂಫ್ರಿ ಡೇವಿಯಿಂದ ಪ್ರಭಾವಿತನಾದ.ಕಾಂತದಿಂದ ವಿದ್ಯುತ್ ತಯಾರಿಸ ಬಹುದೆಂದು ಕಂಡುಹಿಡಿದ.ಇದಕ್ಕಾಗಿ ಡೈನಮೋ ವನ್ನು ತಯಾರಿಸಿದ.1834ರಲ್ಲಿ ವಿದ್ಯುತ್ ವಿಭಜನೆ ತತ್ವ ರೂಪಿಸಿದ.
1867ರ ಆಗಸ್ಟ್ 25ರಂದು ಅಸುನೀಗಿದ. ಮೈಕಲ್ ಫ್ಯಾರಡೆಯ ಸಂಶೋಧನೆಯಫಲವನ್ನು ಇಂದು ಇಡೀ ಜಗತ್ತು ಅನುಭವಿಸುತ್ತಿದೆ. ಮೈಕಲ್ ಫ್ಯಾರಡೆಯ ಸ್ಮರಣೆಗೆಂದು ವಿದ್ಯುತ್ ಮೂಲ ಮಾನಗಳನ್ನು ಅವನ ಹೆಸರಿನಿಂದ ಕರೆಯಲಾಗುತ್ತಿದೆ.

Friday, September 18, 2015

ಇಂಜಿನಿಯರ್ ಗಳ ದಿನ


ಸೆಪ್ಟೆಂಬರ್-15 ರಾಷ್ಟ್ರೀಯ ಇಂಜಿನಿಯರ್ ಗಳ ದಿನ
                         ಭಾರತದ ಅಸಂಖ್ಯ ಭೂಪ್ರದೇಶಕ್ಕೆ ನೀರು ಹರಿಸಿದ ಭಗೀರಥನಾಗಿ,ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಶಿಕ್ಷಣ ನೀಡಲು ಶ್ರಮಿಸಿದ ಶಿಕ್ಷಣತಜ್ಞನಾಗಿ,ಬ್ರಿಟಿಷರ ಕಾಲದಲ್ಲೇ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಹರಿಕಾರನಾಗಿ ನಾಡಿನ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದವರು,ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ.ಅವರ ಜನ್ಮ ದಿನ ವನ್ನು ಇಂಜಿನಿಯರ್ ಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ಮೈಸೂರಿನ ದಿವಾನರೂ,ಮುಖ್ಯ ಇಂಜಿನಿಯರ್ ಆಗಿದ್ದ,ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು 1860ರ ಸೆಪ್ಟೆಂಬರ್-15ರಂದು ಕೋಲಾರದ ಮುದ್ದೇನ ಹಳ್ಳಿಯಲ್ಲಿ ಜನಿಸಿದರು. ತಂದೆ ಶ್ರೀನಿವಾಸ ಶಾಸ್ತ್ರಿ,ತಾಯಿ ವೆಂಕಟ ಲಕ್ಷ್ಮಿ.
ಇಂದು ಇಂಜಿನಿಯರ್ಸ್ ಡೇ..
ಶಿಕ್ಷಣ ತಜ್ಞರಾಗಿ,ಕೈಗಾರಿಕಾ ಕ್ರಾಂತಿಯ ಹರಿಕಾರರಾಗಿ,ಆರ್ಥಿಕ ಪ್ರಗತಿಯಮಾರ್ಗದರ್ಶಕರಾಗಿ,ಅನೇಕ ಕ್ಷೇತ್ರಗಳಲ್ಲಿ ಬಹಲಷ್ಟು ಕೆಲಸಮಾಡಿ,102 ವರ್ಷಗಳ ಕಾಲ ಸ್ವಚ್ಛ ಸುಂದರ ಬದುಕನ್ನು ನಡೆಸಿದ ಅಪ್ರತಿಮ ದೇಶಭಕ್ತ,ಚತುರ ಇಂಜಿನಿಯರ್,ದಕ್ಷ ಆಡಳಿತಗಾರ,ಪ್ರಾಮಾಣಿಕ ಸಹೃದಯಿ ಸರ್.ಎಂ ವಿಶ್ವೇಶ್ವರಯ್ಯ ಅವರ 155ನೇ ಹುಟ್ಟು ಹಬ್ಬವನ್ನುಇಂಜಿನಿಯರ್ಸ್ ಡೇ, ಎಂದು ದೇಶಾದ್ಯಂತ ಆಚರಿಸಲಾಗುತ್ತಿದೆ.

OZONE DAY


ಸೆಪ್ಟೆಂಬರ್-16 ವಿಶ್ವ ಓಝೋನ್ ದಿನ
ಮ್ಮ ಭೂಮಿಯು, ಜೀವಿಗಳಿರುವ ಏಕೈಕ ಸುಂದರ ಗ್ರಹವಾಗಿದೆ.ಸೂರ್ಯನನ್ನುಕೇಂದ್ರವಾಗಿರಿಸಿಕೊಂಡು ಇತರ ಗ್ರಹಗಳೊಂದಿಗೆ ಸೌರವ್ಯೂಹದಲ್ಲಿ ಸುತ್ತುಬರುತ್ತಿದೆ. ಭೂಮಿಗೆ ಒಂದು ವ್ಯವಸ್ಥಿತವಾದ ವಾತಾವರಣವಿದೆ.ಈ ವಾತಾವರಣವು . ಭೂಮಿಯ ಮೇಲಿರುವ ಜೀವಜಾಲಗಳನ್ನು ರಕ್ಷಿಸಿ ಪೋಷಿಸುತ್ತದೆ. ಈ ವಾತಾವರಣದಲ್ಲಿ ಓಝೋನ್ ಎಂಬ ವಿಶಿಷ್ಟವಾದ ಒಂದು ಅನಿಲ ಪದರವಿದೆ.ಈ ಓಝೋನ್ ಪದರವು ಸೂರ್ಯನಿಂದ ಬರುವ ನೇರಳಾತೀತಕಿರಣಗಳಲ್ಲಿರುವ ಹಾನಿಕಾರಕ ವಿಕಿರಣಗಳನ್ನುತಡೆದು ಭೂಮಿಗೆ ಬೀಳದಂತೆ ಮಾಡುತ್ತದೆ. ಈ ಹಾನಿಕಾರಕ ವಿಕಿರಣಗಳು, ನಿರಂತರವಾಗಿ ಮನುಷ್ಯನ ಮೈಮೇಲೆ ಬಿದ್ದಲ್ಲಿ, ಚರ್ಮದ ಕ್ಯಾನ್ಸರ್ ನಂತಹ ರೋಗಗಳು ಉಂಟಾಗಬಹುದು.ಇದು ಜೀವಜಾಲಗಳ ನಾಶಕ್ಕೂ ನಾಂದಿಯಾಗಬಹುದು.                                           ಇಂದು ಮನುಷ್ಯನ ಲೋಭದಿಂದಾಗಿ ಈ ಓಝೋನ್ ಪದರವು ನಾಶವಾಗುತ್ತಿದೆ.ರೆಫ್ರಿಜರೇಟರ್,ಕೃತಕ ಸುಗಂಧದ್ರವ್ಯಗಳು ಏ.ಸಿ,,ಶೇವಿಂಗ್ ಕ್ರೀಮ್ ಮುಂತಾದವುಗಳ ಉಪಯೋಗ ದಿಂದ ಉಂಟಾಗುವ ಕ್ಲೋರೋಫ್ಲೋರೋಕಾರ್ಬನ್ ಓಝೋನ್ ಪದರವನ್ನು ತೆಳ್ಳಗಾಗಿಸುತ್ತದೆ. ಕ್ಲೋರೋಫ್ಲೋರೋಕಾರ್ಬನ್ ನ ಉತ್ಪಾದನೆಯನ್ನು ನಿಯಂತ್ರಿಸಲು, 1989ರ ಜನವರಿ 1ರಂದು ಜಗತ್ತಿನ 29 ರಾಷ್ಟ್ರಗಲು ಮಾಂಟ್ರಿಯಾಲ್ ಒಪ್ಪಂದವನ್ನು ಜಾರಿ ಮಾಡಿದವು ಈಎಲ್ಲಾ ದೇಶಗಳು 82%ದಷ್ಟು ಒಪ್ಪಂದ ಬಾಧಿಸುವ ವಸ್ತುಗಳನ್ನು ಉಪಯೋಗಿಸುತ್ತಿದ್ದವು.1992ರ ಸೆಪ್ಟೆಂಬರ್ 17 ರಂದು ಭಾರತವು ಈ ಒಪ್ಪಂದಕ್ಕೆ ಸಹಿ ಹಾಕಿತು.
ನಮ್ಮ ಜೀವ ಉಳಿಸುವ ಆಮ್ಲಜನಕದ ಇನ್ನೊಂದು ರೂಪವಾದ ಓಝೋನ್ ನ ರಾಸಾಯನಿಕ ರೂಪ O3.ವಾತಾವರಣದಲ್ಲಿ ಕೇವಲ 0.01% ಮಾತ್ರ ಓಝೋನ್ ಇದೆ.ಇದನ್ನು ಉಳಿಸಿ ಜೀವರಾಶಿಗಳನ್ನು ರಕ್ಷಿಸಬೇಕಾದುದು ನಮ್ಮೆಲ್ಲರ ಕರ್ತವ್ಯ.

Monday, September 7, 2015

WORLD LITERACY DAY



ಸೆಪ್ಟೆಂಬರ್ 8,ವಿಶ್ವ ಸಾಕ್ಷರತಾ ದಿನ





ಪ್ರಪಂಚದಲ್ಲಿರುವ ಜೀವಿಗಳಲ್ಲಿ,ಹೆಚ್ಚು ಬುದ್ಧಿವಂತಿಕೆ ಇರುವುದು ಮನುಷ್ಯನಿಗೆ.ಮನುಷ್ಯ, ಸಂವಹನಕ್ಕಾಗಿ ಭಾಷೆಯನ್ನು ಬಳಸಿದ.ಇನ್ನೂ ಹೆಚ್ಚಿನ ಜ್ಞಾನ ಸಂಪಾದನೆಗಾಗಿ,ಓದಲು,ಬರೆಯಲು,ಅಕ್ಷರಗಳನ್ನುಪಯೋಗಿಸಿದ.ಇಂದು ಜಗತ್ತಿನಲ್ಲಿ,ಅನೇಕ ಭಾಷೆಗಳನ್ನು ಬಳಸಲಾಗುತ್ತಿದೆ.ಮನುಷ್ಯನಿಗೆ ಯಾವುದಾದರೂ ಒಂದು ಭಾಷೆಯಲ್ಲಿ, ಓದಲು,ಬರೆಯಲು,ಅರ್ಥೈಸಲು ಸಾಧ್ಯವಾದರೆ ಅವನನ್ನು ಸಾಕ್ಷರ ಎಂದು ಪರಿಗಣಿಸಲಾಗುತ್ತದೆ.
ಇಂದು ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು,ಜನರು ಸಾಕ್ಷರರಾಗಿ,ವಿದ್ಯಾವಂತರಾಗಲು ಸಾಕಷ್ಟು ಅವಕಾಶಗಳಿವೆ.
ಭಾರತದಲ್ಲಿ ಕೇರಳ ರಾಜ್ಯವು ಸಾಕ್ಷರತೆಯಲ್ಲಿ ಮುಂದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಆದರೂ ನಮ್ಮ ದೇಶದಲ್ಲಿ,ಬಡತನದಿಂದಾಗಿ,ಎಷ್ಟೋ ಜನರು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ನಾವೆಲ್ಲರೂ ಸಾಕ್ಷರ ಸಮಾಜವನ್ನು ನಿರ್ಮಿಸುವಲ್ಲಿ ಶ್ರಮಿಸೋಣ

Sunday, September 6, 2015

TEACHER'S DAY CELEBRATION IN OUR SCHOOL


ಚೇವಾರು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಅಧ್ಯಕ್ಷೀಯ ಭಾಷಣ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ರಿಂದ
ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಸಭಾಕಾರ್ಯಕ್ರಮದ ಪೈವಳಿಕೆ ಪಂಚಾಯತು ಸದಸ್ಯೆ ಶ್ರೀಮತಿ ಸುಬೈದಾ ಯಂ.ಪಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷ ಸ್ಥಾನವನ್ನು ಮುಖ್ಯಶಿಕ್ಷಕ ಶ್ರೀ ಶ್ಯಾಮಭಟ್,ವಹಿಸಿ,ದಿನದ ಮಹತ್ವವನ್ನು ವಿವರಿಸಿದರು.ಇದೇ ಸಂದರ್ಭದಲ್ಲಿ  ವಿದ್ಯಾರ್ಥಿಗಳು, ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದರು.ಹಿರಿಯ ಶಿಕ್ಷಕಿ ಶ್ರೀಮತಿ ಸರಸ್ವತಿ.ಬಿ. ಸ್ವಾಗತಿಸಿದರು.ರವಿಕುಮಾರ್ ವಂದಿಸಿದರು.ಚೇವಾರು ವಿನೋದ ಕಾರ್ಯಕ್ರಮವನ್ನು ನಿರೂಪಿಸಿದರು.6ನೇ ತರಗತಿಯ ಕುಮಾರಿ ವಿಂಧ್ಯಾ,ಎಲ್ಲಾ ಶಿಕ್ಷಕರಿಗೂ,ಬಹುಮಾನ ನೀಡಿ ಶುಭ ಹಾರೈಸಿದಳು.
ಕಾರ್ಯಕ್ರಮದ ಉದ್ಘಾಟನೆ ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾ ರಿಂದ