ಸೆಪ್ಟೆಂಬರ್ 6, ರಾಷ್ಟ್ರ ಕವಿ ಗೋವಿಂದ ಪೈ ಸಂಸ್ಮರಣಾ ದಿನ
|
ಗಡಿನಾಡಿನ ಕನ್ನಡದ ಕಂಪನ್ನು ,ರಾಷ್ಟ್ರದಾದ್ಯಂತ ಪಸರಿಸಿದ,ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ
ಪೈಯವರು 1883ರ ಮಾರ್ಚ್ 23ರಂದು ದೇವಕಿ ಹಾಗೂ ತಿಮ್ಮಪೈಯವರ ಮಗನಾಗಿ ಜನಿಸಿದರು.ಕರ್ನಾಟಕದಲ್ಲಿ
ಶಿಕ್ಷಣ ಮುಗಿಸಿ,ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿಇಂಗ್ಲಿಷ್ ಪದವಿ ಪಡೆದರು.
1949ರಲ್ಲಿ, ಗೋವಿಂದ ಪೈಯವರಿಗೆ, ಮದರಾಸು ಸರಕಾರ ದಕ್ಷಿಣ ಬಾರತೀಯ ಭಾಷೆಗಳಲ್ಲಿ ರಾಷ್ಟ್ರ
ಕವಿ ಬಿರುದು ನೀಡಿ ಗೌರವಿಸಿತು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪೈಯವರ ಕೊಡುಗೆ ಅಪಾರ.22ಕ್ಕೂ ಭಾಷೆಗಳನ್ನು
ಬಲ್ಲ,ಪೈಯವರು12ನೇ ವಯಸ್ಸಿನಲ್ಲೇ ಸಾಹಿತ್ಯ ಕ್ಷೇತ್ರಕ್ಕೆ ಧುಮುಕಿದವರು.ಅವರ ಮೊದಲ ಕವಿತೆ
ಸುವಾಸಿನಿ.ಹಲೆಯನಾರು,ಹಿಂದೂಸ್ಥಾನ್ ಹಮಾರಾ,ಗಿಳಿವಿಂಡು,ನಂದಾ
ದೀಪ,ಗೋಲ್ಗೋಥಾ,ವೈಶಾಖಿ,ಪ್ರಭಾಸ,ಹೆಬ್ಬೆರಳು,ಚಿತ್ರಭಾನು,ಕನ್ನಡದ ಮೊರೆ,ಶ್ರೀ ಕೃಷ್ಮ
ಚರಿತ್ರೆ,ದೆಹಲಿ ಖಂಡ ಕಾವ್ಯಮುಂತಾದ ಕೃತಿಗಳನ್ನು ಬರೆದರು.
1963ರ ಸೆಪ್ಟೆಂಬರ್ 6ರಂದು ಇಹ ಲೋಕ ತ್ಯಜಿಸಿದರು.
No comments:
Post a Comment