ಸೆಪ್ಟೆಂಬರ್ 8,ವಿಶ್ವ ಸಾಕ್ಷರತಾ ದಿನ
|
||
ಪ್ರಪಂಚದಲ್ಲಿರುವ ಜೀವಿಗಳಲ್ಲಿ,ಹೆಚ್ಚು
ಬುದ್ಧಿವಂತಿಕೆ ಇರುವುದು ಮನುಷ್ಯನಿಗೆ.ಮನುಷ್ಯ, ಸಂವಹನಕ್ಕಾಗಿ ಭಾಷೆಯನ್ನು ಬಳಸಿದ.ಇನ್ನೂ
ಹೆಚ್ಚಿನ ಜ್ಞಾನ ಸಂಪಾದನೆಗಾಗಿ,ಓದಲು,ಬರೆಯಲು,ಅಕ್ಷರಗಳನ್ನುಪಯೋಗಿಸಿದ.ಇಂದು
ಜಗತ್ತಿನಲ್ಲಿ,ಅನೇಕ ಭಾಷೆಗಳನ್ನು ಬಳಸಲಾಗುತ್ತಿದೆ.ಮನುಷ್ಯನಿಗೆ ಯಾವುದಾದರೂ ಒಂದು ಭಾಷೆಯಲ್ಲಿ,
ಓದಲು,ಬರೆಯಲು,ಅರ್ಥೈಸಲು ಸಾಧ್ಯವಾದರೆ ಅವನನ್ನು ಸಾಕ್ಷರ ಎಂದು ಪರಿಗಣಿಸಲಾಗುತ್ತದೆ.
ಇಂದು ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಸಾಕಷ್ಟು
ಬದಲಾವಣೆಗಳಾಗಿದ್ದು,ಜನರು ಸಾಕ್ಷರರಾಗಿ,ವಿದ್ಯಾವಂತರಾಗಲು ಸಾಕಷ್ಟು ಅವಕಾಶಗಳಿವೆ.
ಭಾರತದಲ್ಲಿ ಕೇರಳ ರಾಜ್ಯವು ಸಾಕ್ಷರತೆಯಲ್ಲಿ
ಮುಂದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಆದರೂ ನಮ್ಮ ದೇಶದಲ್ಲಿ,ಬಡತನದಿಂದಾಗಿ,ಎಷ್ಟೋ
ಜನರು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ನಾವೆಲ್ಲರೂ ಸಾಕ್ಷರ ಸಮಾಜವನ್ನು
ನಿರ್ಮಿಸುವಲ್ಲಿ ಶ್ರಮಿಸೋಣ
|
Monday, September 7, 2015
WORLD LITERACY DAY
Subscribe to:
Post Comments (Atom)
No comments:
Post a Comment