Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, March 28, 2017

INVITATION SCHOOL DEVELOPMENT SEMINAR-2017

SHRI SHARADA A.U.P.SCHOOL CHEVAR
ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು
 P.O.Kudalmerkala.,Manjeshwara Sub Dist,kasaragod Dist.Kerala,PIN:671324,Ph:04998-205170
Mob:9496358310,E-Mail:chevar11264@gmail.com,Blog:www.11264ssaupschevar.blogspot.in

ಶಾಲಾ ಅಭಿವೃದ್ಧಿ ಸೆಮಿನಾರ್
ತಾ: 31-3-2017,2.30pm              ಸ್ಥಳ:ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು
ಆತ್ಮೀಯರೇ,
 ಒಂಭತ್ತು ದಶಕಗಳಿಂದ ಸುದೀರ್ಘವಾಗಿ ವಿದ್ಯಾದಾನಗೈಯುತ್ತಾ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳನ್ನು, ಜ್ಞಾನ ಲೋಕದೆಡೆಗೆ,ಉಜ್ವಲ ಭವಿಷ್ಯದೆಡೆಗೆ ಕೈ ಹಿಡಿದು ನಡೆಸಿದ ವಿದ್ಯಾಲಯವಾಗಿದೆ, ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು.
1926 ರಲ್ಲಿ ಪ್ರಾರಂಭಗೊಂಡು 91 ವರ್ಷಗಳನ್ನು ಪೂರೈಸಿದ ಈ ಸುಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ಸಾಕಾರಗೊಳಿಸಬೇಕಾದ ಸಮಯ ಸನ್ನಿಹಿತವಾಗಿದೆ.
ಶತಮಾನೋತ್ಸವದೆಡೆಗೆ ಧಾವಿಸುತ್ತಿರುವ ನಮ್ಮೂರ ಶಾಲೆ,ನಮ್ಮೆಲ್ಲರ ಅಭಿಮಾನದ ಶಾಲೆಯ ಸಮಗ್ರ ಅಭಿವೃದ್ಧಿಯ ಹಿನ್ನೆಲೆಯಲ್ಲಿ,ಶಾಲಾ ಅಭಿವೃದ್ಧಿ ರೂಪುರೇಷೆ ತಯಾರಿಸಲು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ರೂಪೀಕರಿಸಲು ಇದೇ ಬರುವ ತಾರೀಕು 31-3-2017ನೇ ಶುಕ್ರವಾರದಂದು ಮಧ್ಯಾಹ್ನ 2.30 ಕ್ಕೆ  ಸಭೆಯನ್ನು ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ತಾವೆಲ್ಲರೂ ಈ ಸಭೆಯಲ್ಲಿ ಭಾಗವಹಿಸಿ, ವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತಿದ್ದೇವೆ.
ಉದ್ಘಾಟನೆ      :  ಎ.ಕೆ.ಯಂ.ಅಶ್ರಫ್
                                                               ಅಧ್ಯಕ್ಷರು,ಮಂಜೇಶ್ವರ ಬ್ಲಾಕ್ ಪಂಚಾಯತು.
                                                                   
ಇತೀ
ಶಾಲಾ ರಕ್ಷಕ ಶಿಕ್ಷಕ ಸಂಘ                 ಶಾಲಾ ವ್ಯವಸ್ಥಾಪಕರು                                     ಶಾಲಾ ಮುಖ್ಯೋಪಾಧ್ಯಾಯರು
ಮಾತೃ ರಕ್ಷಕ ಶಿಕ್ಷಕ ಸಂಘ             ಶಾಲಾ ಹಳೆ ವಿದ್ಯಾರ್ಥಿ ಸಂಘ                         ಶಿಕ್ಷಕ ಶಿಕ್ಷಕೇತರ ವೃಂದ    
ತಾ:27-3-2017
ಸ್ಥಳ:ಚೇವಾರು


Monday, March 27, 2017

SCIENCE FEST CELEBRATION

ಚೇವಾರು ಶಾಲೆಯಲ್ಲಿ ವಿಜ್ಞಾನೋತ್ಸವ

ಮಂಜೇಶ್ವರ : ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವ ಶಿಕ್ಷಾ ಅಭಿಯಾನದ ಯೋಜನೆಯಂಗವಾಗಿ ನಡೆದ ವಿಜ್ಞಾನ ಉತ್ಸವ ಕಾರ್ಯಕ್ರಮವನ್ನು ಪೈವಳಿಕೆ ಗ್ರಾಮ ಪಂಚಾಯತು ಸದಸ್ಯರಾದ ಹರೀಶ್ ಬೊಟ್ಟಾರಿ ಉದ್ಘಾಟಿಸಿದರು..ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್, ಬಾಲ್ಯದಲ್ಲಿಯೇ ವಿಜ್ಢಾನದಲ್ಲಿ ಆಸಕ್ತಿ ವಹಿಸುವ ಮೂಲಕ ಭಾರತವನ್ನು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಬೇಕೆಂದು ಕರೆಕೊಟ್ಟರು.  .ಮಾಜಿ ವಾರ್ಡ್ ಸದಸ್ಯೆ ಸುಬೈದಾ.ಯಂ.ಪಿ. ಶಿಕ್ಷಕರಾದ ವಿನೋದ್ ಚೇವಾರ್,ವಿಜಯನ್ ಹಾಗೂ ಶಿಕ್ಷಕಿ ರಶ್ಮಿ  ಶುಭಾಶಂಸನೆಗೈದರು.ಎಂ.ಪಿ.ಟಿ.ಎ.ಸದಸ್ಯೆ ಯಶೋದಾ ಉಪಸ್ಥಿತರಿದ್ದರು.
ನಂತರ ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಪ್ರಾಯೋಗಿಕ ಚಟುವಚಿಕೆಗಳನ್ನು ನಡೆಸಲಾಯಿತು. ರವಿಕುಮಾರ್ ಸ್ವಾಗತಿಸಿದರು.ಶಾಲಾ ನಾಯಕಿ ಜ್ಯೋತಿಕಾ ವಂದಿಸಿದರು.ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.


HELLO ENGLISH PROGRAMME

ಚೇವಾರು ಶಾಲೆಯಲ್ಲಿ ಹಲೋ ಇಂಗ್ಲಿಷ್


ಉದ್ಘಾಟನೆ ವಾರ್ಡ್ ಸದಸ್ಯರಾದ ಶ್ರೀ ಹರೀಶ್ ಬೊಟ್ಟಾರಿಯವರಿಂದ

ಮಂಜೇಶ್ವರ : ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವ ಶಿಕ್ಷಾ ಅಭಿಯಾನದ ಯೋಜನೆಯಂಗವಾಗಿ ನಡೆದ ಹಲೋ ಇಂಗ್ಲಿಷ್ ಕಾರ್ಯಕ್ರಮವನ್ನು ಪೈವಳಿಕೆ ಗ್ರಾಮ ಪಂಚಾಯತು ಸದಸ್ಯರಾದ ಹರೀಶ್ ಬೊಟ್ಟಾರಿ ಉದ್ಘಾಟಿಸಿದರು.ಎಳವೆಯಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವುದರೊಂದಿಗೆ,ಇಂಗ್ಲಿಷ್ ಭಾಷೆಯಲ್ಲಿ ಪ್ರೌಢಿಮೆಹೊಂದಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.ಪಿ.ಟಿ.ಎ.ಅಧ್ಯಕ್ಷೆ ಇಂದಿರಾ ಮಿತ್ತಡ್ಕ ಅಧ್ಯಕ್ಷತೆ ವಹಿಸಿದರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಮಾಜಿ ವಾರ್ಡ್ ಸದಸ್ಯೆ ಸುಬೈದಾ.ಯಂ.ಪಿ.ಹಾಗೂ ಶಿಕ್ಷಕ ರವಿಕುಮಾರ್ ಶುಭಾಶಂಸನೆಗೈದರು.

ನಂತರ ಇಂಗ್ಲಿಷ್ ಭಾಷಾ ಸಂವಹನಕ್ಕೆ ಸಂಬಂಧಿಸಿದ ವಿವಿಧ ಚಟುವಚಿಕೆಗಳನ್ನು ನಡೆಸಲಾಯಿತು. ಶಿಕ್ಷಕಿ ಪುಷ್ಪಲತಾ ಸ್ವಾಗತಿಸಿದರು.ಸರಸ್ವತಿ.ಬಿ.ವಂದಿಸಿದರು.ರಾಜೇಶ್ವರಿ,ಬಿ. ಕಾರ್ಯಕ್ರಮ ನಿರೂಪಿಸಿದರು.ಸಂಪನ್ಮೂಲ ವ್ಯಕ್ತಿ ವಿನೋದ್ ಚೇವಾರ್ ಉಪಸ್ಥಿತರಿದ್ದರು.ವಿಜಯನ್,,ಕವಿತಾ, ಗೋಪಾಲ ಕೃಷ್ಣ ಭಟ್, ಸಹಕರಿಸಿದರು.

Thursday, March 16, 2017

School day cultural Programmes7ನೇ ತರಗತಿ ವಿದ್ಯಾರ್ಥಿನಿಯರಾದ ವಿಂದ್ಯಾ ಕೆ,ಗೀತಾಂಜಲಿ,ನವ್ಯಶ್ರೀ, ಜೈನಬುಲ್ ಓಫಿಯತ್,ಅನುಜಾಕ್ಷಿ,ಸ್ವಾತಿ,ಹಸೀನಾ ಬಾನು


Wednesday, March 1, 2017

SCHOOL DAY-Cultural programme

Goutham S,VI Std

Jyothika VII Std

Poornima VI Std

Thejashree V Std

Chinmayi.S IV Std

Amrutha III Std

Thushar VII Std

SCHOOL DAY CELEBRATION

ಶಾಲಾ ವಾರ್ಷಿಕೋತ್ಸವದ ಉದ್ಘಾಟನೆ

ಶಾಲಾ ವಸ್ತು ಪ್ರದರ್ಶನದ ಉದ್ಘಾಟನೆ
ಶಾಲಾ ಹಿರಿಮೆ ಉತ್ಸವ ಉದ್ಘಾಟನಾ ಸಮಾರಂಭ
ಕರ್ನಾಟಕ ಸರಕಾರದ ಸಾಮಾಜಿಕ ಕಲ್ಯಾಣ ಅಭಿವೃದ್ಧಿ ನಿಗಮದ ಅಧ್ಯಕ್ಷೆ ದಿವ್ಯ ಪ್ರಭಾ ಚಿಲ್ತಡ್ಕ ಅವರಿಂದ ಶಾಲಾ ಹಿರಿಮೆ ಉತ್ಸವದ ಉದ್ಘಾಟನೆ