ಚೇವಾರು ಶಾಲೆಯಲ್ಲಿ ಹಲೋ ಇಂಗ್ಲಿಷ್
ಉದ್ಘಾಟನೆ ವಾರ್ಡ್ ಸದಸ್ಯರಾದ ಶ್ರೀ ಹರೀಶ್ ಬೊಟ್ಟಾರಿಯವರಿಂದ |
ಮಂಜೇಶ್ವರ : ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವ ಶಿಕ್ಷಾ ಅಭಿಯಾನದ ಯೋಜನೆಯಂಗವಾಗಿ
ನಡೆದ ಹಲೋ ಇಂಗ್ಲಿಷ್ ಕಾರ್ಯಕ್ರಮವನ್ನು ಪೈವಳಿಕೆ ಗ್ರಾಮ ಪಂಚಾಯತು ಸದಸ್ಯರಾದ ಹರೀಶ್ ಬೊಟ್ಟಾರಿ
ಉದ್ಘಾಟಿಸಿದರು.ಎಳವೆಯಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವುದರೊಂದಿಗೆ,ಇಂಗ್ಲಿಷ್
ಭಾಷೆಯಲ್ಲಿ ಪ್ರೌಢಿಮೆಹೊಂದಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು
ಅಭಿಪ್ರಾಯಪಟ್ಟರು.ಪಿ.ಟಿ.ಎ.ಅಧ್ಯಕ್ಷೆ ಇಂದಿರಾ ಮಿತ್ತಡ್ಕ ಅಧ್ಯಕ್ಷತೆ ವಹಿಸಿದರು.ಶಾಲಾ ಮುಖ್ಯ
ಶಿಕ್ಷಕ ಶ್ಯಾಮ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಮಾಜಿ ವಾರ್ಡ್ ಸದಸ್ಯೆ
ಸುಬೈದಾ.ಯಂ.ಪಿ.ಹಾಗೂ ಶಿಕ್ಷಕ ರವಿಕುಮಾರ್ ಶುಭಾಶಂಸನೆಗೈದರು.
ನಂತರ ಇಂಗ್ಲಿಷ್ ಭಾಷಾ ಸಂವಹನಕ್ಕೆ ಸಂಬಂಧಿಸಿದ ವಿವಿಧ ಚಟುವಚಿಕೆಗಳನ್ನು ನಡೆಸಲಾಯಿತು.
ಶಿಕ್ಷಕಿ ಪುಷ್ಪಲತಾ ಸ್ವಾಗತಿಸಿದರು.ಸರಸ್ವತಿ.ಬಿ.ವಂದಿಸಿದರು.ರಾಜೇಶ್ವರಿ,ಬಿ. ಕಾರ್ಯಕ್ರಮ
ನಿರೂಪಿಸಿದರು.ಸಂಪನ್ಮೂಲ ವ್ಯಕ್ತಿ ವಿನೋದ್ ಚೇವಾರ್ ಉಪಸ್ಥಿತರಿದ್ದರು.ವಿಜಯನ್,,ಕವಿತಾ, ಗೋಪಾಲ
ಕೃಷ್ಣ ಭಟ್, ಸಹಕರಿಸಿದರು.
No comments:
Post a Comment