ಚೇವಾರು ಶಾಲೆಯಲ್ಲಿ ವಿಜ್ಞಾನೋತ್ಸವ
ಮಂಜೇಶ್ವರ : ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವ ಶಿಕ್ಷಾ ಅಭಿಯಾನದ ಯೋಜನೆಯಂಗವಾಗಿ
ನಡೆದ ವಿಜ್ಞಾನ ಉತ್ಸವ ಕಾರ್ಯಕ್ರಮವನ್ನು ಪೈವಳಿಕೆ ಗ್ರಾಮ ಪಂಚಾಯತು ಸದಸ್ಯರಾದ ಹರೀಶ್ ಬೊಟ್ಟಾರಿ
ಉದ್ಘಾಟಿಸಿದರು..ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್,
ಬಾಲ್ಯದಲ್ಲಿಯೇ ವಿಜ್ಢಾನದಲ್ಲಿ ಆಸಕ್ತಿ ವಹಿಸುವ ಮೂಲಕ ಭಾರತವನ್ನು ವಿಜ್ಞಾನ ತಂತ್ರಜ್ಞಾನ
ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಬೇಕೆಂದು ಕರೆಕೊಟ್ಟರು. .ಮಾಜಿ ವಾರ್ಡ್ ಸದಸ್ಯೆ ಸುಬೈದಾ.ಯಂ.ಪಿ. ಶಿಕ್ಷಕರಾದ
ವಿನೋದ್ ಚೇವಾರ್,ವಿಜಯನ್ ಹಾಗೂ ಶಿಕ್ಷಕಿ ರಶ್ಮಿ ಶುಭಾಶಂಸನೆಗೈದರು.ಎಂ.ಪಿ.ಟಿ.ಎ.ಸದಸ್ಯೆ ಯಶೋದಾ
ಉಪಸ್ಥಿತರಿದ್ದರು.
ನಂತರ ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಪ್ರಾಯೋಗಿಕ ಚಟುವಚಿಕೆಗಳನ್ನು ನಡೆಸಲಾಯಿತು.
ರವಿಕುಮಾರ್ ಸ್ವಾಗತಿಸಿದರು.ಶಾಲಾ ನಾಯಕಿ ಜ್ಯೋತಿಕಾ ವಂದಿಸಿದರು.ಪ್ರಸಾದ್ ರೈ ಕಾರ್ಯಕ್ರಮ
ನಿರೂಪಿಸಿದರು.
No comments:
Post a Comment