ಫೆಬ್ರವರಿ 12 ಅಬ್ರಹಾಂ ಲಿಂಕನ್ ಜನ್ಮ ದಿನ
ಅಬ್ರಹಾಂ ಲಿಂಕನ್ |
ಅಮೇರಿಕಾದಲ್ಲಿ ಕರಿಯರಿಗೆ ಶಾಪವಾಗಿದ್ದ ಗುಲಾಮ ಗಿರಿಯನ್ನು ವರ್ಣಭೇದ ನೀತಿಯನ್ನು ತೊಲಗಿಸಲು
ಹೋರಾಡಿದ ಧೀರೋದ್ದಾತ ನಾಯಕ ಅಬ್ರಹಾಂ ಲಿಂಕನ್.1809ರ ಫೆಬ್ರವರಿ 12ರಂದು ಕೆಂಟಕಿಯ ಸಾಮಾನ್ಯ
ಕುಟುಂಬದಲ್ಲಿ ಜನಿಸಿದರು.ತಂದೆ ಥಾಮಸ್ ಲಿಂಕನ್ ಬಡಗಿಯಾಗಿದ್ದರು. ಅಬ್ರಹಾಂ ಲಿಂಕನ್ ಶಾಲೆಯಲ್ಲಿ
ಶಾಸ್ತ್ರೋಕ್ತ ಶಿಕ್ಷಣ ಪಡೆದವರಲ್ಲ.ಗೆಳೆಯರಿಂದ ಎರವಲಾಗಿ ಪುಸ್ತಕಗಳನ್ನು ಪಡೆದು ಬೀದಿ ದೀಪದ
ಬೆಳಕಿನಲ್ಲಿ ಓದಿದವರು.ಜೀವನ ಸಾಗಿಸಲು ವಿವಿಧ ವೃತ್ತಿಗಳನ್ನು ಮಾಡಿದರು.ಕೇವಲ 25ರ ಹರಯದಲ್ಲಿ
ಇಲಿನಾಯ್ಸ್ ಶಾಸನ ಸಭೆಗೆ ಆಯ್ಕೆಯಾದರು.
ಅಬ್ರಹಾಂ ಲಿಂಕನ್ ಖಾಸಗಿಯಾಗಿ ಲಾ ಕಲಿತರು.ಕೆಲ ಕಾಲ ವಕೀಲರಾಗಿದ್ದು,ನಂತರ ರಿಪಬ್ಲಿಕನ್
ಚಳವಳಿಗೆ ಧುಮುಕಿದರು.1860ರಲ್ಲಿ ಅಮೇರಿಕಾದ
ಅಧ್ಯಕ್ಷರಾಗಿ ಆಯ್ಕೆಯಾದರು. ಗುಲಾಮ ಗಿರಿಯನ್ನು ನಿವಾರಿಸುವುದು ಅವರ ಮೊದಲ ಗುರಿಯಗಿತ್ತು.
No comments:
Post a Comment