ಫೆಬ್ರವರಿ 13 ವಿಶ್ವ
ರೇಡಿಯೋ ದಿನ
ರೇಡಿಯೋ, ಒಂದು ಜನಾನುರಾಗಿ ಮಾಧ್ಯಮ.ಮಾರ್ಕೋನಿ ಎಂಬ ವಿಜ್ಞಾನಿ,ನಿಸ್ತಂತು ಸಂದೇಶ ಕಳುಹಿಸಲು
ಆವಿಷ್ಕರಿಸಿದ ಸಾಧನವೇ ರೇಡಿಯೋ.1895 ರಲ್ಲಿ ಮೊದಲ ರೇಡಿಯೋ ಸಂದೇಶವನ್ನು ಕಳುಹಿಸುವ ಮೂಲಕ
ರೇಡಿಯೋ ಎಂಬ ಅದ್ಭುತ ಉಪಕರಣದ ಜನನ ವಾಯಿತು.1835ರಲ್ಲಿ ಕೂಕ್ ಎಂಬ ವಿಜ್ಞಾನಿ ಕಂಡುಹಿಡಿದ
ಟೆಲಿಗ್ರಾಫ್,ರೇಡಿಯೋದ ಆವಿಷ್ಕಾರಕ್ಕೆ ನಾಂದಿಯಾಯಿತು.
ಭಾರತದಲ್ಲಿ 1927ರಲ್ಲಿ ಮುಂಬೈಯಲ್ಲಿ ಖಾಸಗಿಯಾಗಿ ರೇಡಿಯೋ ಆರಂಭವಾಯಿತು.1936ರಲ್ಲಿ
ಆಕಾಶವಾಣಿಯಲ್ಲಿ ವಾರ್ತಾ ಸಂಚಿಕೆ ಆರಂಭವಾಯಿತು.ಬಹು ಜನ ಹಿತಾಯ ಬಹು ಜನ ಸುಖಾಯ ಎಂಬುದು
ಆಕಾಶವಾಣಿಯ ಧ್ಯೇಯ ವಾಕ್ಯ.
ಇಂದು ದೂರ ದರ್ಶನ,ಇಂಟರ್ ನೆಟ್ಗಳ ಭರಾಟೆಯಲ್ಲಿಯೂ,ರೇಡಿಯೋ ತನ್ನ ಪ್ರಾಮುಖ್ಯತೆಯನ್ನು
ಉಳಿಸಿಕೊಂಡಿದೆ.
No comments:
Post a Comment