ಚೇವಾರು: ಶಾಲಾ ಸಂರಕ್ಷಣಾ ಸಮಿತಿ ರೂಪೀಕರಣ
|
ನಿರೂಪಣೆ-ವಿನೋದ ಮಾಸ್ಟರ್ ರಿಂದ |
|
ಮುಖ್ಯ ಶಿಕ್ಷಕ ಶ್ಯಮ ಭಟ್ ರಿಂದ ಸ್ವಾಗತ |
|
ಆರೋಗ್ಯಾಧಿಕಾರಿ-ಮಧುಸೂಧನ್ ರಿಂದ ಭಾಷಣ |
|
ವಾರ್ಡ್ ಮೆಂಬರ್ ಸುಬೈದಾ ರಿಂದ ಉದ್ಘಾಟನೆ |
|
ಶಂಕರ ನಾರಾಯಣ ಭಟ್ ರಿಂದ ಭಾಷಣ |
|
ವಂದನಾರ್ಪಣೆ-ಪ್ರಸಾದ್ ರೈ ರಿಂದ |
ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲಾ ಸಂರಕ್ಷಣಾ ಸಮಿತಿ ರೂಪೀಕರಿಸುವ ಸಲುವಾಗಿ
05-02-2015ರಂದು ಕರೆದ ಸಭೆಯಲ್ಲಿ ಸುಮಾರು 50 ಮಂದಿಯಷ್ಟು ಶಾಲಾ ಹಿತೈಷಿಗಳು,ಸ್ಥಳೀಯ ಮುಖಂಡರು,ಯುವಕರು,ರಕ್ಷಕರು,ಶಿಕ್ಷಕರು ಭಾಗವಹಿಸಿದ್ದು, ಚೇವಾರು ವಾರ್ಡ್ ಮೆಂಬರ್, ಪೈವಳಿಕೆ
ಪಂಚಾಯತು ಸದಸ್ಯರಾದ ಸುಬೈದಾ ಎಂ.ಪಿ., ಸಭೆಯನ್ನು ಉದ್ಘಾಟಿಸಿ,ಶಾಲೆಯು ಸಮಾಜದ ಆಸ್ತಿ.ಇದನ್ನು
ಉಳಿಸಿ ಬೆಳೆಸಬೇಕಾದುದು ಸಮಾಜ ಬಾಂಧವರ ಕರ್ತವ್ಯ.ಇದನ್ನು ಜಾತಿ ಮತ ಭೇದವಿಲ್ಲದೆ ಎಲ್ಲರೂ
ಒಗ್ಗಟ್ಟಿನಿಂದ ನಿರ್ವಹಿಸಬೇಕೆಂದು ಕರೆ ಕೊಟ್ಟರು.ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ
ಪಿ.ಟಿ.ಎ. ಅಧ್ಯಕ್ಷ ಪರಮೇಶ್ವರ ಪಾವಲುಕೋಡಿ,ಶಾಲೆಯು ಸಮಾಜದ ದೇಗುಲವಾಗಿದ್ದು ಪವಿತ್ರ
ಸ್ಥಾನವಾಗಿದೆ.ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಅಭಿಪ್ರಾಯ ಪಟ್ಟರು.ಮುಖ್ಯ ಅತಿಥಿಗಳಾಗಿ
ಭಾಗವಹಿಸಿದ ಶಾಲಾ ವ್ಯವಸ್ಥಾಪಕ ಪ್ರತಿನಿಧಿ ಪೈವಳಿಕೆ ಸರಕಾರಿ ಶಾಲಾ ಅಧ್ಯಾಪಕ ಶಂಕರ ನಾರಾಯಣ ಭಟ್
ಮಾತನಾಡಿ,ಶಾಲೆಯು ಸಮಾಜದ ಕನ್ನಡಿ ಇದ್ದಂತೆ.ಶಾಲೆಯು ಉತ್ತಮವಾಗಿದ್ದರೆ ,ಸಮಾಜವು
ಉತ್ತಮವಾಗಿರುತ್ತದೆ.ಸಮಾಜ ಉತ್ತಮವಾಗಿದ್ದರೆ ಶಾಲೆಯು ಉತ್ತಮವಾಗಿರುತ್ತದೆ.ಸಮಾಜ ಹೇಗಿದೆ ಎಂಬುದು
ಅಲ್ಲಿರುವ ಶಾಲೆಯಿಂದ ತಿಳಿಯುತ್ತದೆ.ಶಾಲೆಯು ನಮ್ಮೆಲ್ಲರ ಸ್ವಂತ ಆಸ್ತಿ ಎಂದು
ತಿಳಿದಲ್ಲಿ,ತನ್ನಿಂದ ತಾನೆ ಅದರ ರಕ್ಷಣೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಅತಿಥಿಗಳಾಗಿ
ಭಾಗವಹಿಸಿದ ಶಾಲಾ ಎಂ.ಪಿ.ಟಿ.ಎ.ಅಧ್ಯಕ್ಷೆ ಇಂದಿರಾ ಮಿತ್ತಡ್ಕ, ಪಿ.ಟಿ.ಎ.ಉಪಾಧ್ಯಕ್ಷ,ಪೈವಳಿಕೆ
ವಿದ್ಯುತ್ ನಿಗಮದ ಅಸಿಸ್ಟೆಂಟ್ ಇಂಜಿನಿಯರ್ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು, ಶಾಲಾ
ಸಂರಕ್ಷಣೆ,ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಿದರು.ಇದೇ ಸಂದರ್ಭದಲ್ಲಿ ಪೈವಳಿಕೆ ಪಂಚಾಯತು ಆರೋಗ್ಯ
ಇಲಾಖೆಯ ಅಧಿಕಾರಿ ಮಧುಸೂದನ್, ರಕ್ಷಕರು ಮಕ್ಕಳ ಆರೋಗ್ಯ,ಶುಚಿತ್ವದ ಕುರಿತು ಹೇಗೆ ಜಾಗ್ರತೆ ವಹಿಸಬೇಕೆಂದು ವಿವರಣೆ ನೀಡಿದರು. ಇಂದಿನ
ಯುವಕರು ಮಾದಕ ವಸ್ತುಗಳಗೆ ಆಕರ್ಷಿತರಾಗುತ್ತಿದ್ದು ತಮ್ಮ ಆರೋಗ್ಯವನ್ನು ಕೆಡಿಸುತ್ತಿರುವುದನ್ನು
ತಪ್ಪಿಸುವುದು ಸಮಾಜದಲ್ಲಿರುವ ನಮ್ಮೆಲ್ಲರ ಹೊಣೆ ಎಂದರು.ಚೇವಾರು ಆರೋಗ್ಯ ಇಲಾಖೆಯ ಸಹಾಯಕಿ ಉಪಸ್ಥಿತರಿದ್ದರು.ಈ
ಸಂದರ್ಭದಲ್ಲಿ 15 ಸದಸ್ಯರನ್ನೊಳಗೊಂಡ ಶಾಲಾ ಸಂರಕ್ಷಣಾ ಸಮಿತಿಯನ್ನು ರೂಪೀಕರಿಸಲಾಯಿತು ಶಾಲಾ
ಮುಖ್ಯೋಪಾಧ್ಯಯ ಶ್ಯಾಮ ಭಟ್ ಸ್ವಾಗತಿಸಿದರು. ಸ್ಕೌಟ್ ಅಧ್ಯಾಪಕ ವಿನೋದ್ ಕಾರ್ಯಕ್ರಮ
ನಿರೂಪಿಸಿದರು.ಪ್ರಸಾದ್ ರೈ ವಂದಿಸಿದರು.ಸರಸ್ವತಿ,ರಾಜೇಶ್ವರಿ,ವಿಜಯನ್,ರವಿ ಕುಮಾರ್
ಪುಷ್ಪಲತಾ,ಗೋಪಾಲ ಕೃಷ್ಣ ಭಟ್ ಸಹಕರಿಸಿದರು.ಮಾಯಿಪ್ಪಾಡಿ ಟಿ.ಟಿ.ಸಿ. ವಿದ್ಯಾರ್ಥಿನಿಯರು
ಉಪಸ್ಥಿತರಿದ್ದರು.
No comments:
Post a Comment